ಹಳ್ಳೂರ ಗ್ರಾಮದ ದೇವಿ ಜಾತ್ರೆ ನಿಮಿತ್ಯ ಬಹುಮಾನ ವಿತರಣೆ

Share the Post Now

ಹಳ್ಳೂರ .ಗ್ರಾಮದ ದ್ಯಾಮವ್ವ ದೇವಿ ಹಾಗೂ ಶ್ರೀ ಮಹಾಲಕ್ಷ್ಮೀ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ದಂದು ಹಮ್ಮಿಕೊಂಡ ಕೂಡು ಬಂಡೆ ಎತ್ತಿನ ಸ್ಪರ್ದೆ ಹಾಗೂ ಕುದುರೆ ಶರತ್ ನ್ನು ಕಮೀಟಿ ಹಾಗೂ ಗುರು ಹಿರಿಯರ ಸಮ್ಮುಕದಲ್ಲಿ ನೆರವೇರಿತು.

ಕೂಡು ಬಂಡೆಯ ಎತ್ತಿನ ಸ್ಪರ್ದೆಗೆ ಹಣಮಂತ ಗೊರವನ. ಸಾ ,ಕಲ್ಲೊಳ್ಳಿ ಅವರಿಗೆ 75,000 ಪ್ರಥಮ ಬಹುಮಾನವನ್ನು ಮಾಳಿ, ತೋಟಗೆರ ದೈವದ ವತಿಯಿಂದ ನೀಡಲಾಯಿತು. ರಮೇಶ ಬಿರಾದಾರ ಸಾ ದನ್ಯಾಳ ಅವರಿಗೆ 65,000 ದ್ವೀತಿಯ ಬಹುಮಾನವನ್ನು ಪಂಚಮಸಾಲಿ ದೈವದ ಹಿರಿಯರು ವಿತರಿಸಲಾಯಿತು. ಮುತ್ತಪ್ಪ ತೋನಶ್ಯಾಳ ಸಾ ಅತ್ತಾಲಟ್ಟಿ ಅವರಿಗೆ 55 000 ತೃತೀಯ ಬಹುಮಾನವನ್ನು ತೋಟಗೆರ ದೈವದ ವತಿಯಿಂದ ನೀಡಲಾಯಿತು.

ಯೆಂಕಪ್ಪ ಹೀರೆಕುರುಬರ ಸಾ ಕುಮಟೆ ಅವರಿಗೆ 45, 000 ಚತುರ್ಥ ಬಹುಮಾನವನ್ನು ಪಂಚಮ ಸಾಲಿ ದೈವದ ವತಿಯಿಂದ ನೀಡಲಾಯಿತು. ತಿಪ್ಪನ್ನ ಹೊಸಹಳ್ಳಿ ಸಾ ಹೊಸಹಳ್ಳಿ ಅವರಿಗೆ 25000 ಪಂಚಮಿ ಬಹುಮಾನವನ್ನು ಗೆಳೆಯರ ಬಳಗ ಹಾಗೂ ಹೋರಿ ಪ್ರೇಮಿಗಳು ವಿತರಿಸಿದರು.

ಜೋಡು ಕುದುರೆ ಶರತ್ ಸ್ಪರ್ದೆ ವಿನಯ ಯಲಿಗಾರ ಸಾ ಗೋಕಾಕ ಅವರಿಗೆ 11,000 ಪ್ರಥಮ ಬಹುಮಾನವನ್ನು ಬಾಗೋಡಿ ತೋಟ ಹಾಲು ಉತ್ಪಾದಕರ ಸಹಕಾರ ಸಂಗದಿಂದ ವಿತರಿಸಲಾಯಿತು. ನಿಂಗಪ್ಪ ಕರಿಗಾರ ಸಾ ಬನಹಟ್ಟಿ ಅವರಿಗೆ 6000 ದ್ವೀತಿಯ ಬಹುಮಾನವನ್ನು ದಿ ಬಸಪ್ಪ ತು ಮಾಲಗಾರ ಅವರ ಸ್ಮರನಾರ್ಥ ಸಮಾಜ ಸೇವಕ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಅವರೂ ಬಹುಮಾನವನ್ನು ವಿತರಿಸಿದರು. ಬಂದಲಕ್ಷ್ಮೀ ಸಾ ಬೆಳಗಲಿ ಅವರಿಗೆ 4000 ತೃತೀಯ ಬಹುಮಾನವನ್ನು ಗೆಳೆಯರ ಬಳಗದ ವತಿಯಿಂದ ನೀಡಲಾಯಿತು.

ಈ ಸಮಯದಲ್ಲಿ ಮಾಜಿ ಜಿಲ್ಲಾ ಪ ಸದಸ್ಯ ಭೀಮಶಿ ಮಗದುಮ. ಮಾಜಿ ಪಿಕೆ ಪಿ ಎಸ್ ಅಧ್ಯಕ್ಷ, ಗ್ರಾಮ ಪ ಸದಸ್ಯ ಹಣಮಂತ ತೇರದಾಳ. ಯಮನಪ್ಪ ನಿಡೋಣಿ. ಶ್ರೀಶೈಲ ಬಾಗೋಡಿ. ಶಾಂತಯ್ಯ ಹಿರೇಮಠ. ಬಾಹುಬಲಿ ಸಪ್ತಸಾಗರ. ಮಲ್ಲಿಕಾರ್ಜುನ ಸಂತಿ. ಭೀಮಪ್ಪ ಹೊಸಟ್ಟಿ ಗೋಪಾಲ ಅಟ್ಟಮಟ್ಟಿ.ಸತ್ಯನಾರಾಯಣ ತಮದಡ್ಡಿ. ಶ್ರೀಶೈಲ ಲೋಕಣ್ಣವರ. ರಂಗಪ್ಪ ಸಿಂಪಿಗೆರ. ಹಣಮಂತ ಹಡಪದ ಸೇರಿದಂತೆ ಗೆಳೆಯರ, ಹೋರಿ ಬಳಗ ಹಾಗೂ ಗ್ರಾಮದ ಗುರು ಹಿರಿಯರಿದ್ದರು. ಮೂಡಲಗಿ ಕ್ಷೇತ್ರ ಶಿಕ್ಷಾಧಿಕಾರಿ ಅಜಿತ ಮನ್ನಿಕೇರಿ ಅವರು ಹಳ್ಳೂರ ಗ್ರಾಮಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಶುಕ್ರವಾರ ಸಂಜೆ ಪುರುಷ ಹಾಗೂ ಮಹಿಳಾ ಕಬ್ಬಡ್ಡಿ ಪಂದ್ಯಾವಳಿ ನಡೆಯುತ್ತಿವೆ.

ಶನಿವಾರ ಹಾಲಲ್ಲಿ ಟಗರಿನ ಕಾಳಗ ನಡೆಯುತ್ತವೆ. ಇನ್ನೂ 4/5 ದಿನ ಕಬಡ್ಡಿ, ಕುಸ್ತಿ ಪಂದ್ಯಾವಳಿ ನಾಟಕ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ. ಶುಕ್ರವಾರದಂದು ಮಹಾಲಕ್ಷ್ಮೀ ದೇವಿಯ ವಾರ ಇರುವದರಿಂದ 30 ಸಾವಿರಕ್ಕಿಂತ ಹೆಚ್ಚು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು. ಜಾತ್ರೆಯಲ್ಲಿ ಅಂಗಡಿ ಮುಗ್ಗಟ್ಟಗಳು, ಜೇಕು ಸರ್ಕಸ್ ಗಳಲ್ಲಿ ಹೆಚ್ಚು ಭಕ್ತರು ಇರುವುದು ಕಂಡುಬಂದಿದೆ.

Leave a Comment

Your email address will not be published. Required fields are marked *

error: Content is protected !!