ಹಳ್ಳೂರ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಅತಿಥಿ ಶಿಕ್ಷಕರನ್ನು ನೇಮಿಸಿ ತಿಂಗಳ ಸಂಬಳ ನೀಡಿ ಶಿಕ್ಷಣ ಕಲಿಸಲು ಸಹಕಾರವನ್ನು ನೀಡುವ ಏಕೈಕ ಸಂಸ್ಥೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ವಲಯ ಮೇಲ್ವಿಚಾರಕಿ ರೇಣುಕಾ ತಿಳುವಳ್ಳಿ ಹೇಳಿದರು.
ಅವರು ಶಿವಾಪೂರ (ಹ) ಗ್ರಾಮದ ಸರಕಾರಿ ಪ್ರೌಡ ಶಾಲೆಯಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಹಯೋಗದೊಂದಿಗೆ ಹತ್ತನೇ ತರಗತಿ ಮಕ್ಕಳ ಆಂಗ್ಲ ಭಾಷೆಯ ಟ್ಯೂಷನ್ ಕ್ಲಾಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಬಗೆಯ ಸೌಲಭ್ಯಗಳು ಸಿಗುತ್ತವೆ ಸಂಘದ ಮಕ್ಕಳಿಗೆ ಸುಜ್ಞಾನ ನಿಧಿ, ಶಾಲೆ ಆವರಣ ಗೋಡೆ ನಿರ್ಮಾಣ, ಸೌಚಾಲಯ, ಡೆಸ್ಕ, ಬೋರ್ಡು ವಿವಿಧ ಬಗೆಯ ಸೌಲಭ್ಯಗಳು ಸಿಗುತ್ತವೆ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಪ್ರಭಾರಿ ಮುಖ್ಯೋಪಾಧ್ಯಾಯರಾದ ಎಸ್ ಸಿ ಅರಗಿ ಮಾತನಾಡಿ ನಮ್ಮ ಶಾಲೆಗೆ ಹತ್ತನೇ ತರಗತಿಯ ಮಕ್ಕಳಿಗೆ ಆಂಗ್ಲ ಭಾಷೆಯ ಶಿಕ್ಷಕರ ಕೊರತೆಯಿತ್ತು ಅವಶ್ಯಕವಾದ ಸಂದರ್ಭದಲ್ಲಿ ನಮ್ಮ ಶಾಲೆಗೆ ಶಿಕ್ಷಕರನ್ನು ನೇಮಿಸಿ ಪ್ರತಿ ತಿಂಗಳು ಸಂಬಳ ನೀಡಿ ಸಹಾಯ ಮಾಡಿದ್ದಕ್ಕೆ ನಿಜಕ್ಕೂ ಧರ್ಮಸ್ಥಳದ ಮಂಜುನಾಥ ದೇವರ ಹಾಗೂ ವೀರೇಂದ್ರ ಹೆಗಡೆಯವರ ಆಶೀರ್ವಾದ ಸದಾ ಕಾಲ ಶಾಲೆಯ ಮೇಲಿರಲಿ ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತ ಹಾಗೂ ಪತ್ರಕರ್ತ ಮುರಿಗೆಪ್ಪ ಮಾಲಗಾರ ಮಾತನಾಡಿ ಶಿಕ್ಷಣಕ್ಕೆ ಒತ್ತು ಕೊಟ್ಟು ಅನೇಕ ರೀತಿಯ ಸೌಲಭ್ಯಗಳನ್ನು ಒದಗಿಸಿ ಸಹಾಯ ಸಹಕಾರ ನೀಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಜ್ಞಾನದ ಜೊತೆಗೆ ಉತ್ತಮ ಸಂಸ್ಕಾರ ಪಡೆಯುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಟ್ಯೂಷನ್ ಕ್ಲಾಸ್ ದ ಸದುಪಯೋಗ ಪಡೆದುಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ಈ ಸಮಯದಲ್ಲಿ ಒಕ್ಕೂಟ ಅಧ್ಯಕ್ಷೆ ಮಾದೇವಿ ಕುಂಬಾಳಿ. ಕೌಸರ್ ಹಣಗಂಡಿ. ಕಸ್ತೂರಿ ಸವದಿ. ಶಿಕ್ಷಕರಾದ ಕೆ ಎಚ್ ಪಾಟೀಲ. ಎಸ್ ಆರ್ ಕೊಂಗಾಲಿ. ಎಸ್ ಎಂ ಪಾಟೀಲ. ಎಲ್ ಎಸ್ ಪಾಟೀಲ.ಎಚ್ ಬಿ ಸುಳ್ಳನ್ನವರ. ಸಿ ಬಿ ನರಸನ್ನವರ. ಜೆ ಪಿ ತಳವಾರ.ಸಂತೋಷ ಕಾಂಬಳೆ.ಸೇರಿದಂತೆ ವಿದ್ಯಾರ್ಥಿಗಳಿದ್ದು ಕಾರ್ಯಕ್ರಮವನ್ನು ಲಕ್ಷ್ಮೀ ಗೊರಗುದ್ದಿ ಸ್ವಾಗತಿಸಿ. ಪ್ರಭಾವತಿ ಢವಳೇಶ್ವರ ನಿರೂಪಿಸಿ ವಂದಿಸಿದರು.