ಜನಮೆಚ್ಚುಗೆ ಪಡೆದ ಜಿಲ್ಲಾಧಿಕಾರಿ ನಿತೇಶ ಪಾಟೀಲ!

Share the Post Now

ಬೆಳಗಾವಿ ಜಿಲ್ಲೆ, ಜನರು ತಮ್ಮ ವೈಯಕ್ತಿಕ ಸಮಸ್ಯೆ ತೆಗೆದುಕೊಂಡು ಬರುವ ಜನರಿಗೆ ಅಕ್ಷರದ ಜ್ಞಾನ ಬಂಢಾರ ನೀಡುವ ಕಾಯಕದಲ್ಲಿ ಈ ಎರಡೂ ಕಚೇರಿಗಳು ಮುಂಚೂಣಿಯಲ್ಲಿದ್ದು ಜಿಲ್ಲಾಧಿಕಾರಿ ನಿತೇಶ ಪಾಟೀಲ ನಡೆಗೆ ಇಡೀ ಜಿಲ್ಲೆಯ ಜನಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ

ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ ಕಚೇರಿಗೆ ಬರುವ ಜನರು ತಮ್ಮ ಸಮಸ್ಯೆ ಹೇಳಿಕೊಂಡು‌ ಬರುತ್ತಿದ್ದರು. ಆದರೆ ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಓ ತಮ್ಮ ಕೆಲಸದ ಒತ್ತಡದ ನಡುವೆ ( ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವುದರ) ಸರಕಾರದ ಸೌಲಭ್ಯ ಅನುಷ್ಠಾನಗೊಳಿಸುವಲ್ಲಿ ಒತ್ತಡದಲ್ಲಿರುತ್ತಾರೆ.

ತಮ್ಮ ಕಚೇರಿಗೆ ದೂರು ದುಮ್ಮಾನ ಸಲ್ಲಿಸುವ ಜನರಿಗೆ ಜ್ಞಾನ ಬಂಢಾರ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಪಂ ಸಿಇಓ ಕಚೇರಿಯ ಮುಂಭಾಗದಲ್ಲಿ ಚಿಕ್ಕದಾಗಿರುವ ಹಾಗೂ ಹೈಟೆಕ್ ಗ್ರಂಥಾಲಯ ‌ನಿರ್ಮಾಣ ಮಾಡಿ ಜಿಲ್ಲೆಯ ಜನರಿಗೆ ಸರಸ್ವತಿ ( ವಿದ್ಯಾ ಧಾನ )ಮಾಡುತ್ತಿರುವುದು ಬೆಳಗಾವಿ ಜನರ ಮೆಚ್ವುಗೆಗೆ ಪಾತ್ರವಾಗಿದೆ ಜಿಲ್ಲಾಧಿಕಾರಿ ಅವರು ಬೆಳಗಾವಿ ಜಿಲ್ಲೆಯ

ಜಿಲ್ಲಾಧಿಕಾರಿ ಆದ ಹೊತ್ತಿನಿಂದ ವಿಶೇಷ ಕಾರ್ಯಕ್ರಮಗಳ ಮೂಲಕ ಜನ ಮನ್ನಣೆ ಪಡೆಯುತ್ತಾ ಬಂದಿದ್ದಾರೆ .

 

ನಮ್ಮ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೆ ನಿತ್ಯ ನೂರಾರು ಜನರು ತಮ್ಮ ದೂರು ಅಥವಾ ಇನ್ನಿತರೇ ಕೆಲಸಕ್ಕೆ ಆಗಮಿಸಿದಾಗ ಅವರಿಗೆ ಕುಳಿತುಕೊಳ್ಳಲು ಸುಸಜ್ಜಿತವಾದ ಆಸನಗಳ ವ್ಯವಸ್ಥೆ ಮಾಡಿದ್ದೇವೆ ,ಅವರಿಗಾಗಿಗೆ ಚಿಕ್ಕದಾಗಿ ಚೊಕ್ಕದಾಗಿ ಗ್ರಂಥಾಲಯ ನಿರ್ಮಾಣಮಾಡಿದ್ದೆವೆ ನಮ್ಮ ಕಛೇರಿಗೆ ಬರುವ ಜನರಿಗೆ ಮನವಿ ಮಾಡಿದ್ದೇವೆ ಹೂವು ಹಾರ ಶಾಲಗಳನ್ನು ತರುವ ಬದಲು ಪುಸ್ತಕ ತೆಗೆದುಕೊಂಡು ಬನ್ನಿ ಎಂದು ಕಾರಣ ಇಷ್ಟೆ ಧಾನಗಳಲ್ಲಿ ಶ್ರೇಷ್ಠ ಧಾನ ವಿದ್ಯಾಧಾನ ಎಲ್ಲಾರೂ ಓದಿನೊಂದಿಗೆ ವಿಷಯ ತಿಳಿದುಕೋಳ್ಳಬೇಕು, ಬೆಳಗಾವಿ ಭಾಗದ ಸುಪ್ರಸಿದ್ಧ ಪ್ರವಾಸಿ ಸ್ಥಳಗಳ ಕುರಿತು ಬುಕಲೇಟಗಳನ್ನು ಇಡಲಾಗಿದೆ ಇದರ ಸದುಪಯೋಗ ಆಗಬೇಕು ಎಂದು ಹರ್ಷ ವ್ಯಕ್ತಪಡಿಸಿದರು.

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಇವಾಗ ಸರಸ್ವತಿ ಮಂದಿರವಾಗಿ ನಿರ್ಮಾಣವಾಗಿದೆ ಕಾರಣ ಕಛೇರಿಗಳಿಗೆ ದಿನನಿತ್ಯ ಜನರು ತಮ್ಮ ದೂರು ಅಥವಾ ಇನ್ನಿತರೇ ಕೆಲಸಕ್ಕೆ ಬಂದಾಗ ಅಧಿಕಾರಿ ಬರುವಿಕೆಗೆ ಕಾದು ಸುಸ್ತಾಗುತ್ತಾರೆ ಆದರೆ ಇ ರೀತಿ ವಾತಾವರಣ ನಿರ್ಮಾಣವಾದಾಗ ಕುಳಿತ ಸಮಯ ಓದಿನೊಂದಿಗೆ ಟೈಮ್ ಪಾಸ್ ಆಗುವುದು ಜನಕ್ಕೆ ಖುಷಿಯಾಗಿದೆ ಇಂತಹ ಅಭಿವೃದ್ಧಿ ಕಾರ್ಯ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಆಗಬೇಕೆಂದು ಸಲಹೆ ನೀಡಿದರು.

ಕಛೇರಿಗೆ ಬರುವ ಜನರಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ ಜಿಲ್ಲಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಿತೇಶ್ ಪಾಟೀಲ ಬೆಳಗಾವಿ ಜಿಲ್ಲಾಧಿಕಾರಿಯಾಗಿ ನಿಯುಕ್ತಿಗೊಂಡಾಗಿನಿಂದ ಹೂವಿನ ಗೂಚ್ಚ ಹಾಗೂ ಉಡುಗೊರೆಯನ್ನು ಸ್ವಿಕರಿಸುವುದು ಸಂಪೂರ್ಣವಾಗಿ ‌ನಿಷೇಧ ಮಾಡಿದ್ದಾರೆ. ಅವರ ಭೇಟಿಗೆ ಬರುವ ಜನರು ಡಿಸಿ ಅವರಿಗೆ ಸಾಹಿತ್ಯ, ಸಿದ್ಧಾಂತ ಶಿಖಾಮಣಿ , ಬಸವೇಶ್ವರ, ಪ್ರವಾಸೋದ್ಯಮ, ಸಂವಿಧಾನದ ಪುಸ್ತಕ ‌ನೀಡುತ್ತಾರೆ. ಅವುಗಳನ್ನು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಮಿನಿ ಗ್ರಂಥಾಲಯದಲ್ಲಿ ಸಾರ್ವಜನಿಕರಿಗೆ ಓದಲು ಇಟ್ಟಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಇದ್ದರೆ ಇಂತಹ ಖಡಕ್ ಡಿಸಿ ಇರಬೇಕೆಂದು ಜಿಲ್ಲೆಯ ಜನತೆ ಶ್ಲಾಘನೀಯ ವ್ಯಕ್ತ ಪಡಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!