ಬೆಳಗಾವಿ
ವರದಿ :ಸಚಿನ್ ಕಾಂಬ್ಳೆ
ಅಥಣಿ:ಮಾಜಿ ಸಚಿವ,ಶಾಸಕ ರಮೇಶ ಜಾರಕಿಹೊಳಿಯವರು ಮತದಾರರಿಗೆ ಆಮಿಷ ಒಡ್ಡುವಂತಹ ಹೇಳಿಕೆ ನೀಡಿಲ್ಲ ಎಂದು ಕೊಳಗೇರಿ ಅಧ್ಯಕ್ಷರು ಹಾಗೂ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.
ಅವರು ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ಸುಮಾರು
6 ಕೋಟಿ 98 ಲಕ್ಷ ರೂ. ವೆಚ್ಚದ4 ಕೋಟಿ 28 ಲಕ್ಷ ರೂ. ವೆಚ್ಚದ ಜಲಜೀವನ ಮಿಷನ್ ( ಜೆ ಜೆ ಎಂ)2456 ಮನೆಗಳಿಗೆ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ, 1 ಕೋಟಿ 40 ಲಕ್ಷ ರೂ.ವೆಚ್ಚದ ತೆಲಸಂಗ ಗ್ರಾಮದ ಮೊರೆ (ವಸತಿ) ರಸ್ತೆ ಕಾಮಗಾರಿ ಭೂಮಿ ಪೂಜೆ,60 ಲಕ್ಷ ರೂ. ವೆಚ್ಚದ ತೆಲಸಂಗ ಗ್ರಾಮದಿಂದ ಎಲ್ಲಮ್ಮ ದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿ ಭೂಮಿ ಪೂಜೆ,70 ಲಕ್ಷ ರೂ. ವೆಚ್ಚದ ತೆಲಸಂಗ ಗ್ರಾಮದಿಂದ ದಡ್ಡಿ (ವಸತಿ) ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಮೇಶ ಜಾರಕಿಹೊಳಿ ಮತದಾರರಿಗೆ ಆರು ಸಾವಿರ ರೂಪಾಯಿ ನೀಡಿದರೆ ಮತ ಹಾಕಿ ಎಂಬ ಹೇಳಿಕೆಯನ್ನ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,ರಮೇಶ ಜಾರಕಿಹೊಳಿ ಅವರು ಮಾತನಾಡಿದ ವಿಡಿಯೋ ವೀಕ್ಷಣೆ ಮಾಡಿದ್ದೇನೆ ಅವರು ಎಲ್ಲಿಯೂ ಮತದಾರರಿಗೆ ಅಂತ ಹೇಳಿಲ್ಲ. ಅವರೂ ಕೊಟ್ಟಿದ್ದಾರೆ ನಾವು ಕೊಡ್ತಿವಿ ಅಂತ ಹೇಳಿದ್ದಾರೆ ಅದ್ರೆ ಚುನಾವಣೆಯಲ್ಲಿ ಕೊಡ್ತಿನಿ ಅಂತ ಹೇಳಿಲ್ಲ ಅಂತ ಅವರ ಮಾತನ್ನ ಸರ್ಮರ್ಥನೆ ಮಾಡಿದರು.
ಡಿಕೆಶಿ ನನ್ನನ್ನು ಹಾಳು ಮಾಡಿದ್ದಾರೆ ಎಂಬ ಹೇಳಿಕೆ ವಿಚಾರ:
ರಮೇಶ ಜಾರಕಿಹೊಳಿಯವರು ಡಿಕೆಶಿ ನನ್ನನ್ನು ಹಾಳು ಮಾಡಿದ್ದಾರೆ ಎಂಬ ಹೇಳಿಕೆ ವಿಚಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಶಾಸಕರು ಇದು ಚುನಾವಣೆ ಸಂದರ್ಭ ನಾನು ಕೇವಲ ಅಥಣಿ ಮತಕ್ಷೇತ್ರದಲ್ಲಿ ಬಿಜೆಪಿ ಬಲಿಷ್ಠಗೊಳಿಸೊದಕ್ಕೆ ಪ್ರಯತ್ನ ಪಡುತ್ತಿದ್ದೇನೆ ಅಥಣಿ ಮತಕ್ಷೇತ್ರಕ್ಕೆ ಸಂಭಂದಿಸಿದ ವಿಚಾರ ಇದ್ರೆ ಕೇಳಿ ಎಂದು ಹೇಳಿದರು.
ಈ ವೇಳೆ ಗುತ್ತಿಗೆದಾರರಾದ ಬಿ ಎಸ್ ರೊಟ್ಟಿ, ಆರ್ ಎಮ್ ಗಣಿ, ಡಿ ಸಿ ನಾಯಿಕ, ಸುಧಾಕರ ಮೋರೆ, ಅಧಿಕಾರಿಗಳಾದ ವೀರಣ್ಣ ವಾಲಿ, ರವೀಂದ್ರ ಮುರಗಾಲಿ, ಮುಖಂಡರಾದ ನಿಂಗಪ್ಪ ನಂದೇಶ್ವರ, ಮಲ್ಲಿಕಾರ್ಜುನ ಹಂಚಿನಾಳ, ಗ್ರಾಮಸ್ಥರಾದ ಸಿದ್ದುಬಾ ಚವ್ಹಾಣ, ಪ್ರಭಾಕರ ಮೋರೆ, ಬಾಳು ಮೋರೆ, ಶಶಿಕಾಂತ ಪವಾರ, ಸುಭಾಸ ಮೋರೆ, ವಿಲಾಸ ಮೋರೆ, ಮಾದೇವ ಪೂಜಾರಿ, ಅಶೋಕ ಉಂಡೋಡಿ, ರಾಜು ಖ್ಯಾಡಿ, ಧರೆಪ್ಪ ಅವರಖೋಡ, ಗೇಣುಬಾ ನಲವಡೆ, ಗುಂಡುಭಾ ಪವಾರ ಸೇರಿದಂತೆ ಇತರರಿದ್ದರು.