ರಾಯಬಾಗ :ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ನೋಂದಣಿ ಆರಂಭ

Share the Post Now

ಬೆಳಗಾವಿ.
ಕಳೆದ ಜನೇವರಿ 01-2024ರ ಅರ್ಹತಾ ದಿನಾಂಕವನ್ನಾಧರಿಸಿ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ನೋಂದಣಿ ವಿಶೇಷ ಅಭಿಯಾನ ಜರುಗಿಲಿದೆ.

ಮಾನ್ಯ ಜಿಲ್ಲಾಧಿಕಾರಿಗಳು ಬೆಳಗಾವಿ, ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಬೆಳಗಾವಿ ಆದೇಶದಂತೆ
01.01.20250 ಅರ್ಹತಾ ದಿನಾಂಕವನ್ನಾಧರಿಸಿ, ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಿಮಿತ್ತ ಮತದಾರ ಇದೆ ನವೆಂಬರ್ 09, 10, 23, 24 ಗಳಂದು ವಿಶೇಷ ಅಭಿಯಾನಗಳನ್ನು ಆಯೋಜಿಸಲಾಗಿದ್ದು, ಸದರಿ ದಿನಗಳಂದು ವಿಶೇಷ ಅಭಿಯಾನ ನಡೆಸಲು ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿ.ಎಲ್.ಓ) ಗಳು ಅವರವರ ಮತಗಟ್ಟೆ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೆ ಹಾಜರಿರುವರು.

ಆದ ಕಾರಣ 05-ಕುಡಚಿ (ಪ.ಜಾ) ಮತ್ತು 06-ರಾಯಬಾಗ(ಪ.ಜಾ) ವಿಧಾನಸಭಾ ಕ್ಷೇತ್ರದ ಸಾರ್ವಜನಿಕರಿಗೆ ತಿಳಿಸುವುದೇನೆಂದರೆ, ಮತದಾರರ ಪಟ್ಟಿಯಲ್ಲಿ ಹೆಸರು ಸೇಪರ್ಡೆಗಾಗಿ (1 ಜನೇವರಿ, 1 ಏಪ್ರಿಲ್, 1ಜುಲೈ, ಮತ್ತು 1 ಅಕ್ಟೋಬರ 2025ಕ್ಕೆ 18ವರ್ಷ ಪೂರ್ಣಗೊಳ್ಳುವ ಹಾಗೂ ಈಗಾಗಲೇ 18 ವರ್ಷ ಪೂರ್ಣಗೊಂಡಿರುವ) ಹಾಗೂ ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದು ಅಂತವರ ಹೆಸರು/ಭಾವಚಿತ್ರ/ವಿಳಾಸದ ತಿದ್ದುಪಡಿಗಾಗಿ ಮತ್ತು ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕುವಿಕೆಗಾಗಿ ಸದರಿ ವಿಶೇಷ ಅಭಿಯಾನದ ದಿನಗಳಂದು ಸರ್ಕಾರದಿಂದ ನೇಮಿಸಲಾದ “ಮತಗಟ್ಟೆಯ ಅಧಿಕಾರಿಗಳಿಗೆ” ತಮ್ಮ ಅರ್ಜಿಗಳನ್ನು ಅಥವಾ ಮಾಹಿತಿಯನ್ನು ನೀಡಬಹುದಾಗಿದ್ದು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳುವಂತೆ ಸುರೇಶ ಮುಂಜೆ ಸಹಾಯಕ ಮತದಾರ ನೋಂದಣಾಧಿಕಾರಿಗಳು ಹಾಗೂ ತಹಶೀಲ್ದಾರ ರಾಯಬಾಗ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!