ರಬಕವಿ:ಸನ್ ಶೈನ್ ಎಲವು ಕೀಲುಗಳ ಮತ್ತು ಹೆರಿಗೆ ಆಸ್ಪತ್ರೆ ಉದ್ಘಾಟನಾ ಸಮಾರಂಭ ಜರುಗಿತು

Share the Post Now

ಬನಹಟ್ಟಿ

ರಬಕವಿ ಬಸ್ ಸ್ಟ್ಯಾಂಡ್ ಹತ್ತಿರ ನೂತನವಾಗಿ ನಿರ್ಮಿಸಲಾಗಿರುವ ಸನ್ ಶೈನ್ ಎಲವು ಕೀಲುಗಳ ಮತ್ತು ಹೆರಿಗೆ ಆಸ್ಪತ್ರೆ ಉದ್ಘಾಟನಾ ಸಮಾರಂಭನ್ನು ಶ್ರೀ ಗುರು ಸಿದ್ಧೇಶ್ವರ ಬ್ರಹ್ಮಾನಂದ ಶ್ರೀಗಳ ಅಮೃತ ಹಸ್ತದಿಂದ ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಅವರು ನೆರವೆರಿಸಿದರು. ನಂತರ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಕ್ಕೆ ಶಾಸಕ ಸಿದ್ದು ಸವದಿ ಅವರು ಸನ್ಮಾನ ಮಾಡಿ ಗೌರವಿಸಿ ಮಾತನಾಡಿ ದಾವಾಖಾನೆಯು ಸುಸಜ್ಜಿತ ಕಟ್ಟಡ ಹೊಂದಿದ್ದು ಅನುಭವ ಉಳ್ಳ ವೈದ್ಯಕೀಯ ಸೌಲಭ್ಯ ಕಲ್ಪಿಸಿಕೊಡಲು ಸಕಲ ಸಿದ್ಧತೆ ಮಾಡಿಕೊಂಡಿದೆ ಅದಕ್ಕಾಗಿ ಸುತ್ತಮುತ್ತಲಿನ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು ಹಾಗೂ ಹಳ್ಳೂರ ಗ್ರಾಮದ ಹಗಲಿರುಳು ಸಮಾಜ ಸೇವೆ ಸಲ್ಲಿಸುತ್ತಿರುವ ಸಮಾಜದ ಯುವ ಮುಖಂಡರಾದ ಮುರಿಗೆಪ್ಪ ಮಾಲಗಾರ ಅವರಿಗೆ ಜಿಲ್ಲಾಡಳಿತ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿದ್ದು ಹೆಮ್ಮೆಯ ಸಂಗತಿ ಹಾಗೂ ಅವರು ಸಮಾಜಕ್ಕೆ ಕೊಡುಗೆ ನೀಡಿದ ಪ್ರತಿ ಪಲವಾಗಿ ಪ್ರಶಸ್ತಿ ದೊರೆತಿದೆ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ತೇರದಾಳ ಪೊಲೀಸ್ ಠಾಣೆಯ ಪಿ ಏಸ್ ಐ ಅಪ್ಪು ಐಗಳಿ. ಬನಹಟ್ಟಿ ಪೊಲೀಸ್ ಠಾಣೆಯ ಪಿ ಏಸ್ ಐ ರಾಘವೇಂದ್ರ ಖೋತ. ಡಾ ಪಾರ್ವತಿ ಹಿರೇಮಠ.ಡಾ, ಸತೀಶ ಮಾಳಿ. ಡಾ ರಂಜನಾ ಮಾಳಿ. ಡಾ ಕೃಷ್ಣಾ ನಾಯಿಕ.ಡಾ ಕಾರ್ತಿಕ ಕೋಳಿ. ಡಾ ರವಿ ಜಮಖಂಡಿ ಡಾ ಕುಮಾರ ಅಥಣಿ. ಪಿ ಕೆ ಪಿ ಏಸ್ ಕಾರ್ಯದರ್ಶಿ ಸಂಜು ಅಥಣಿ. ಬಾಬಾಗೌಡ ಪಾಟೀಲ.ಸದಾಶಿವ ಹೊಸಮನಿ. ಮಾದೇವ ತೇರದಾಳ. ಗೋಪಾಲ ಯಡವನ್ನವರ. ಸುಭಾಸ ಚೋ ಳಿ.ಚಿನ್ನಪ್ಪ ಅಥಣಿ.ಮಲ್ಲಪ್ಪ ಬಿಸನಾಳ ಸೇರಿದಂತೆ ಅನೇಕರಿದ್ದರು.ಪ್ರಾರಂಭದಲ್ಲಿ ಹೋಮ ಹವನ ವಿಶೇಷ ಪೂಜೆ ನಡೆಯಿತು.

Leave a Comment

Your email address will not be published. Required fields are marked *

error: Content is protected !!