ವರದಿ: ಸಂಜೀವ ಬ್ಯಾಕುಡೆ, ರಾಯಬಾಗ
ಬೆಳಗಾವಿ.
ರಾಯಬಾಗ ಪಟ್ಟಣದಲ್ಲಿ ಕರ್ನಾಟಕ ಉಪ್ಪಾರ ಮಹಾಸಭಾ ಹಾಗೂ ವಿಶ್ವ ಭಗೀರಥ ಟ್ರಸ್ಟ್ ಹುಬ್ಬಳ್ಳಿ ಇವರಿಂದ ಸುದ್ದಿಗೋಷ್ಠಿ ಬರುವ ನವೆಂಬರ್ 17ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.
ಕರ್ನಾಟಕ ಉಪ್ಪಾರ ಮಹಾಸಭಾ ಹಾಗೂ ವಿಶ್ವ ಭಗೀರಥ ಟ್ರಸ್ಟ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಇದೆ ತಿಂಗಳ ರವಿವಾರ 17 ರಂದು ರಾಯಬಾಗ ಪಟ್ಟಣದ ಮಹಾವೀರ ಭವನದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಪ್ರತಿಭಾವಂತ ಉಪ್ಪಾರ ಸಮಾಜದ ವಿದ್ಯಾರ್ಥಿ/ ವಿದ್ಯಾರ್ಥಿನಿಯರ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಗೌರವ ಸನ್ಮಾನ ಮತ್ತು ಮಹಾಸಭಾ ವಿವಿಧ ಗ್ರಾಮ ಘಟಕಗಳ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು,
ಉಪ್ಪಾರ ಸಮಾಜದ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ/ ವಿದ್ಯಾರ್ಥಿನಿಯರನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಿ ಸನ್ಮಾನಿಸಲು ತಿರ್ಮಾಣಿಸಲಾಗಿದೆ.
ಬೆಳಗಾವಿ ಜಿಲ್ಲಾ ಉಪ್ಪಾರ ಸಮಾಜದ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ತಮ್ಮ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಅಂಕಪಟ್ಟಿ ಝರಾಕ್ಷ ಪ್ರತಿಯನ್ನು ಇದೇ ನವೆಂಬರ್ 10 ರ ಒಳಗಾಗಿ ಶ್ರೀರಾಮ ಫೌಂಡೇಶನ್ ಲಾತೂರ ಕಂಪ್ಯೂಟರ್ ಸೆಂಟರ್ ಕೋರ್ಟ್ ಸರ್ಕಲ್ ಕೆನರಾ ಬ್ಯಾಂಕ್ ಕೆಳಗೆ ಗೋಕಾಕ, ಜಿ: ಬೆಳಗಾವಿ ಇಲ್ಲಿಗೆ ಪೋಸ್ಟ್ ಅಥವಾ ಖುದ್ದಾಗಿ ಸಲ್ಲಿಸಬೇಕು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕ ಸಾಧಕಿಯರು ತಮ್ಮ ತಮ್ಮ ಕಿರುಪರಿಚಯದ ಪ್ರತಿಯನ್ನು ಕಳುಹಿಸಿಕೊಡಬೇಕು ಎಂದು ಮಹಾಸಭಾದ ರಾಜ್ಯಾಧ್ಯಕ್ಷ ನ್ಯಾಯವಾದಿ ವಿಷ್ಣು ಲಾತೂರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9448225046ಗೆ ಸಂಪರ್ಕಿಸಬಹುದಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಉಪ್ಪಾರ ಮಹಾಸಭಾ ಉಪಾಧ್ಯಕ್ಷೆ ಶ್ರೀಮತಿ ಸಿದ್ದವ್ವಾ ಖಿಲಾರೆ, ಸುನಂದಾ ಉಪ್ಪಾರ, ಮಹಿಳಾ ಉಪಾಧ್ಯಕ್ಷೆ ನೇತ್ರಾವತಿ ಉಪ್ಪಾರ, ದೊಡ್ಡವ್ವ ಉಪ್ಪಾರ, ಯುವ ಮುಖಂಡ ರಾಘವೇಂದ್ರ ಖಿಲಾರೆ ಇತರರು ಉಪಸ್ಥಿತರಿದ್ದರು.