ಬೆಳಗಾವಿ.
ರಾಯಬಾಗ: ವಿದ್ಯಾರ್ಥಿಗಳು ರಕ್ತದಾನ ಮಾಡಿದರೆ ದೇಶ ಸೇವೆ ಮಾಡಿದಂತೆ’ ಎಂದು ಶಿಕ್ಷಣ ಪ್ರಸಾರಕ ಮಂಡಳದ ಅಧ್ಯಕ್ಷರಾದ ಬ್ಯಾರಿಸ್ಟರ್ ಅಮರಸಿಂಹಅಣ್ಣಾ ಪಾಟೀಲ ಹೇಳಿದರು.
ಪಟ್ಟಣದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಯಾದ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರವು ಎಷ್ಟೆ ಮುಂದುವರೆದಿದ್ದರೂ ರಕ್ತವನ್ನು ಸೃಷ್ಟಿಸಲು ಇನ್ನೂ ಸಾಧ್ಯವಾಗಿಲ್ಲ, ಆದ್ದರಿಂದ ರಕ್ತ ದಾನವನ್ನು ಪ್ರತಿಯೊಬ್ಬರೂ ಮಾಡಿ ತಮ್ಮ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬಹುದು ಎಂದರು.
ನಿಪ್ಪಾಣಿಯ ರೋಟರಿ ಚಾರಿ ಟೇಬಲ್ ಟ್ರಸ್ಟನ ಅಧ್ಯಕ್ಷರಾದ ಡಾ. ಸಿ ಬಿ ಕುರಬೇಟಿ ಮಾತನಾಡಿ, ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ಅಮೂಲ್ಯ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅತಿ ಮುಖ್ಯವಾಗಿದೆ ಆದ್ದರಿಂದ ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕೆಂದು ತಿಳಿಸಿದರು.
ಈ ರಕ್ತದಾನ ಶಿಬಿರದಲ್ಲಿ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಒಟ್ಟು 51 ಯೂನಿಟ ರಕ್ತ ಸಂಗ್ರಹಿಸಲಾಯಿತು ಇನ್ನೂ ರಕ್ತದಾನಿಗಳಿಗೆ ರೋಟರಿ ಕ್ಲಬ್ ನ ವತಿಯಿಂದ ಬ್ಯಾಗು, ಹಣ್ಣು, ಹಂಪಲ ಮತ್ತು ಪಾನೀಯ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಿಕ್ಷಣ ಪ್ರಸಾರಕ ಮಂಡಳದ ಕಾರ್ಯದರ್ಶಿಗಳಾದ ಶ್ರೀಮತಿ ಎಸ್ ಎಸ್ ಶಿಂಗಾಡಿ, ನಿವೃತ್ತ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಎಸ್ ಎಸ್ ಬಾನೆ,ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎಸ್.ಎಸ್. ಕುರಬೇಟಿ,ಉಪನ್ಯಾಸಕರಾದ ಸಿ ಎಚ್ ನಾಯಿಕ, ಎಸ್.ಎಮ್. ಲೈನದಾರ,ಆಯ್.ಆರ್ ಪತ್ತಾರ,ಎಮ್.ಆರ್ ಕಠಾರಿ, ರಾಮು ಕಾಕಡೆ ವೈದ್ಯಕೀಯ ಸಿಬ್ಬಂದಿಗಳಾದ ಡಾ. ಅಭಿಜಿತ ಕಾಂಬಳೆ,
ದೀಲಿಪ ಪಟ್ಟಾಡೆ, ಶ್ರೀಕಾಂತ ಕಾಸುಪೆ,ವನೀತಾ ಪೂಡಜಾಳೆ, ರಾಜೇಂದ್ರ ಪೂಡಜಾಳೆ, ನಂದಕುಮಾರ ಮೋಹಿತೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮವನ್ನು ಭಾಗ್ಯಶ್ರೀ ಹಿರೇಮಠ ನಿರೂಪಿಸಿ, ಪ್ರೊ.ಪಿ.ಆರ್ ಸವದತ್ತಿ ಸ್ವಾಗತಿಸಿ, ಸುನೀಲ ತಳ್ಳಕೇರಿ ವಂದಿಸಿದರು.
