ತಾಲೂಕಿನ ಬಿಜೆಪಿಯಲ್ಲಿ ಭಂಡಾಯ ಶಮನವಾಯಿತು ಅನ್ನುವಷ್ಟರಲ್ಲಿ ಬಂಡಾಯ ಅಬ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ ಬಾಬುರಾವ್ ದೇಸಾಯಿ
ಬಿಜೆಪಿ ಪಟ್ಟಿ ಘೋಷಣೆಯಾದಾಗಿನಿಂದಲೂ ಖಾನಾಪುರ ಕ್ಷೇತ್ರದಲ್ಲಿ ಅಸಮಾಧಾನದ ಅಲೆ ಎದ್ದಿದೆ ಇದರಿಂದ ಮಾಜಿ ಶಾಸಕ ಶ್ರೀ ಅರವಿಂದ ಪಾಟೀಲ ಹಾಗೂ ಬೆಂಬಲಿಗರು ಅಸಮಾಧಾನಗೊಂಡಿದ್ದಾರೆ ಎಂಬ ಚರ್ಚೆ ನಡೆಯಿತು. ಖಾನಾಪುರ ಬಿಜೆಪಿ ಪಕ್ಷದ ವರಿಷ್ಠರು ಮತ್ತು ಮುಖಂಡರು ಹಲವು ಪ್ರಯತ್ನಗಳ ನಂತರ ಅವರನ್ನು ಮತ್ತು ಅವರ ಕೆಲವು ಬೆಂಬಲಿಗರನ್ನು ಮರಳಿ ಕರೆತರುವಲ್ಲಿ ಯಶಸ್ವಿಯಾದರು.
ಆದರೆ ಕಳೆದ 30 ವರ್ಷದಿಂದ ಬಿಜೆಪಿ ಕಟ್ಟಾ ಕಾರ್ಯಕರ್ತನಾದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಬಾಬುರಾವ್ ಗೋವಿಂದರಾವ್ ದೇಸಾಯಿ ಅವರು ದಿ20ರಂದು ಸಾವಿರಾರು ಜನ ಕಾರ್ಯಕರ್ತರೊಂದಿಗೆ ಬಂಡಾಯ ಅಬ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವದಾಗಿ ಪಟ್ಟಣದಲ್ಲಿ ಪತ್ರಿಕಾ ಹೇಳಿಕೆ ನಿಡಿದರು ಅವರ ಜೊತೆ ಅನೇಕ ನಿಷ್ಠಾವಂತ ಕಾರ್ಯಕರ್ತರಿದ್ದಾರೆ. ಕೆಲ ಅರವಿಂದ ಪಾಟೀಲ ಬೆಂಬಲಿಗರು ಅಧಿಕೃತ ಅಭ್ಯರ್ಥಿಗಳ ಜತೆ ಕಾಣದ ಕಾರಣ ಬಾಬುರಾವ್ ದೇಸಾಯಿ ಅವರ ಜತೆ ಅವರೂ ಬರುವ ಸಾಧ್ಯತೆ ಇದೆ. ಬಾಬುರಾವ್ ದೇಸಾಯಿ ಭಾರತೀಯ ಜನತಾ ಪಕ್ಷದ ಹಳೆಯ ನಾಯಕರಾಗಿದ್ದು, ಜನತಾ ಪಕ್ಷದ ಮೂಲಕ ಬಹಳಷ್ಟು ಸಾರ್ವಜನಿಕ ಸೇವೆಯನ್ನು ಮಾಡಿದ್ದಾರೆ.