ಶಿಕ್ಷಣದಿಂದ ಪ್ರಗತಿ ಸಾಧ್ಯ : ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ

Share the Post Now


ದಾಸರ ತೋಟದ ಶಾಲೆ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

ವರದಿ: ಸಂತೋಷ ಮುಗಳಿ



ರಾಯಬಾಗ.ಮುಗಳಖೋಡ : ಗ್ರಾಮೀಣ ಭಾಗದ ರೈತಾಪಿ ಹಾಗೂ ದೀನದಲಿತರ ಕುಟುಂಬದ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು. ಗುತ್ತಿಗೆದಾರರು ಉತ್ತಮ ಗುಣಮಟ್ಟದ ಕೊಠಡಿ ನಿರ್ಮಿಸಿ ಕೊಡಬೇಕು. ಕನ್ನಡ ಶಾಲೆಗಳು ಉಳಿದು ಬೆಳೆಯಬೇಕು. ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಪ್ರಗತಿ ಸಾಧ್ಯ ಎಂದು ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಹೇಳಿದರು.

ಅವರು ಪಟ್ಟಣದ 16ನೇ ವಾರ್ಡಿನ ದಾಸರ ತೋಟದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ವಿವೇಕ ಯೋಜನೆಯಡಿ 29.20 ಲಕ್ಷ ರೂ ವೆಚ್ಚದಲ್ಲಿ ಎರಡು ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಯಬಾಗ ತಾಪಂ ಮಾಜಿ ಅಧ್ಯಕ್ಷ ರವಿಶಂಕರ ನರಗಟ್ಟಿ , ರಾಯಬಾಗ ಬಿಇಓ ಶಾಂತಾರಾಮ ಜೋಗಳೆ, ಶಿಕ್ಷಣ ಸಂಯೋಜಕ ಶ್ರೀಕಾಂತ ಕಂಬಾರ, ಎಸ್ ಡಿ ಎಂ ಸಿ ಅಧ್ಯಕ್ಷ ಸತ್ಪಾಲ ಗೊಳಸಂಗಿ, ಪುರಸಭೆ ಸದಸ್ಯರಾದ ಪರಗೌಡ ಖೇತಗೌಡರ, ರಮೇಶ ಯಡವನ್ನವರ, ರಾವಸಾಬ ಗವಲೆತ್ತಿನವರ, ಗುತ್ತಿಗೆದಾರ ಚಿದಾನಂದ ಕೋಳಿ , ಹಿರಿಯ ಕಾಂಗ್ರೆಸ್ ಮುಖಂಡ ಅಶೋಕ ಕೊಪ್ಪದ, ಹನಮಂತ ಹೊಸಪೇಟಿ, ಗಿರಮಲೣ ಮುಧೋಳ, ನಿವೃತ್ತ ಶಿಕ್ಷಕ ತಮ್ಮಣ್ಣ ಗೋಳಸಂಗಿ, ಶ್ರೀದೇವಿ ಯಡೂರಿ, ಮುಖ್ಯ ಶಿಕ್ಷಕಿ ಪುಷ್ಪಾ ಪಾಟೀಲ, ವಿಠಲ ಯಡವನ್ನವರ, ಮಹಾಂತೇಶ ಗೊಳಸಂಗಿ, ಸತ್ಯಪ್ಪ ಗೊಳಸಂಗಿ, ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

error: Content is protected !!