ಹಳ್ಳೂರ
ಗ್ರಾಮದಲ್ಲಿ ವಿವಿಧ ಕಡೆ ಭಗೀರಥ ಮಹರ್ಷಿ ಜಯಂತಿ ಆಚರಣೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಿದರು. ಶ್ರೀ ಮಹಾಲಕ್ಷ್ಮೀ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಸೊಸೈಟಿಯಲ್ಲಿ ಉಪ್ಪಾರ ಸಮಾಜದ ಬಾಂಧವರ ಸಮ್ಮುಖದಲ್ಲಿ.
ಗ್ರಾಮ ಆಡಳಿತ ಕಛೇರಿಯಲ್ಲಿ. ಗ್ರಾಮ ಪಂಚಾಯಿತಿಯಲ್ಲಿ ಹಾಗು ಗ್ರಾಮದ ಸರಕಾರಿ ಕಛೇರಿಗಳಲ್ಲಿ ಭಗೀರಥ ಮಹರ್ಷಿ ಜಯಂತಿ ಆಚರಣೆಯನ್ನು ಮಾಡಿದರು. ಈ ಸಮಯದಲ್ಲಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. ಸಂಜೆ ಸಮಯದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ನಂತರ ಡಾಲ್ಮಿ ಹಚ್ಚಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ಭಗೀರಥ ಮಹರ್ಷಿ ತಪಸ್ಸು ಮಾಡಿ ಗಂಗೆಯನ್ನು ಭೂಮಿಗೆ ತಂದದ್ದು ಇತಿಹಾಸದಲ್ಲಿ ಉಲ್ಲೇಖವಿದೆ ಅದೇ ರೀತಿ ಭಗೀರಥ ಮಹರ್ಷಿ ಜಯಂತಿಯಂದು ಗ್ರಾಮದಲ್ಲಿ ಸಂಜೆ ಸಮಯದಲ್ಲಿ ಜೋರಾಗಿ ಮಳೆ ಬಂದು ಗ್ರಾಮದಲ್ಲಿ ಭೂಮಿಯನ್ನು ತಂಪು ಮಾಡಿ ಜಯಂತಿಗೆ ಮೆರುಗು ನೀಡಿತು.ಧಾರಾಕಾರ ಮಳೆ ಅಪ್ಪಳಿಸಿದರಿಂದ ರೈತರಲ್ಲಿ ಸಂತಸ ತಂದಿದೆ. ಮಳೆ ಬರುತ್ತಿದ್ದಂತೆ ಮೆರವಣಿಗೆಯಲ್ಲಿ ಪಾಲ್ಗೊಂಡ ಯುವಕರು ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದರು.