ಬೆಳಗಾವಿ.ಅಥಣಿ
ಅಥಣಿ ತಾಲೂಕಿನಲ್ಲಿ ಅಕ್ರಮವಾಗಿ ರಾತ್ರಿ ಹೊತ್ತು ಮಣ್ಣು ಸಾಗಾಟವಾಗುತ್ತಿದ್ದರೂ ಇತ್ತ ಪೋಲಿಸ್ ಇಲಾಖೆ ಹಾಗೂ ಕಂದಾಯ ಇಲಾಖೆ ನೋಡಿಯೂ ನೋಡದಂತೆ ಜಾಣ ಮೌನ ವಹಿಸಿದ್ದಾರೆ
ಅಥಣಿ ತಾಲೂಕಿನ ಸತ್ತಿ,ಅವರಖೋಡದಿಂದ ಸಪ್ತಸಾಗರ ಗ್ರಾಮದ ಇಟ್ಟಿಗೆ ಭಟ್ಟಿಗಳಿಗೆ ಅಕ್ರಮ ಮಣ್ಣು ಸಾಗಾಟವಾಗುತ್ತಿದೆ.ರಾತ್ರಿ ಹೊತ್ತು ರಭಸವಾಗಿ ಲಾರಿ ಟಿಪ್ಪರಗಳು ಸಾಗಾಟವಾಗುತ್ತಿದ್ದು ಇದರಿಂದಾಗಿ ಜನರು ರೋಸಿ ಹೋಗಿಧ್ದಾರೆ.ಲಾರಿ ಟಿಪ್ಪರಗಳು ವೇಗವಾಗಿ ಬರುವದರಿಂದ ಅಪಘಾತ ಸಂಭವ ಹೆಚ್ಚಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಇನ್ನು ಈ ರೀತಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ದೂರವಾಣಿ ಮೂಲಕ ಅಥಣಿ ಪಿಎಸ್ಐ ಅವರಿಗೆ ಹೇಳಿದಾಗ ಅವರು ಅಪಘಾತ ಆದ್ರೆ ನಮಗೆ ಬಂದು ಕಂಪ್ಲೇಟ್ ಕೊಡಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ.
ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಗೊತ್ತಿದ್ದರೂ ಸುಮ್ಮನೆ ಕುಳಿತಿದ್ದಾರೆ ಇದರಿಂದಾಗಿ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡಿ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದ್ದಾರಾ ಎಂಬ ಅನುಮಾನಗಳು ತೀವ್ರವಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಸಾರ್ವಜನಿಕರಿಗಾಗುವ ತೊಂದರೆಗಳನ್ನು ಯಾವ ರೀತಿ ಹೋಗಲಾಡಿಸುತ್ತಾರೆ ಮತ್ತು ಈ ಅಧಿಕಾರಿಗಳ ವಿರುದ್ದ ಮೇಲಾಧಿಕಾರಿಗಳು ಯಾವ ರೀತಿ ಕ್ರಮ ಜರುಗಿಸುತ್ತಾರೆ ಎಂದು ಕಾಯ್ದು ನೋಡಬೇಕಿದೆ.