ಬೆಳಗಾವಿ :ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಸ್ವೀಪ್ ಸಮಿತಿ ಅವರು ರಾಷ್ಟ್ರೀಯ ಮತದಾರರ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ಜಿಲ್ಲಾಮಟ್ಟದ ಕ್ವಿಜ್ ಕಾರ್ಯಕ್ರಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜು ಪ್ರಥಮ ಸ್ಥಾನ ಪಡೆದಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕುಮಾರಿ ಶೀತಲ ಶೇಟ್, ಕುಮಾರಿ ಯಲ್ಲವ್ವಾ ನಾಯಕ್, ಪ್ರವೀಣ್ ಹಡಪದ್ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ
ಇವರಿಗೆ ಬೆಳಗಾವಿ ಜಿಲ್ಲಾಧಿಕಾರಿಗಳಾದ ಶ್ರೀ ನಿತೇಶ್ ಪಾಟೀಲ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ವಿಜಯ ನಾಗಣ್ಣವರ್ , ಕುಲಸಚಿವರಾದ ಶ್ರೀಮತಿ ರಾಜಶ್ರೀ ಜೈನಾಪುರ ಅವರು ಪ್ರಶಸ್ತಿ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು. ಇವರಿಗೆ ಪ್ರಾಚಾರ್ಯರಾದ ಡಾ. ಶಂಕರ್ ತೇರದಾಳ ELC ಹಾಗೂ VAF ಕೋಶದ ಸಂಯೋಜಕರಾದ ಡಾ. ಮಲ್ಲೇಶ ದೊಡ್ಡಲಕ್ಕನ್ನವರ , ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕರಾದ ಶ್ರೀ ಪ್ರಕಾಶ್ ಕಮತಿ ಹಾಗೂ ಕಾಲೇಜಿನ ಎಲ್ಲ ಬೋದಕ ಬೋಧಕರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ