ಮನೆಯಲ್ಲಿದ್ದ ಮನೆ ಮಾಲೀಕನನ್ನು ಕಟ್ಟಿ ದರೋಡೆ ಮಾಡಿದ್ದ ಅಂತಾರಾಜ್ಯ ದರೋಡೆಕೋರರನ್ನು ಸದಲಗಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.ಸದಾಶಿವ ಗುಂಡು ಪಾಟೀಲ (55) ಸಾತಾರಾ (ಮಹಾರಾಷ್ಟ್ರ), ದೀಪಕಕುಮಾರ ಜವಾಹರ ಯಾದವ (23) ಬಿಹಾರ, ಮಾರುತಿ ಬಂಡಲಕೊಪ್ಪ (23) ಬೆಳಗಾವಿ ಹಾಗೂ ತುಕಾರಾಮ ಪಾಟೀಲ ( 22) ಗಡಿಹಿಂಗ್ಲಜ್ ಮಹಾರಾಷ್ಟ್ರ ಎಂಬುವರರನ್ನು ಬಂದಿಸಲಾಗಿದೆ
ಆಗಷ್ಟ 9 ರಂದು ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ಬಬನ ಮೊರೆ ಮನೆಯಲ್ಲಿ ರಾತ್ರಿ ನುಗ್ಗಿ ಬಬನ ಹಾಗೂ ಆತನ ಪತ್ನಿಯನ್ನು ಹಗ್ಗದಿಂದ ಕೈಕಾಲುಗಳನ್ನು ಕಟ್ಟಿ ಹಾಕಿ ಅವರಿಗೆ ಹೊಡೆದು ಬಡಿದು ಕೂರಳಿನಲ್ಲಿಯ 75 ಗ್ರಾಂ ಚಿನ್ನದ ಮಾಂಗಲ್ಯ ಸರ, ಕಿವಿಯಲ್ಲಿಯ 2.5 ಗ್ರಾಂ ತೂಕದ ಬಂಗಾರದ ಓಲೆಗಳನ್ನು ಕಿತ್ತುಕೊಂಡು ಅದರ ಜೊತೆ 2 ಸಾವಿರ ನಗದು ಹಾಗೂ ಮೊಬೈಲ್ ಪೋನ್ ದರೋಡೆ ಮಾಡಿ ಪರಾರಿಯಾಗಿದ್ದರು.
ಈ ಬಗ್ಗೆ ಬಬನ ಕೋಳಿ ಇವರು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಸದಲಗಾ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಸದರಿ ಪ್ರಕರಣದಲ್ಲಿ ಐದು ಜನ ಆರೋಪಗಳಿದ್ದು, ನಾಲ್ಕು ಜನರನ್ನು ಬಂಧಿಸಿದ್ದು,
ಇನ್ನೋರ್ವ ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬಿಸಿದ್ದಾರೆ. ಕಳ್ಳರಿಂದ ಚಿನ್ನದ ಮಾಂಗಲ್ಯ ಸರ, ಚಿನ್ನದ ಓಲೆ ಹಾಗೂ ಕೃತ್ಯಕ್ಕೆ ಬಳಿಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆ ಹಾಗೂ ಚಿಕ್ಕೋಡಿ ಉಪವಿಭಾಗದ ಡಿಎಸ್‌ಪಿಯವರ ಮಾರ್ಗದರ್ಶನದಲ್ಲಿ ಸಿಪಿಐ ವಿಶ್ವನಾಥ ಚೌಗುಲೆ, ಸದಲಗಾ ಪಿ.ಎಸ್.ಐ. ಶಿವಕುಮಾರ ಬಿರಾದಾರ, ಸಿಬ್ಬಂದಿವರ್ಗದವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.