ಹಳ್ಳೂರ. ಗ್ರಾಮದ ಶ್ರೀ ಎಸ್ ಆರ್ ಸಂತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2024ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಒಂದರ ಫಲಿತಾಂಶ ಪ್ರಕಟವಾಗಿದ್ದು, ಇದು ಕಲಾ ಮತ್ತು ವಾಣಿಜ್ಯ ವಿಭಾಗದ ಫಲಿತಾಂಶದಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನು ಸಾಧಿಸಿದೆ
ಈ ಕಾಲೇಜಿನ ಕುಮಾರಿ .ಭಾಗ್ಯಶ್ರೀ ನಿಂಗಪ್ಪ ಸಾಯನ್ನವರ- 586(97.66) ಪ್ರಥಮ, ಕುಮಾರಿ. ರಾಧಿಕಾ ಶಂಕರ ಮೇತ್ರಿ -579(96.5) ದ್ವಿತೀಯ, ಕುಮಾರಿ.ಸ್ವಾತಿ ಕೆಂಪಣ್ಣ ಕಲ್ಲಾರ-578(96.33) ತೃತೀಯ, ಕುಮಾರಿ ಲಕ್ಷ್ಮಿ ಕಲ್ಲೋಳೆಪ್ಪ ದಡ್ಡಿಮನಿ -574(95.33) ಚತುರ್ಥ ಸ್ಥಾನಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ
ಈ ಎಲ್ಲಾ ವಿದ್ಯಾರ್ಥಿನಿಯರನ್ನು ಕಾಲೇಜಿನ ಭೂಧಾನಿಗಳು, ಕಾಲೇಜು ಸುಧಾರಣಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಊರಿನ ಸಮಸ್ತ ಗ್ರಾಮಸ್ಥರು ಮತ್ತು ಶಿಕ್ಷಣ ಪ್ರೇಮಿಗಳು ಹಾಗೂ ಪ್ರಾಚಾರ್ಯರು ಮತ್ತು ಉಪನ್ಯಾಸಕ ಬಂಧುಗಳು ಅಭಿನಂದಿಸಿದ್ದಾರೆ.