ವರದಿ: ಸಂಜೀವ ಬ್ಯಾಕುಡೆ, ಕುಡಚಿ
ರಾಯಬಾಗ ತಾಲೂಕಿನ ಮೊರಬ 110/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಕವಿಪ್ರನಿನಿ ಶುಕ್ರವಾರ ನವೆಂಬರ್ 22ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ 110ಕೆ.ವಿ ಜಿ.ಓ.ಎಸ್, ಸಿ.ಟಿ, ಪಿ.ಟಿ, ಪರಿವರ್ತಕಗಳು ಮತ್ತು ಎಲ್ಲಾ 11ಕೆ.ವಿ ಜಿ.ಓ.ಎಸ್ ಗಳ ನಿರ್ವಹಣೆ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊರಬ 110/11ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಮಾರ್ಗದ 11ಕೆ.ವಿ ಎಫ್-1 ಭಿರಡಿ ತೋಟ, ಎಫ್-2 ಪಡಲಾಳೆ ತೋಟ, ಎಫ್-3 ಬಾನೆ ಸರಕಾರ ತೋಟ, ಎಫ್-4 ಪಟ್ಟಣದಾರ ತೋಟ, ಎಫ್-5 ಬಂತೆ ತೋಟ, ಎಫ್-6 ಮಗದುಮ್ ತೋಟ, ಎಫ್-7 ಧೋಮಾಳೆ ತೋಟ, ಎಫ್-8 ದೇವರಸಿ ತೋಟ, ಎಫ್-9 ಶಾಂಡಗೆ ತೋಟ, ಎಫ್-10 ಸಪ್ತ ಸಾಗರ ತೋಟ, ಎಫ್-11 ಮೊರಬ ಯನ್. ಜೆ .ವಾಯ, ಎಫ್-12 ಕದಮವಾಡಿ ಈ ಎಲ್ಲ ಮಾರ್ಗಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6ರ ವರೆಗೆ ವಿದ್ಯುತ್ ವ್ಯತ್ಯಯ ವಾಗಲಿದ್ದು ರೈತರು ಗ್ರಾಹಕರು ಸಹಕರಿಸುವಂತೆ ಸಹಾಯಕ ಅಭಿಯಂತರರು ತಿಳಿಸಿದ್ದಾರೆ ಎಂದು ಯಲ್ಪಾರಟ್ಟಿ ಶಾಖಾಧಿಕಾರಿ ಸೋಮಶೇಖರ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.