ಶೀಘ್ರ ಅಧ್ಯಯನ ಭವನ ಆರಂಭಿಸಲು ಶಾಸಕ ಆಸೀಫ್ ಸೇಠ್ ಗೆ ಮನವಿ

Share the Post Now

ಬೆಳಗಾವಿ. ೦೨- ರಾಮತೀರ್ಥನಗರದಲ್ಲಿ ಬಹು ದಿನಗಳ ಬೇಡಿಕೆಯಾದ ಅಧ್ಯಯನ ಭವನ ಶೀಘ್ರ ನಿರ್ಮಿಸುವಂತೆ ಒತ್ತಾಯಿಸಿ ಸ್ನೇಹ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ಬುಧವಾರ ನಗರ ಉತ್ತರ ಕ್ಷೇತ್ರ ಶಾಸಕ ಆಸೀಫ್ ಸೇಠ ಅವರಿಗೆ ಮನವಿ ಸಲ್ಲಿಸಿದರು.

ರಾಮತೀರ್ಥನಗರ. ಅತ್ಯಂತ ದೊಡ್ಡ ಬಡಾವಣೆಯಾಗಿದ್ದು ದೊಡ್ಡ ಅಧ್ಯಯನ ಭವನದ ಅವಶ್ಯಕತೆ ಇದೆ. ಈ ಭವನ ನಿರ್ಮಿಸಿ ಕೊಡುವಂತೆ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ. ಆದರೂ ನಮ್ಮ. ಈ. ಬೇಡಿಕೆ ಈಡೇ ರಿಲ್ಲ. ದಿನದಿಂದ ದಿನಕ್ಕೆ ಕಣಬರ್ಗಿ ರಸ್ತೆಯಲ್ಲಿಯ ಶ್ರೀ ಆಂಜನೇಯ ದೇವಸ್ಥಾನ ಬಳಿ ಇರುವ ಚಿಕ್ಕ ಗ್ರಂಥಾಲಯದಲ್ಲಿ ಕೂಡ್ರಲು ಸ್ಥಳಾವಕಾಶ ಇಲ್ಲದ್ದರಿಂದ, ಹೆಚ್ಚಿನ. ಜನರಿಗೆ ಸಮಸ್ಯೆಯಾಗಿದೆ ಎಂದು ಸಂಘದ ಅಧ್ಯಕ್ಷರಾದ ಸುರೇಶ ಉರಬಿನಹಟ್ಟಿ ಹೇಳಿದರು.

ಶಾಸಕ ಸೇಠ ಅವರು ವಿನಂತಿಗೆ ಸ್ಪಂದಿಸಿ ಶೀಘ್ರದಲ್ಲಿ ಭವನ ಪ್ರಾಂಭಿಸುವದಾಗಿ ಭರವಸೆ ನೀಡಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ವಿನಯ ನಾವಲಗಟ್ಟಿ ಅವರಿಗೆ ಸೂಕ್ತ ಸ್ಥಾನ ಮಾನ ಕಲ್ಪಿಸುವಂತೆ ಶಾಸಕರನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೇಸ್ ಅಧ್ಯಕ್ಷರಾದ ವಿನಯ ನಾವಲಗಟ್ಟಿ, ಎಸ್.ಎಸ್.ಎಸ್.ಸಂಘದ. ಉಪಾಧ್ಯಕ್ಷರಾದ ಎಸ್.ಜಿ.ಕಲ್ಯಾಣಿ, ಸದಸ್ಯರಾದ ಮಹೇಶ ಚಿಟಗಿ, ದುಂಡಪ್ಪಾ ಉಳ್ಳೇಗಡ್ಡಿ, ಡಿ. ಎಂ.ಟೊಣ್ಣೆ, ಕ್ರಷ್ಣ ಪಾಟೀಲ, ಮನೋಹರ ಕಾಜಗಾರ, ಜೆ.ಜಿ.ಹುನ್ನೂರ, ಎಸ್.ಎಂ.ಮೇಲಿನಮನಿ, ದಾನಪ್ಪಾ ಹೂಗಾರ, ನಜೀರ ಅಹ್ಮೆದ ದಳವಾಯಿ, ಎಂ.ಬಿ.ತೇರಣಿ, ಮಲ್ಲಪ್ಪ ದಂಡಿನವರ , ಗುರುಸಂಗಪ್ಪಾ ಚೆಳಗೇರಿ ಸೇರಿದಂತೆ ಹಿರಿಯರು, ಸಫ಼ಸ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!