ವರದಿ :ಸಂಜೀವ್ ಬ್ಯಾಕುಡೆ
ಬೆಳಗಾವಿ.ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ತನ್ನ ಪತ್ನಿಯನ್ನು ಕರೆಯಲು ಬಂದಾಗ ಹೆಂಡತಿಯು ನಾಳೆ ಹೋಗೋಣ ಎಂದಿದ್ದಕ್ಕೆ ಸಿಟ್ಟಿನಿಂದ ನಾಲ್ಕು ತಿಂಗಳ ಮಗನನ್ನೇ ಕೊಂದದಿದ್ದಾನೆ
ಮೂಲತ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದುರದುಂಡಿ ಗ್ರಾಮದ ಬಸಪ್ಪಾ ರಂಗಪ್ಪಾ ಬಳನೊಕಿ ಎಂಬ ಕೆ.ಎಸ.ಐ.ಎಸ.ಎಫ ಪೊಲೀಸ್ ಪೇದೆ ಸೋಮವಾರ ತನ್ನ ಹೆಂಡತಿಯ ತವರು ಮನೆ ಚಿಂಚಲಿ ಪಟ್ಟಣಕ್ಕೆ ಹೆಂಡತಿಯನ್ನು ಕರೆಯಲು ಬಂದಿದ್ದಾನೆ. ಹೆಂಡತಿ ಇವತ್ತು ಹಬ್ಬ ಇರೋದರಿಂದ ನಾಳೆ ಹೋಗೊನ ಎಂದಿದ್ದಾಳೆ ಅಷ್ಟಕ್ಕೇ ಸಿಟ್ಟಿಗೆದ್ದ ಪತಿ ಬಸಪ್ಪ ತನ್ನ ಕೈಯಲ್ಲಿ ಇದ್ದ ನಾಲ್ಕು ತಿಂಗಳ ಮಗ ಸಂಜೀತನನ್ನು ಮನೆಯ ಹಿಂದಿನ ಬದಿಯ ಡಾಂಬರ ರಸ್ತೆಯ ಮೇಲೆ ಜೋರಾಗಿ ಎಸೆದಿದ್ದಾನೆ. ಎಸೆದ ತಕ್ಷಣ ಭಾರಿ ಪೆಟ್ಟಾಗಿ ನಾಲ್ಕು ತಿಂಗಳ ಮಗು ಸಂಜೀತ ಪ್ರಾಣ ಬಿಟ್ಟದೆ
ಮೃತ ಮಗುವಿನ ತಂದೆ ಬಸಪ್ಪ ಸಾಂಬ್ರಾದಲ್ಲಿ ಕೆ.ಎಸ್.ಐ.ಎಸ.ಏಫ್ ಪೊಲೀಸ ಪೇದೆಯಾಗಿ ಕಾರ್ಯನಿರ್ವಹಿಸುತಿದ್ದ ಎಂದು ತಿಳಿದು ಬಂದಿದೆ.
ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.