ಬೆಳಗಾವಿ.
ರಾಯಬಾಗ ತಾಲೂಕಿನಾದ್ಯಂತ 20ಕೇಂದ್ರಗಳಲ್ಲಿ 7246ರಲ್ಲಿ 98ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 7148 ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥೆಯಿಂದ ಮೊದಲನೇ ದಿನದ ಪರೀಕ್ಷೆ ಬರೆದರು.
ಇಂದಿನಿಂದ ಪ್ರಾರಂಭವಾದ ಎಸ್ಎಸ್ಎಲ್‌ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳನ್ನು ಶಿಕ್ಷಕರು ಹಲವು ಕಡೆ ವಿವಿಧ ರೀತಿಯಲ್ಲಿ ಸ್ವಾಗತಿಸಿಕೊಂಡರು.
ಕುಡಚಿ ಪಟ್ಟಣದ ಜುನ್ನೇದಿಯಾ ಪ್ರೌಢಶಾಲೆ ಕೇಂದ್ರದಲ್ಲಿ ಒಟ್ಟು 18 ಕೊಠಡಿಗಳಲ್ಲಿ 433 ವಿದ್ಯಾರ್ಥಿಗಳ ಪೈಕಿ 1ವಿದ್ಯಾರ್ಥಿ 2ವಿದ್ಯಾರ್ಥಿನಿಯರು ಗೈರು ಹಾಜರಿದ್ದು ಅದರಲ್ಲಿ 2ವಿದ್ಯಾರ್ಥಿಗಳು ರಿಪಿಟರ್ಸ ಸೇರಿ ಒಟ್ಟು 430ವಿದ್ಯಾರ್ಥಿಗಳು ಶಾಂತಿ ಸುವ್ಯವಸ್ಥಿತವಾಗಿ ಪರೀಕ್ಷೆ ಬರೆದರು. ಇನ್ನು ಸರಕಾರಿ ಉರ್ದು ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ 12 ಕೊಠಡಿಗಳಲ್ಲಿ 306 ವಿದ್ಯಾರ್ಥಿಗಳ ಪೈಕಿ 1 ವಿದ್ಯಾರ್ಥಿ, 2 ವಿದ್ಯಾರ್ಥಿನಿಗಳು ಸೇರಿ 3ಜನ ಗೈರು ಹಾಜರಿದ್ದು ಅದರಲ್ಲಿ 2ಜನ ರಿಪಿಟರ್ಸ ಆಗಿದ್ದು 153ಗಂಡು 150ಹೆಣ್ಣು ಸೇರಿದಂತೆ ಒಟ್ಟು 303 ವಿದ್ಯಾರ್ಥಿಗಳು ಹಾಜರಿದ್ದರು.
ಇನ್ನು ಪರಮಾನಂದವಾಡಿ ಗ್ರಾಮದ ಎಸ್.ಆರ.ಡಿ ಪ್ರೌಢಶಾಲೆ ಪರೀಕ್ಷಾ ಕೇಂದ್ರದಲ್ಲಿ ಒಟ್ಟು 18 ಕೊಠಡಿಗಳಲ್ಲಿ 438 ವಿದ್ಯಾರ್ಥಿಗಳ ಪೈಕಿ 7ಗಂಡು, 1ಹೆಣ್ಣು ಸೇರಿದಂತೆ 8ಗೈರು ಆಗಿದ್ದು ಒಟ್ಟು 430 ವಿದ್ಯಾರ್ಥಿಗಳು ಶಾಂತ ರೀತಿಯಿಂದ ಪರೀಕ್ಷೆ ಬರೆದರು.
ತಾಲೂಕಿನಾದ್ಯಂತ ಪರೀಕ್ಷೆಯು ಸುಗಮ ನಿರ್ವಹಣೆಗೆ ಆಸನ ವ್ಯವಸ್ಥೆ, ಸಿಸಿ ಟಿವಿ, ವೆಬಕಾಷ್ಟಿಂಗ ಸೇರಿದಂತೆ ಎಲ್ಲ ಮೂಲಭೂತ ಸೌಕರ್ಯಗಳು ಒದಗಿಸಲಾಗಿತ್ತು. ಪರೀಕ್ಷಾ ಕೇಂದ್ರಗಳ 200 ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದು, ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು , ವಿದ್ಯಾರ್ಥಿಗಳು ಭಯವಿಲ್ಲದೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಇಲಾಖೆ ಮತ್ತು ಶಾಂತಿಯುತವಾಗಿ ಪರೀಕ್ಷೆ ನಡೆಯಲು ಎಲ್ಲ ಸೂಕ್ತ ಕ್ರಮಗಳನ್ನು ಜರುಗಿಸಿದ್ದರು.
ಶಿಕ್ಷಣ ಸಂಯೋಜಕ ಮನೋಹರ ಪೂಜಾರಿ, ಕುಡಚಿ ಪಟ್ಟಣದ ಜುನ್ನೇದಿಯಾ ಪ್ರೌಢಶಾಲೆ ಕೇಂದ್ರ ಮುಖ್ಯಸ್ಥ ಐ.ಎನ.ಪಟೇಲ, ಸರ್ಕಾರಿ ಉರ್ದು ಪ್ರೌಢಶಾಲೆ ಕೇಂದ್ರದ ಮುಖ್ಯಸ್ಥ ಬಾಳಪರವೇಷ, ಎಮು.ಬಿ.ಬೇಗ, ಪರಮಾನೀದವಾಡಿ ಎಸ್.ಆರ.ಡಿ ಪ್ರೌಢಶಾಲೆ ಕೇಂದ್ರ ಮುಖ್ಯಸ್ಥ ದೊಡ್ಡಣ್ಣವರ ಮಾಹಿತಿ ನೀಡಿದರು
