ಹಳ್ಳೂರ : ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವಕ್ಕೆ ಬೇಕಾಗುವ ಸಕಲ ಸಿದ್ಧತೆಯನ್ನು ಪ್ರಮುಖರು ಮಾಡಿಕೊಳ್ಳಬೇಕು ಜಾತ್ರೆಗೆ ಲಕ್ಷಾಂತರ ಭಕ್ತರು ಕೂಡುವ ನಿರೀಕ್ಷೆವಿದೆ ಅಧಿಕಾರಿಗಳು ಪ್ರಮುಖರು ಕೂಡಿಕೊಂಡು ಅಚ್ಚುಕಟ್ಟಾಗಿ ಶಾಂತಿ ಸುವಯವಸ್ಥೆಯಿಂದ ಜಾತ್ರೆಗೆ ಆಗಲು ಎಲ್ಲರೂ ಸಹಕರಿಸೋನಾವೆಂದು ಮೂಡಲಗಿ ತಹಸೀಲ್ದಾರ ಪ್ರಶಾಂತ ಚನ್ನಗೊಂಡ ಹೇಳಿದರು.
ಅವರು ಶನಿವಾರದಂದು ಶ್ರೀ ಮಹಾಲಕ್ಷ್ಮೀ ದೇವಸ್ಥನವೊಂದರಲ್ಲಿ ಹಮ್ಮಿಕೊಂಡ ದ್ಯಾಮವ್ವ ದೇವಿ ಹಾಗೂ ಮಹಾಲಕ್ಷ್ಮೀ ದೇವಿಯ 9 ದಿನಗಳವರೆಗೆ ಭವ್ಯವಾಗಿ ಜರುಗುತ್ತಿರುವ ಜಾತ್ರಾ ಮಹೋತ್ಸವದ ಪೂರ್ವ ಭಾವಿ ಸಭೆಯ ಅತಿಥಿಯಾಗಿ ಮಾತನಾಡಿ ಜಾತ್ರೆ ಸುಸೂತ್ರವಾಗಿ ನಡೆಯಲು ಎಲ್ಲರೂ ಜವಾಬ್ದಾರಿಯಿಂದ ಕೆಲಸ ಕಾರ್ಯಗಳನ್ನು ಮಾಡೋಣಾ. ಜನಸಮೂಹ ಹೆಚ್ಚಾಗಿ ಸೇರುವದರಿಂದ ನೀರಿನ ಅಭಾವವಾಗದಂತೆ ಹಳ್ಳಕ್ಕೆ ನೀರು ಬಿಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದರು.
ಸಿಪಿಐ ಶ್ರೀಶೈಲ ಬ್ಯಾಕುಡ ಮಾತನಾಡಿ ಹಳ್ಳೂರ, ಕಪ್ಪಲಗುದ್ದಿ, ಶಿವಾಪುರ ಮೂರೂರು ಗ್ರಾಮದ ಸಮ್ಮುಖದಲ್ಲಿ ಜಾತ್ರೆ ನಡೆಯುವದರಿಂದ ಬಹಳ ಜನ ಸೇರುವ ಸ್ಥಳದಲ್ಲಿ ಸಿ ಸಿ ಟಿ ವಿ ವ್ಯವಸ್ಥೆ ಮಾಡಿದರೆ ಕಿಸೆಗಳ್ಳತನ, ಬಂಗಾರ ಕಳ್ಳತನ ವಾಗುವುದನ್ನು ತಪ್ಪಿಸಲು ಅನುಕೂಲ ಮಾಡಿದಂತೆ ಆಗುತ್ತದೆ. ಮದ್ಯ ಸೇವಿಸಿ, ವಿನಾಕಾರಣ ಜಾತ್ರೆಯಲ್ಲಿ ದಾಂದಲೆ ಮಾಡಿದವರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗುವುದು. ಜಾತ್ರೆಗೆ ಬಂದೋಬಸ್ತ್ ಗಾಗಿ 1 ಸಿಪಿಐ 9 ಜನ ಪಿ ಎಸ್ ಐ,
150 ಪೊಲೀಸ ಸಿಬ್ಬಂದಿ, ಹಾಗೂ 1 ಜಾಳಿಗೆ ಗಾಡಿ ಬಂದೋಬಸ್ತ್ ಗಾಗೀ ವ್ಯವಸ್ಥೆಯನ್ನು ಕಲ್ಪಸಿ ಕೊಡಲಾಗುವುದು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಣಮಂತ ತಾಳಿಕೋಟಿ ಮಾತನಾಡಿ ಗ್ರಾಮ ಪಂಚಾಯಿತಿ ವತಿಯಿಂದ ಬೇಕಾಗುವ ಸೌಲಭ್ಯ ವದಗಿಸಲು ಸದಾ ಸಿದ್ಧರಿದ್ದೇವೆಂದು ಹೇಳಿದರು.
ವತನದಾರ ಗಿರೀಶ ಗೊಡಿಗೌಡರ ಹಾಗೂ ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ,ಪ್ರಮುಖ ಸುರೇಶ ಕತ್ತಿ, ಸಮಾಜ ಸೇವಕ ಮುರಿಗೆಪ್ಪ ಮಾಲಗಾರ, ಮಲ್ಲಿಕಾರ್ಜುನ ಸಂತಿ ಮಾತನಾಡಿ ಎಲ್ಲರೂ ಒಗ್ಗಟ್ಟಾಗಿ ಸಹಬಾಳ್ವೆ, ನೆಮ್ಮದಿಯಿಂದ ಯಾವದೇ ತೊಂದರೆ ಆಗದಂತೆ ಎಚ್ಚರಿಕೆ ಕ್ರಮ ವಹಿಸಿ ಜಾತ್ರೆಯನ್ನು ಅಚ್ಚುಕಟ್ಟಾಗಿ ಮಾಡೋಣಾವೆಂದು ಹೇಳಿದರು. ಈ ಸಮಯದಲ್ಲಿ ಕಂದಾಯ ನಿರೀಕ್ಷಕರಾದ ಸಂಗಣ್ಣ ಹೊಸಮನಿ.ಪಿ ಎಸ್ ಐ ಸೋಮೇಶ ಗೆಜ್ಜಿ ಹಾಗೂ ಶಿವುಕುಮಾರ ಬಿರಾದಾರ. ಗ್ರಾಮ ಆಡಳಿತ ಅಧಿಕಾರಿ ಸಂಜು ಅಗ್ನೆಪ್ಪಗೊಳ.ಅರ್ಚಕರಾದ ಪುಂಡಲಿಕ ಪೂಜೇರಿ. ಮುಕಂಡ ಹನಮಂತ ತೇರದಾಳ. ಶಿವನಗೌಡ ಪಾಟೀಲ. ಗ್ರಾ ಪ ಅಧ್ಯಕ್ಷ ಲಕ್ಷ್ಮಣ ಕತ್ತಿ. ಸಿದ್ದಪ್ಪ ಕೂಲಗೋಡ. ಕಮೀಟಿ ಅಧ್ಯಕ್ಷ ಅಡಿವೆಪ್ಪ ಪಾಬಾಂವಿ. ಯಮನಪ್ಪ ನಿಡೋಣಿ. ರಾಮಗೌಡ ಪಾಟೀಲ. ಗುರುನಾಥ ಬೊಳನ್ನವರ. ಮುಪ್ಪಯ್ಯ ಹಿಪ್ಪರಗಿ. ಭೀಮಪ್ಪ ಸಪ್ತಸಾಗರ. ಕೆಂಪಣ್ಣ ಕುರಣಿಂಗ. ಲಕ್ಷ್ಮಣ ಕೂಡಲಗಿ. ರಾಮಣ್ಣ ಕಾನಗೊಂಡ. ತುಕ್ಕಪ್ಪ ಪಾಟೀಲ. ನಾಗಪ್ಪ ಮೋರೆ. ನಾರಾಯಣ ತಮದಡ್ಡಿ. ರಮೇಶ ಸವದಿ. ಇಶ್ವರ ವೆಂಕಟಾಪುರ. ಅಡಿವೆಪ್ಪ ಹಡಗಿನಾಳ. ಸೇರಿದಂತೆ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರು ಹಿರಿಯರು ಸಾರ್ವಜನಿಕರಿದ್ದರು. ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ನಿರೂಪಿಸಿ ವಂದಿಸಿದರು.





