ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನು ಬಂಧಿಸಸಲ್ಪಟ್ಟಿರುವಂತ ಇತಿಹಾಸ ಪ್ರಸಿದ್ಧ ಕಾರಾಗ್ರಹ ಹಾಗೂ ಬಸ್ ನಿಲ್ದಾಣ ಸಂಪೂರ್ಣವಾಗಿ ಹಾಳಾಗಿ ಹೋಗಿವೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಇತಿಹಾಸ ಪ್ರಸಿದ್ಧವಾದ ಸಂಪಗಾವಿ ಗ್ರಾಮದಲ್ಲಿ ಇರುವಂತ ಬಸ್ ನಿಲ್ದಾಣ ಸಂಪೂರ್ಣವಾಗಿ ಹದಿಗೆಟ್ಟು ಹೋಗಿದೆ
ಇಲ್ಲಿ ಕೇವಲ ಮಧ್ಯಪಾನ ಹಾಗೂ ದುಶ್ಚಟಗಳನ್ನು ಮಾಡುವಂತಹ ಜನರಿಗೆ ಮಾತ್ರ ಇದು ಒಂದು ಅಡ್ಡವಾಗಿದೆ ಸಾಕಷ್ಟು ಬಾರಿ ಸ್ಥಳೀಯರು ಗ್ರಾಮ ಪಂಚಾಯತಿಗೆ ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ
ಈ ಬಸ್ ನಿಲ್ದಾಣದ ಸುತ್ತಮುತ್ತ ಆಸ್ಪತ್ರೆ ಪ್ರೌಢಶಾಲೆ ಹಾಗೂ ಇತರೆ ಸರ್ಕಾರಿ ಕಚೇರಿಗಳು ಕೂಡ ಇವೆ ಈ ಬಸ್ ನಿಲ್ದಾಣದಲ್ಲಿ ಕೂರಲಾಗದೆ ಸಾರ್ವಜನಿಕರು ರಸ್ತೆ ಮಧ್ಯದಲ್ಲಿ ನಿಲ್ಲುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದರು ಕೂಡ ಯಾವುದೇ ಪ್ರಯೋಜನವಾಗಿಲ್ಲ ಇದಕ್ಕೆಲ್ಲ ಯಾವಾಗ ಮುಕ್ತಿ ಎಂದು ಸಾರ್ವಜನಿಕರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಬಸ್ ನಿಲ್ದಾಣದ ಸುತ್ತಮುತ್ತ ಕೇವಲ ಕಾಣಸಿಗುವುದು ಮಧ್ಯದ ಬಾಟಲಿ ಮತ್ತು ಸಿಗರೇಟ್ ಗುಟ್ಕಾ ಹೀಗೆ ಇತ್ಯಾದಿ ವಸ್ತುಗಳು ಕೇವಲ ನೋಡಲು ಸಿಗುತ್ತವೆ ಯಾವುದೇ ಸ್ವಚ್ಛತೆ ಇಲ್ಲದೆ ಕೊಬ್ಬು ನಾರುತಿದೆ ಈ ಬಸ್ ನಿಲ್ದಾಣ ಸ್ವತಂತ್ರ ಪೂರ್ವದಲ್ಲಿ ಇದೊಂದು ಐತಿಹಾಸಿಕ ಸ್ಥಳವಾಗಿತ್ತು ಹಾಗೂ ತಾಲೂಕ ಸ್ಥಳವಾಗಿತ್ತು ಆದರೆ ಇವಾಗ ನೋಡಿದರೆ ಎಲ್ಲೋ ಒಂದು ಕಡೆ ಮನಸ್ಸಿಗೆ ನೋವು ಆಗುತ್ತಿದೆ ಎಂದು ಸ್ಥಳೀಯರ ತಮ್ಮ ನೋವನ್ನು ತೋಡಿಕೊಳ್ಳುದಿದ್ದರೆ ಆದಷ್ಟು ಬೇಗನೆ ಈ ಸಮಸ್ಯೆಯನ್ನು ಪ್ರೇರಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿಕೊಳ್ಳುತ್ತಿದ್ದಾರೆ