ಬೆಳಗಾವಿ
ವರದಿ :ಸಚಿನ ಕಾಂಬ್ಳೆ
ಅಥಣಿ :ತಾಲೂಕಿನ ಶೇಗುಣಸಿ ಗ್ರಾಮದ ಸಿದ್ದಾರೊಡ ಮಠದ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಶ್ರೀ ಮಹಾಂತ ಪ್ರಭು ಮಹಾಸ್ವಾಮಿಗಳು ವಿರಕ್ತಮಠ ಸೇಗುಣಿಸಿ ಹಾಗೂ ಶ್ರೀ ಸದ್ಗುರು ಸಮರ್ಥ ಹನುಮಂತಪ್ಪ ಮಹಾರಾಜರು ಕಲ್ಮೇಶ್ವರ ಮಠ ಸೇಗುಣಿಸಿ ವಹಿಸಿಕೊಂಡಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀ ರಜಬ್ ಅಲಿ ಮೇಲಿನಮನಿ ಇವರು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಧರ್ಮಸ್ಥಳ ಯೋಜನೆ ನಡೆದು ಬಂದ ದಾರಿಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತ ಶ್ರೀ ಶ್ರೀಶೈಲ ಮಲ್ಲಪ್ಪ ನಾರಗೊಂಡ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಸೇಗುಣಿಸಿ ಇವರು ಧರ್ಮಸ್ಥಳ ಯೋಜನೆಗಳ ಬಗ್ಗೆ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ಮಾತನಾಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಪರೇಗೌಡ ಸಿರುಗುಪ್ಪಿ ಇವರು ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿಗಳು ಶ್ರೀ ವೀರೇಂದ್ರ ಹೆಗಡೆಯವರು ಮಾಡುತ್ತಿರುವ ಜನಪದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿಕೊಂಡ ಮಹಾಂತಪ್ರಭುಸ್ವಾಮಿಗಳು ಮತ್ತು ಸದ್ಗುರು ಸಮರ್ಥ ಹನುಮಂತಪ್ಪ ಮಹಾರಾಜರು ಧಾರ್ಮಿಕತೆ ಉಳ್ಳವನಿಗೆ ಯಾವುದೇ ಭಯವಿರುವುದಿಲ್ಲ ಅವನು ನಿರಾಳವಾಗಿ ಜೀವನವನ್ನು ನಡೆಸಬಹುದು ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಲಕ್ಷ್ಮಣ್ ಭೀಮಪ್ಪ ಆಲೂರು ಹಾಗೂ ಊರಿನ ಹಿರಿಯರಾದ ಮಲ್ಲಪ್ಪ ಶಾನವಾಡ್ ವಲಯದ ಮೇಲ್ವಿಚಾರಕರಾದ ಫಕೀರಪ್ಪ ಜಂಗಳಿ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಆಶಾ ಬೋಗುರ್ ಹಾಗೂ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು .