ಬೆಳಗಾವಿ
ಬೆಳಗಾವಿ: ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕುಡಚಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಡಾ.ಎನ್ . ಪ್ರಶಾಂತರಾವ ಐಹೋಳೆ ಸುದ್ದಿಗೋಷ್ಠಿ ನಡೆಸಿದರು.
ನಾನು ಕುಡಚಿ ಮತಕ್ಷೇತ್ರದ ಹತ್ತಿರದ ಉಗಾರ ಗ್ರಾಮದವನಾಗಿದ್ದು ಸುಮಾರು ವರ್ಷಗಳಿಂದ ನನ್ನ ಬಹುತೇಕ ಕುಟುಂಬದ ಸದಸ್ಯರು ರಾಜಕಾರಣದಲ್ಲಿದ್ದು ಕಳೆದ ಬಾರಿ ನನ್ನ ಧರ್ಮಪತ್ನಿ ಬೆಳಗಾವಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಕಾರಣ ಇನ್ನೊಬ್ಬರಿಗೆ ಅವಕಾಶ ಕಲ್ಪಿಸಿದೆ ನಾನು ಇಪ್ಪತೈದು ವರ್ಷಗಳಿಂದ ಪತ್ರಿಕಾ ಮಾಧ್ಯಮದಿಂದ ಬೆಳೆದು ಬಂದಿದ್ದೇನೆ ಜಿಲ್ಲೆಯ ಪ್ರಮುಖ ಮುಖಂಡರ ಜೊತೆ ಆತ್ಮೀಯವಾದ ಸಂಬಂಧವನ್ನೂ ಇಟ್ಟುಕೊಂಡಿದ್ದು ಹಾಗೂ ನನ್ನ ಧರ್ಮಪತ್ನಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದರಿಂದ ಕುಡಚಿ ಮತಕ್ಷೇತ್ರದ ಪ್ರತಿಗ್ರಾಮ ಪಟ್ಟಣದ ನಿಕಟ ಸಂಪರ್ಕ ಹೊಂದಿದ್ದು ಬರುವ 2023ರ ವಿಧಾನ ಸಭಾ ಕುಡಚಿ ಮತಕ್ಷೇತ್ರದ ಪ್ರಬಲವಾದ ಆಕಾಂಕ್ಷಿಯಾಗಿದ್ದು ಜಿಲ್ಲೆಯ ಪ್ರಮುಖರು ನನಗೆ ಟಿಕೆಟ್ ಆಶಿರ್ವಾದ ಮಾಡುವರೆಂದು ವಿಶ್ವಾಸ ಹೊಂದಿದ್ದೇನೆ ಎಂದರು.
ಕುಡಚಿ ಹಾಗೂ ರಾಯಬಾಗ ಎರಡು ಮೀಸಲು ಕ್ಷೇತ್ರಗಳಲ್ಲಿ ಒಂದು ಕ್ಷೇತ್ರಕ್ಕಾದರು ಮಾದಿಗ ಸಮಾಜದ ಅಭ್ಯರ್ಥಿಗೆ ಟಿಕೇಟ ನೀಡಬೇಕೆಂದು ಮಾದ್ಯಮದ ಮೂಲಕ ವಿನಂತಿಸಿ ಸದ್ಯ ಕಾಂಗ್ರೆಸ್ ಪಕ್ಷದ ಅಲೆ ನಿರ್ಮಾಣವಾಗಿದೆ. ನಾನೊಬ್ಬ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಜಿಲ್ಲಾ, ತಾಲೂಕಾ ಪ್ರಮುಖರ ನಿಕಟ ಸಂಬಂಧ ಹೊಂದಿದ್ದು, ಪಕ್ಷ ನನಗೆ ಟಿಕೇಟ್ ನೀಡಿದರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಒಂದು ವೇಳೆ ಟಿಕೆಟ್ ಕೈತಪ್ಪಿದರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಭೇರಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಖಾನಾಪೂರ ಕಾಯಕಮಠದ ಮಹಾಂತದೇವರು , ರಾಘವೇಂದ್ರ ಪಾಟೀಲ, ಅಮರ ಮಾನೆ ಮಂಜುನಾಥ ನಾಯಿಕ ರಾಹುಲ್ ಖಂಡೆ ಉಪಸ್ಥಿತರಿದ್ದರು
ವರದಿ: ಸಂಜೀವ ಬ್ಯಾಕುಡೆ