ವರದಿ: ಸಂಜೀವ ಬ್ಯಾಕುಡೆ, ಕುಡಚಿ
ಸರ್ವಾಂಗೀಣ ಅಭೀವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ ಎಂದು ಚಿಕ್ಕೋಡಿ ಲೋಕ ಸಭಾ ಸಂಸದೆ ಪ್ರೀಯಾಂಕ ಜಾರಕಿಹೊಳಿ ಹೇಳಿದರು.
ಅವರು ಚಿಂಚಲಿ ಪಟ್ಟಣದ ಉಪ್ರಪಾರವಾಡಿ ತೋಟದಲ್ಲಿ ಶ್ರೀ ಯಡಿಮಾಯಕ್ಕ ದೇವಿ ದೇವಸ್ಥಾನಕ್ಕೆ, ಮುಜರಾಯಿ ಇಲಾಖೆಯಿಂದ ಮಂಜೂರಾದ 10 ಲಕ್ಷ ರೂ ಅನುದಾನದಲ್ಲಿ ದೇವಸ್ಥಾನದ ಅಭೀವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು, ಬರುವ ದಿನಗಳಲ್ಲಿ ಹಂತ ಹಂತವಾಗಿ ಎಲ್ಲ ಸಮುದಾಯಗಳ ಅಭಿವೃದ್ಧಿ ಕಾರ್ಯಗಳನ್ನು ಅನುದಾನ ನೀಡುವುದಾಗಿ ತಿಳಿಸಿದರು.
ನ್ಯಾಯವಾದಿ ಸುಭಾಷ ರೆಂಟೆ ಮಾತನಾಡಿ, ಉಪ್ಪರವಾಡಿ ತೋಟದ ದೇವಸ್ಥಾನ ಅಭೀವೃದ್ಧಿಗೆ ಜಾರಕಿಹೊಳಿ ಕುಟುಂಬದವರು ಕೊಡುಗೆ ಬಹಳ ಇದೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ನೀಡಿದ ಶಿಫಾರಸ್ಸಿನಿಂದ ಇವತ್ತು ಮುಜರಾಯಿ ಇಲಾಖೆಯಿಂದ 10 ಲಕ್ಷ ಅನುದಾನ ಮಂಜೂರಾಗಿದೆ ಎಂದು ತೀಳಿಸಿದರು.
ರಾಯಬಾಗ ತಹಶೀಲ್ದಾರ ಸುರೇಶ ಮುಂಜೆ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಕವಿತಾ ಯಡ್ರಾಂವೆ, ಉಪಾಧ್ಯಕ್ಷ ರುಕ್ಷೀಣಿ ಹಾರೂಗೇರಿ, ವಾಮನ ಹಟ್ಟಿಮನಿ, ರಮೇಶ ಹಾರೂಗೇರಿ, ನಿರ್ಮಲಾ ಪಾ ಟೀಲ, ಶಿವಾನಂದ ಪಾಟೀಲ, ಯಲ್ಲಪ್ಪಾ ರೆಂಟಿ, ವಾಮಣ ಹಟ್ಟಿಮನಿ, ಗೋವಿಂದ ಪವಾರ, ಪ್ರವೀಣ ಹುಕ್ಕೇರಿ, ಡಾ; ಮಾರುತಿ ರೆಂಟಿ, ಕುಮಾರ ಖೋತ, ಪ ರುಶುರಾಮ ಖೋತ, ಇತರರು ಉಪಸ್ಥಿತರಿದ್ದರು.
