ಡಾ.ವೀರೇಂದ್ರ ಹೆಗ್ಗಡೆ ಅವರ ಜನಪರ ಕಾರ್ಯಕ್ರಮಗಳು ಎಲ್ಲರಿಗೆ ಮಾದರಿಯಾಗಲಿ:ರಾಜು ನಾಯಕ್

Share the Post Now


 
ಬೆಳಗಾವಿ.ಹಳ್ಳೂರ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಮೂಡಲಗಿ ತಾಲೂಕಿನ ವತಿಯಿಂದ ಹುಣಶ್ಯಾಳ್ ಪಿಜಿ ಗ್ರಾಮದ  ನಮ್ಮೂರು ಸರ್ಕಾರಿ ಕಿರಿಯ  ಪ್ರಾರ್ಥಮಿಕ ಶಾಲೆ ಅಂಬಿಗರ ತೋಟ -2   ರಲ್ಲಿ ಒಂದರಿಂದ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ  ವಲಸೆ ಕಾರ್ಮಿಕರ ಹಾಗೂ ಕೂಲಿ ಕಾರ್ಮಿಕರ ಮಕ್ಕಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಅಂಗವಾಗಿ ಒಟ್ಟು 48 ಮಕ್ಕಳಿಗೆ  ಸ್ವೆಟರ್ಗಳನ್ನು ವಿತರಿಸಿ ಸಿಹಿ ಹಂಚಲಾಯಿತು.


  ಮೂಡಲಗಿ ತಾಲೂಕಿನ ಯೋಜನಾಧಿಕಾರಿಗಳಾದ  ರಾಜು ನಾಯಕ್ ಅವರು ಮಾತನಾಡಿ  ಪೂಜ್ಯರ ಜನಪರ ಕಾರ್ಯಕ್ರಮಗಳ ವಿವರಿಸಿ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ  ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ (ರಿ.) ಅಥಣಿ  ವೇದಿಕೆಯ ಸದಸ್ಯರಾದ ಉದಯ್ ಗೌಡ, ಶಾಲೆಯ ಮುಖ್ಯೋಪಾಧ್ಯಾಯರಾದ ನಾಗರಾಜ್ ಕಾಟವಿ, ಶಿಕ್ಷಕರಾದ ಹಣಮಂತ ಕಟ್ಟಿಮನಿ, ಜ್ಞಾನವಿಕಾಸ ಸಮನ್ವರಿ ಅಧಿಕಾರಿಯಾದ ಶ್ರೀಮತಿ ವಿಜಯಲಕ್ಷ್ಮಿ, ವಲಯದ ಮೇಲ್ವಿಚಾರಕರಾದ ಶ್ರೀಮತಿ ಮಂಜುಳಾ , ಸೇವಾ ಪ್ರತಿನಿಧಿಗಳು ಹಾಗೂ ಶಾಲಾ ಮಕ್ಕಳು  ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು ಶಿಕ್ಷಕರಾದ ಹನುಮಂತ ಕಟ್ಟಿಮನಿಯವರು ನಿರೂಪಿಸಿ ವಂದಿಸಿದರು.

Leave a Comment

Your email address will not be published. Required fields are marked *

error: Content is protected !!