ಬೆಳಗಾವಿ
ಮುಗಳಖೋಡ: ಕರ್ನಾಟಕದ ಬಿಜೆಪಿ ಸರ್ಕಾರ ತನ್ನ ವಿಜಯದ ಸಲುವಾಗಿ ಹಾಕಿಕೊಂಡಿರುವ ಬಿಜೆಪಿಯೇ ಭರವಸೆ ಎಂಬ ಅಭಿಯಾನಕ್ಕೆ ಚಿಕ್ಕೋಡಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ ಖೇತಗೌಡರ ಚಾಲನೆ ನೀಡಿದರು.
ಅವರು ಇಂದು ಅಥಣಿಯಲ್ಲಿ ವಿಜಯ ಸಂಕಲ್ಪ ಅಭಿಯಾನ ಎಂಬ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸಹ ಸಂಘ ಸಂಚಾಲಕರಾದ ಅರವಿಂದರಾವ ದೇಶಪಾಂಡೆ ಜೀ ಅವರಿಗೆ ಪ್ರಥಮವಾಗಿ ಕರಪತ್ರ ನೀಡಿ ಅವರ ಮನೆಗೆ ಬಿಜೆಪಿಯೇ ಭರವಸೆ ಎಂಬ ಸ್ಟೀಕರ ಅಂಟಿಸುವ ಮೂಲಕ ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ ಖೇತಗೌಡರ ಚಾಲನೆ ನೀಡಿದರು.
ನಂತರ ಎಲ್ಲ ಕಾರ್ಯಕರ್ತರ ಮನೆಗೆ ಭೇಟಿ ನೀಡಿದ ಅವರು ಮಾಹಿತಿ ಕಲೆಹಾಕಿ ಈ ಬಾರಿಯೂ ಕರ್ನಾಟಕದಲ್ಲಿ ಬಿಜೆಪಿ ಗೆಲುವಿನ ವಿಜಯೋತ್ಸವ ಖಚಿತ ಎಂದು ಹೇಳಿದರು.
ವರದಿ :ಸಂಗಮೇಶ ಹಿರೇಮಠ್