ವರದಿ: ದಿನೇಶಕುಮಾರ ಅಜಮೇರಾ
.
ಬೆಳಗಾವಿ ಜಿಲ್ಲೆಯ ರಾಜಕೀಯ ಬೆಳವಣಿಗೆಗಳಲ್ಲಿ ಪಾರಮ್ಯ ಸಾಧಿಸಿದ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಒಂದಲ್ಲಾ ಒಂದು ಸುದ್ದಿಗಳ ಮೂಲಕ ಜನರ ಅಭಿಪ್ರಾಯ ಪಡೆದು ಇಡೀ ಬೆಳಗಾವಿ ಜಿಲ್ಲೆಯ ಹಲವು ಕ್ಷೇತ್ರಗಳಲ್ಲಿ ಪಾರುಪತ್ಯ ಸಾಧಿಸುವುದು ಹೇಗೆ ಎಂಬ ಲೆಕ್ಕಾಚಾರ ಇಟ್ಟುಕೊಂಡು ಹೆಜ್ಜೆ ಇಡುತ್ತಿದ್ದ ಸಾಹುಕಾರ ಕೊನೆಗೂ ಸಫಲತೆಯನ್ನು ಸಾಧಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ ಕುತೂಹಲದ ಸಂಗತಿಯೆಂದರೆ ಮೊದಲ ಹಂತದಲ್ಲಿ ಮೋದಿ ಅಮಿತ್ ಷಾ ಕಾರ್ಯಕ್ರಮಗಳನ್ನು ಮಾಡುವ ಮುಖಾಂತರ ತದನಂತರದ ದಿನಗಳಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಪಕ್ಷ ಸಂಘಟನೆಯ ಕಾರ್ಯ ಜೊತೆಗೆ ಕಾರ್ಯಕರ್ತರ ಸಂಘಟನೆ ಹಾಗೂ ಕೆಲವು ಪತ್ರಿಕಾ ಹೇಳಿಕೆಗಳು ಪ್ರಸ್ತುತ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ನಿಟ್ಟಿನಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ
ಈಗಿರುವ ಸ್ಥಿತಿಯಲ್ಲಿ ಸಹಜವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರವನ್ನು ಸಲೀಸಾಗಿ ಬಿಟ್ಟುಕೊಡುವ ಇರಾದೆ ಸಾಹುಕಾರನಿಗಿಲ್ಲ ಶ್ರೀ ನಾಗೇಶ ಮನೋಳಕರ ಅಷ್ಟೊಂದು ಪರಿಚಿತವಲ್ಲದ ಅಭ್ಯರ್ಥಿ ಇದ್ದರೂ ಮರಾಠಾ ಸಮುದಾಯದ ಮತಗಳು ಮಾತುಗಳು ಸಹಜವಾಗಿ ಅವರಿಗೆ ವರದಾನವಾಗುವುದರಲ್ಲಿ ಅನುಮಾನವಿಲ್ಲ ಕಾರಣ ಭಾರತೀಯ ಜನತಾ ಪಕ್ಷದ ನೇತೃತ್ವದ ಅಲೆ ಜೊತೆಗೆ ಕಾರ್ಯಕರ್ತರ ಸಂಘಟನೆ ಜೋರಾಗಿದೆ
ಸದ್ದಿಲ್ಲದೆ ಗೆಲುವಿಗೆ ದಾರಿ ಗಟ್ಟಿಗೊಳಿಸುತ್ತಿದ್ಧಾರೆ ಇದಕ್ಕಿಂತ ಹೆಚ್ಚಾಗಿ ಕಳೆದ ಚುನಾವಣೆಯಲ್ಲಿ ನೇತೃತ್ವದ ಅನುಭವ ಇದೇ ಸಾಹುಕಾರನ ತಂತ್ರಗಳು ಫಲ ಕೊಟ್ಟಿದ್ದವು ಅದನ್ನೇ ಮರುಕಳಿಸುವ ಬೆಂಕಿಯಂತಹ ಮಾತುಗಳು ಸಂಘಟನಾ ಚಾಕಚಕ್ಯತೆಯ ದಾಳಗಳು ಸಹಜವಾಗಿ ರಾಜ್ಯ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬ ಗುಮಾನಿ ಎಲ್ಲೆಡೆ ಕೇಳಿ ಬರುತ್ತಿದೆ ಇನ್ನೊಂದು ಮೂಲದ ಪ್ರಕಾರ ಇಲ್ಲಿಯವರೆಗೆ ಯಾವುದೇ ಸಾಹುಕಾರನ ದಾಳಗಳು ವ್ಯರ್ಥವಾಗದೆ ಅರ್ಥ ಕೊಡುತ್ತಲೆ ಜನರ ಅಭಿಪ್ರಾಯಗಳನ್ನು ತಮ್ಮೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ ಹೀಗಾಗಿ ಇನ್ನು ಫಲಿತಾಂಶ ಒಂದೇ ಮೇ 13 ರಂದು ಅನಾವರಣ ಆಗುವ ಮುನ್ನ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ ಎಂಬುವುದು ಸದ್ಯಕ್ಕಿರುವ ಕೂತುಹಲವಾಗಿದೆ.ಜೊತೆಗೆ ಮತದಾರನ ಮನವೊಲಿಸುವಲ್ಲಿ ಹೇಗೆ ಯಶಸ್ವಿಯಾಗುತ್ತಾರೆ ಅದಕ್ಕಿರುವ ತಂತ್ರಗಳು ಹೇಗೆ ಗೆಲುವು ಸಾಧಿಸುವ ನಿಟ್ಟಿನಲ್ಲಿ ತಯಾರಿ ಮಾಡುತ್ತಾರೆ ಎಂಬುವುದು ಕ್ಷೇತ್ರದಲ್ಲಿನ ಮಿಂಚಿನ ಮಾತುಗಳು ಗ್ರಾಮೀಣ ಮತಕ್ಷೇತ್ರದಲ್ಲಿ ಕೇಳಿ ಬರುತ್ತಿವೆ ಕಾಲವೇ ಇದಕ್ಕೆಲ್ಲಾ ಉತ್ತರ ನೀಡಬಲ್ಲದು….