ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲ್ಲೂಕಿನ ಖೇಮಲಾಪುರ ಗ್ರಾಮದ ಸಾಹಿತಿ ಹಾಗೂ ಪ್ರಾಧ್ಯಾಪಕ ಡಾ.ಜಯವೀರ ಎ.ಕೆ.ಅವರ ಸುಪುತ್ರಿ, ಪರಮಾನಂದವಾಡಿಯ ಶ್ರೀ ಗುರು ಸಿದ್ದೇಶ್ವರ ಅನುದಾನಿತ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕು.ಪ್ರಜ್ಞಾ ಜಯವೀರ ಕಾಂಬಳೆ, ಪ್ರಸಕ್ತ ಸಾಲಿಗೆ ತಾಲ್ಲೂಕಿನ ಮೇಖಳಿಯ ಆದರ್ಶ ವಸತಿ ಶಾಲೆಗೆ ಮೊದಲ ಸುತ್ತಿನಲ್ಲಿಯೇ ಆಯ್ಕೆಯಾಗಿದ್ದಾಳೆ.ಗ್ರಾಮೀಣ ಭಾಗದಲ್ಲಿ ವಿದ್ಯಾಭ್ಯಾಸ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಈ ಅಪೂರ್ವ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ಪ್ರತಿಭಾವಂತ ವಿದ್ಯಾರ್ಥಿನಿ ಕು.ಪ್ರಜ್ಞಾಳ ಸಾಧನೆಗೆ ಶಾಲೆಯ ಮುಖ್ಯೋಪಾಧ್ಯಾಯರು,ಸಮಸ್ತ ಶಿಕ್ಷಕ ಸಿಬ್ಬಂದಿ ಹಾಗೂ ಮಗುವಿನ ಪಾಲಕರು ತುಂಬು ಹೃದಯದಿಂದ ಅಭಿನಂದಿಸಿದ್ದಾರೆ.
ವರದಿ:~ಡಾ.ಜಯವೀರ ಎ.ಕೆ*.
*ಖೇಮಲಾಪುರ*





