ಬೆಳಗಾವಿ.
ಬೆಳಗಾವಿ: ಜಿಲ್ಲೆಯ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಬೆಳವಣಿಗೆಗಳು ಎಕಚಕ್ರಾದಿಪತ್ಯ ಸಾಧಿಸುವ ನಿಟ್ಟಿನಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಕಾರಣ ಕ್ಷೇತ್ರದಲ್ಲಿ ಮತದಾರನ ಮೇಲೆ ಬಿಗಿಹಿಡಿತ ಸಾಧಿಸುವಲ್ಲಿ ಯಾವುದೇ ಪಕ್ಷ ಈ ಕ್ಷಣದವರೆಗೂ ಯಶಸ್ವಿಯಾಗಿಲ್ಲ ಇದಕ್ಕೆ ಬಲವಾದ ಕಾರಣ ಮರಾಠಾ ಸಮುದಾಯದ ಮತಗಳು ಅತೀ ದೊಡ್ಡ ಸಂಖ್ಯೆಯಲ್ಲಿ ಇರುವುದರಿಂದ ಅದೇ ಸಮುದಾಯದ ಇಬ್ಬರು ನಾಯಕರು ಚುನಾವಣಾ ಕಣದಲ್ಲಿ ದುಮುಕಿರುವುದು ಗ್ರಾಮೀಣ ಭಾಗದ ಮತಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ ಇದರ ಜೊತೆಗೆ ಇಲ್ಲಿಯವರೆಗೆ ಹಾಲಿ ಶಾಸಕರಿಗೆ ಸುಲಭವಾಗಿ ಗೆಲುವು ಸಾಧಿಸುವ ಲೆಕ್ಕಾಚಾರಕ್ಕೆ ಹಿನ್ನಡೆಯಾಗುವ ಭೀತಿ ಎದುರಾಗಿದೆ ಇನ್ನೂ ಸಾಹುಕಾರನ ತಂತ್ರಗಳು ಮಂತ್ರಗಳು ಸ್ತೋತ್ರಗಳನ್ನು ಮನದಟ್ಟು ಮಾಡಿಕೊಂಡಿರುವ ಕ್ಷೇತ್ರದಲ್ಲಿನ ಮತದಾರ ಯಾವುದಕ್ಕೂ ಕುಗ್ಗುತ್ತಿಲ್ಲ ಹಿಗ್ಗುತ್ತಿಲ್ಲ ಇವೆರಡೂ ರಾಷ್ಟ್ರೀಯ ಪಕ್ಷಗಳ ಮಧ್ಯೆ ದೂಮಕೇತುವಿನಂತೆ ಮಹಾರಾಷ್ಟ್ರ ಏಕೀಕರಣ ಸಮಿತಿಯ ಅಭ್ಯರ್ಥಿ ಮತಗಳನ್ನು ತಮ್ಮೆಡೆಗೆ ಸೆಳೆದುಕೊಳ್ಳುವ ತಯಾರಿ ನಡೆಸಿ ಒಂದು ಲೆಕ್ಕಾಚಾರದ ಪ್ರಕಾರ ಬಲವಾದ ಎದಿರೇಟು ನೀಡಲು ಸಜ್ಜಾಗಿದ್ದಾರೆ ಸಹಜವಾಗಿ ಕಳೆದ ನಾಲ್ಕು ಅವಧಿಗಳಿಂದ ವಂಚಿತರಾಗಿರುವ ಮರಾಠಾ ಸಮುದಾಯದ ಮತದಾರ ಎರಡು ರಾಷ್ಟ್ರೀಯ ಪಕ್ಷಗಳ ಕಿತ್ತಾಟದಲ್ಲಿ ಗೆಲುವಿನ ದಡ ತಲುಪಿದರು ಅಚ್ಚರಿಯಿಲ್ಲ ಎಂಬಂತಾಗಿದೆ ಸಾಹುಕಾರನ ಅಭಿಮಾನಿಗಳ ಬಳಗ ನಡೆಸಿರುವ ತಯಾರಿಗೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗೆ ಕನ್ನಡ ಭಾಷೆಯ ಸಂವಹನದ ಕೊರತೆ ತೊಡಕಾಗಿದೆ ಹೀಗಾಗಿ ಮೂರು ಪಕ್ಷದ ಕಾರ್ಯಕರ್ತರ ರೋಷಗಳು
ದೋಷಗಳು ಮತದಾರನ ಮೇಲೆ ರೋಚಕವಾದ ಪರಿಣಾಮ ಬೀರಿದ್ದು ಈ ದೋಷಗಳು ರೋಷಗಳು ಅಳಿದುಳಿದ ಇತರೆ ಪಕ್ಷದವರಿಗೆ ಮತಗಳು ಹರಿದುಹೋಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಹೀಗಾಗಿ. ಗೆಲುವಿನ ಅಂತರ ಬಹುದೊಡ್ಡದಾಗುವುದು ಅಸಾಧ್ಯ ಜೊತೆಗೆ ಗೆಲುವು ಸಾಧಿಸುವುದೇ ಈಗೀರುವ ಯಕ್ಷ ಪ್ರಶ್ನೆಯಾಗಿದೆ ಕಾರಣವಿಷ್ಟೇ ಮೂರು ಪಕ್ಷದ ನಾಯಕರು ಮತದಾರರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ಬಿಂಬಿಸುವ ಉನ್ಮಾದದಲ್ಲಿ ಆಯ್ಕೆಗಳ ರಸದೌತಣವನ್ನು ನೀಡಿರುವುದು ಈಗ ಕ್ಷೇತ್ರದಲ್ಲಿ ಬಿಸಿತುಪ್ಪವಾಗಿದೆ ಸಹಜವಾಗಿ ಒಂದು ತಿಂಗಳ ಹಿಂದೆ ಇದ್ದ ಲೆಕ್ಕಾಚಾರ ಕ್ಷಣ ಕ್ಷಣಕ್ಕೂ ಬದಲಾಗುತ್ತಿದೆ ಆಮಿಷಗಳಿಗೆ ಬಲಿಯಾಗುವ ಲಕ್ಷಣಗಳು ಕಾಣುತ್ತಿಲ್ಲ ಏಕೆಂದರೆ ಆಮಿಷಗಳನ್ನು ನೀಡುವುದಕ್ಕೂ ಎರ್ಪಟ್ಟಿರುವ ಪೈಪೊಟಿ ಮತದಾರನ ತಾಳ್ಮೆಯನ್ನು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುವ ಜಾಣ್ಮೆ ಗುಟ್ಟಾಗಿ ಉಳಿದಿಲ್ಲ ಇವೆಲ್ಲದರ ಮಧ್ಯೆ ಯಾವ ತಂತ್ರಗಳನ್ನು ಮಂತ್ರಗಳನ್ನು ರೋಷವನ್ನು ದೋಷಗಳನ್ನು ಸರಿಪಡಿಸಿ ಹೊಸದಾದ ರೂಪುರೇಷೆ ತಯಾರಿಸುವಲ್ಲಿ ಸಿದ್ಧಹಸ್ತರು ಯಾರಾಗುತ್ತಾರೆ ಎಂಬುವುದೇ ಕ್ಷೇತ್ರದಲ್ಲಿನ ಪ್ರಶ್ನೆಯಾಗಿದೆ ಉತ್ತರ ಜಟಿಲ ಮತ್ತು ಈ ಬಾರಿ ನಿರ್ಧಾರ ಕಠಿಣವಾಗಿದೆ…
ವರದಿ:ದಿನೇಶಕುಮಾರ ಅಜಮೇರಾ ಬೆಳಗಾವಿ