ಬೆಳಗಾವಿ.
ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ 110ಕೆವಿ ವಿದ್ಯುತ್ ಉಪಕೇಂದ್ರ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
110ಕೆವಿ ವಿದ್ಯುತ್ ವಿತರಣಾ ಕೇಂದ್ರ ಕ.ವಿ.ಪ್ರ.ನಿ.ನಿ ಯಲಾರಟ್ಟಿಯಲ್ಲಿ ಪರಿವರ್ತಕ ಮತ್ತು ಉಪಕರಣಗಳ ತ್ರೈಮಾಸಿಕ ನಿರ್ವಹಣೆ ಹಿನ್ನೆಲೆಯಲ್ಲಿ ಉಪಕೇಂದ್ರದ 33 ಕೆವಿ & 11ಕೆವಿ ವಿದ್ಯುತ್ ಮಾರ್ಗಗಳಿಗೆ ಗುರುವಾರ ನವೆಂಬರ್ 28ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು ರೈತರು ಹಾಗೂ ಗ್ರಾಹಕರು ಸಹಕರಿಸುವಂತೆ ಉಪಕೇಂದ್ರದ ಸಹಾಯಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ಯಲ್ಪಾರಟ್ಟಿ ಶಾಖಾಧಿಕಾರಿ ಸೋಮಶೇಖರ್ ಕಾಂಬಳೆ ಮಾಹಿತಿ ನೀಡಿದ್ದಾರೆ.