ಆನೇಕಲ್: ತಾಲ್ಲೂಕಿನ ದಾಸನಪುರದ ದಲಿತ ಯುವಕ ಸುರೇಶ್ ಅವರ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರು ವಿಫಲರಾಗಿದ್ದು, ಈ ಪ್ರಕರಣದ ತನಿಖೆಯನ್ನು ಸಿಒಡಿಗೆ ವಹಿಸಬೇಕು ಎಂದು ಆಗ್ರಹಿಸಿದ ಭಾರತೀಯ ಭೀಮ್ ಸೇನೆ ಪ್ರವಾಸ ಮಂದಿರ ಪ್ರೆಸ್ ಮೀಟ್ ಮಾಡುವ ಮಾಧ್ಯಮದ ಹೇಳಿಕೆ ನೀಡಿದರು
ಭಾರತೀಯ ಬೀಮ್ ಸೇನೆಯ ರಾಜ್ಯ ಉಪಾಧ್ಯಕ್ಷರಾದ ಪ್ರಕಾಶ ಕಪನೂರ್ ಮಾತನಾಡಿ, ದಾಸನಪುರದ ಯುವಕ ಸುರೇಶ್ ಕೊಲೆಯಾಗಿ 4 ವರ್ಷ ಕಳೆದರೂ, ಈ ಕೃತ್ಯವೆಸಗಿದವರನ್ನು ಪತ್ತೆ ಹಚ್ಚವಲ್ಲಿ ಪೊಲೀಸ್ ವಿಫಲ ರಾಗಿದ್ದಾರೆ ಈ ಪ್ರಕರಣದ ತನಿಖೆಗೆ ಚುರುಕು ನೀಡುವ ಅಗತ್ಯವಿದೆ ಇದನ್ನು ಸಿಒಡಿ ತನಿಖೆಗೆ ನೀಡಬೇಕು ಇಲ್ಲ ವಾದಲ್ಲಿ ಸರ್ಕಾರದ ವಿರುದ್ಧ ಮುಂದಿನ ದಿನದಲ್ಲಿ ರಾಜ್ಯ ಜಿಲ್ಲಾ ತಾಲೂಕು ಆಧ್ಯಾಂತ ಉಗ್ರ ಹೋರಾಟದ ಎಚ್ಚರಿಕೆ ಸಹ ನೀಡಿದರು
ಕೊಲೆ ಪ್ರಕರಣದ ತನಿಖೆ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ. ಎಂದು ನೇರವಾಗಿ ಪೊಲೀಸರ ಮೇಲೆ ನೇರವಾಗಿ ಆರೋಪ ಈ ಕೊಲೆ ಪ್ರಕರಣವನ್ನು ಪೊಲೀಸರು ಅಪಘಾತ ಎನ್ನುತ್ತಿದ್ದಾರೆ. ಆದರೆ, ಕೊಲೆಯಾದ ಸುರೇಶ್ ನಿಗೆ ಬೆನ್ನಿಗೆ ಬಲವಾದ ಪೆಟ್ಟು ಮತ್ತು ಕುತ್ತೆಗೆ ಗಾಯದ ಗುರುತುಗಳಿವೆ. ಈ ಘಟನೆ ಸಂಭವಿಸಿ ನಾಲ್ಕು ವರ್ಷಗಳಾದರೂ ಪೊಲೀಸರು
ಈವರೆಗೆ ಚಾರ್ಜ್ ಶೀಟ್ ಸಹ ದಾಖಲಿಸಿಲ್ಲ. ಹೀಗಾಗಿ, ಪೊಲೀಸರ ಮೇಲೆ ನಂಬಿಕೆಯೇ ಹೋಗಿದೆ ನಮಗೆ ನ್ಯಾಯ ಬೇಕು ನಮಗೆ ಪೊಲೀಸರ ಮೇಲೆ ಅನುಮಾನ ವ್ಯಕ್ತವಾಗುತ್ತಿದೆ. ಆರೋಪಿಗಳ ಪತ್ತೆಗೆ ಒತ್ತಾಯಿಸಿ ಗೃಹ ಸಚಿವರಿಗೆ ಮನವಿ ಸಹ ನಮ್ಮ ಸಂಘಟನೆ ನೀಡಿದೆ
ಕೋಟ
ಕೊಲೆ ಯಾದ ಸುರೇಶ್ ಕುಟುಂಬ ಕ್ಕೆ ಸರ್ಕಾರ 25 ಲಕ್ಷ ಹಣ ನೀಡಬೇಕು ಮತ್ತು ಅವರು ಕುಟುಂಬ ದವರಿಗೆ ಸರ್ಕಾರಿ ನೌಕರಿ ನೀಡಬೇಕು
ಈ ಕೊಲೆ ಪ್ರಕರಣದಲ್ಲಿ ಪೊಲೀಸರು ನ್ಯಾಯದ ಪರವಾಗಿ ನಿಲ್ಲಬೇಕಿದೆ. ನೊಂದ ಕುಟುಂಬ ಜೊತೆಗೆ ನಿಲ್ಲಬೇಕು
ಶ್ರೀಮಂತರ ಪರ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಬಡವರಿಗೆ ನ್ಯಾಯದ ಪರ ಕೆಲಸ ಮಾಡಬೇಕು ಆರೋಪಿ ಗಳನ್ನು ಬಂದಿಸದೆ ಹೋದ್ರೆ ಮುಂದಿನ ದಿನದಲ್ಲಿ ರಾಜ್ಯಾದಂತ್ಯ ಉಗ್ರ ಹೋರಾಟ ಎಚ್ಚರಿಕೆ ಸಹ ನೀಡಿದರು
ಈ ಸಂದರ್ಭದಲ್ಲಿ ಭಾರತೀಯ ಭೀಮ್ ಸೇನೆ ಸರ್ವ ಸದ್ಯಸರು ಉಪಸ್ಥಿತರಿದ್ದರು
