ಬಾಲಕಿ ತೇಜಸ್ವಿನಿ ಸಾವಿಗೆ ಕಾರಣದವನಿಗೆ ಕಠಿಣ ಶಿಕ್ಷೆ ಆಗಬೇಕೆಂದು ಮನವಿ

Share the Post Now

ರಾಯಬಾಗ :ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಿವಪುರದ ಚೆನ್ನ ದಾಸರ ಸಮುದಾಯದ ಅಪ್ರಾಪ್ತ ವಯಸ್ಸಿನ ದಲಿತ ಬಾಲಕಿ ತೇಜಸ್ವಿನಿಯ ಸಾವಿಗೆ ನೇರ ಕಾರಣನಾದ ಸಾಗರದಲ್ಲಿನ ” ‘ವನಶ್ರೀ’ ವಸತಿ ನಿಲಯ”ದ ಮುಖ್ಯಸ್ಥನಾದ ಎಚ್ ಪಿ ಮಂಜಪ್ಪ ಎಂಬ ಕಾಮುಕನ ಮೇಲೆ ಪ್ರಕರಣ ದಾಖಲಿಸಿ, ಬಂದಿಸಿದರಷ್ಟೇ ಸಾಲದು. ಆ ವಸತಿ ಶಾಲೆಯಲ್ಲಿ ಈವರೆಗೂ ನಡೆದಿರುವ ಇಂತಹ ಕರ್ಮಕಾಂಡವನ್ನು ತನಿಖೆ ನಡೆಸಿ ಅವನಿಗೆ ಉಗ್ರ ಶಿಕ್ಷೆಯಾಗುವಂತೆ ಮಾಡಬೇಕು. ಜವಾಬ್ದಾರಿ ಜಾಗದಲ್ಲಿ ಇದ್ದು ಇಂತಹ ನೀಚ ಕಾರ್ಯ ಎಸಗುವ ಕಾಮುಕರಿಗೆ ಇದೊಂದು ದೊಡ್ಡ ಪಾಠವಾಗಬೇಕು. ವಸತಿ ನಿಲಯಗಳು ಬಡಮಕ್ಕಳ ಪಾಲಿನ ಜೇಲುಗಳಾಗಬಾರದು.

ಅಲೆಮಾರಿ ಚೆನ್ನ ದಾಸರ ಸಮುದಾಯವು ಈಗೀಗ ಅಲ್ಲಲ್ಲಿ ನೆಲೆ ನಿಂತು, ನಾಗರಿಕ ಬದುಕಿಗೆ ಹೊಂದಿಕೊಂಡು ನಾಲ್ಕು ಅಕ್ಷರ ಕಲಿತು ಹೊಸ ಬದುಕಿಗೆ ಕಾಲಿಡುತ್ತಿದೆ. ಇಂತಹ ನಿಕೃಷ್ಟ ಸಮುದಾಯದ ಆಶಾಕಿರಣವಾಗಿದ್ದ ತೇಜಸ್ವಿನಿಯ ದುರಂತ ಸಾವಿನಿಂದ ಆಕೆಯ ಪಾಲಕರು ಕಂಗಾಲಾಗಿದ್ದಾರೆ. ನೆಲೆಯಿಲ್ಲದ ಅವರ ಬದುಕಿಗೆ ಸರಕಾರ ಆಸರೆಯಾಗಬೇಕು. ಅವರಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಜೀವನ ಆಧಾರಕ್ಕೆ ಉಳುಮೆಗಾಗಿ ಭೂಮಿ ನೀಡಿ ಶಕ್ತಿ ತುಂಬಬೇಕೆಂದು ಈ ಮೂಲಕ ಬೆಳಗಾವಿ ಜಿಲ್ಲಾ ಚೆನ್ನ ದಾಸರ ಕ್ಷೇಮಾಭಿವೃದ್ಧಿ ಸಂಘವು ತಮ್ಮನ್ನು ಒತ್ತಾಯಿಸುತ್ತದೆ.

ಈ ಸಂದರ್ಭದಲ್ಲಿ ಜಿಲ್ಲಾ ಚೆನ್ನದಾಸರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ನಾಗೇಶ ಕಾಮಶೆಟ್ಟಿ, ಉದಯ ಗಾಣಿಗೇರಿ, ಮಹೇಂದ್ರ ಗಾಣಿಗೇರ, ಹನುಮಂತ ಸಣ್ಣಕಿನವರ , ತಾನಾಜಿ ಗಾಣಿಗೇರ, ಆಕಾಶ ಸುನಗಾರ, ಸುನೀಲ ಗಾಣಿಗೇರ, ಕುಮಾರ ಹುಲ್ಲಿನವರ, ರಾಜು ಗಾಣಿಗೇರ, ಮಹದೇವ್ ಗಾಣಿಗೇರ, ಕಲ್ಲಪ್ಪ ಗೂಳತನ್ನವರ, ನಾಗರಾಜ್ ಸಣ್ಣಕ್ಕಿ ನವರ, ಗೋವಿಂದ ಗುಡದನ್ನವರ, ಸದಾಶಿವ್ ಬೋದನ್ನವರ, ಗಣೇಶ್ ಬೋದನ್ನವರ, ಹಾಗೂ ಚೆನ್ನ ದಾಸರ ಸಮುದಾಯದ ಮುಖಂಡರು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!