ಛತ್ರಪತಿ ಶಾಹು ಮಹಾರಾಜ ರವರ 149 ನೇ ಜಯಂತಿ ಪ್ರಯುಕ್ತ ಸಂಕಲ್ಪ ಸಮಾವೇಶ ಹಾಗು ರಾಜ್ಯ ಸಮಿತಿ ಸರ್ವ ಸದಸ್ಯರ ಸಭೆ

Share the Post Now

ಬೆಳಗಾವಿ :ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯಕ್ಕಾಗಿ ಸಂಕಲ್ಪ ಸಮಾವೇಶ ಹಾಗು ರಾಜ್ಯ ಸಮಿತಿ ಸರ್ವ ಸದಸ್ಯರ ಸಭೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೆಂಗಳೂರು ಇವರ ಆಶ್ರಯದಲ್ಲಿ ಬೆಳಗಾವಿಯ ಅಂಬೇಡ್ಕರ ನಗರದ ಬುದ್ಧವಿಹಾರದಲ್ಲಿ ಛತ್ರಪತಿ ಶಾಹು ಮಹಾರಾಜ ರವರ 149 ನೇ ಜಯಂತಿ ಪ್ರಯುಕ್ತ ಸಂಕಲ್ಪ ಸಮಾವೇಶ ಹಾಗು ರಾಜ್ಯ ಸಮಿತಿ ಸರ್ವ ಸದಸ್ಯರ ಸಭೆ ಜರುಗಿತು

ಶೋಷಿತ ಸಮುದಾಯಗಳ ಸಾಮಾಜಿಕ ನ್ಯಾಯಕ್ಕಾಗಿ ಸಂಕಲ್ಪ ಯಾತ್ರೆಯನ್ನು ಯುವ ನಾಯಕ ರಾಹುಲ್ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು ದಿವ್ಯ ಸಾನಿದ್ಯವನ್ನು ಮೈಸೂರು ಉರಿಲಿಂಗ ಪೆದ್ದಿಮಠದ ಪೀಠಾಧ್ಯಕ್ಷರಾದ ಆಯುಷ್ಮಾನ್ ಜ್ಞಾನ ಪ್ರಕಾಶ ಬಂತೇಜಿ ರವರು ವಹಿಸಿದ್ದರು ಹಾಗ. ಭೀಮವಾದ ರಾಜ್ಯ ಸಂಚಾಲಕರಾದ ಪರಶುರಾಮ ನೀಲಾನಾಯಕ ರವರು ಅಧ್ಯಕ್ಷತೆ ವಹಿಸಿದ್ದರು

ಉದ್ಘಾಟಿಸಿ ಮಾತನಾಡಿದ ಯುವ ಕಾಂಗ್ರೆಸ್ ನಾಯಕರಾದ ಶ್ರೀ ರಾಹುಲ್ ಜಾರಕಿಹೊಳಿ ಅವರು

ಡಾ . ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಅಡಿಯಲ್ಲಿ ಶೋಷಿತ ಸಮುದಾಯಗಳ ರಕ್ಷಣೆಯನ್ನು ನಾವು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ತಂದೆಯವರಾದ ಶ್ರೀ ಸತೀಶ ಜಾರಕಿಹೊಳಿ ಅವರು ಮಾನವ ಬಂಧುತ್ವ ವೇದಿಕೆ ಮುಖಾಂತರ ನಿರಂತರವಾಗಿ ಕಾರ್ಯ‌ ಮಾಡುತ್ತಿದ್ದಾರೆ. ಬುದ್ಧ, ಬಸವ ಅಂಬೇಡ್ಕರ್ ಅವರ ಸಮಾನತೆಯ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಪ್ರತಿಯೊಂದು ಸಮುದಾಯದ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಶೋಷಿತ ವರ್ಗದ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸತೀಶ ಜಾರಕಿಹೊಳಿ ಫೌಂಡೇಶನ್ ಮೂಲಕ ಉಚಿತ ವೃತ್ತಿಪರ ತರಬೇತಿಗಳನ್ನು ನೀಡುತ್ತಿದ್ದಾರೆ‌. ನಾವೆಲ್ಲರೂ ಒಗ್ಗಟ್ಟಾಗಿ ಶೋಷಿತರ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಡಾ . ಬಾಬಾಸಾಹೇಬರ ಕನಸನ್ನು ನನಸಾಗಿ ಮಾಡೋಣ, ಭಾರತದಲ್ಲಿ ಪ್ರಜಾಪ್ರಭುತ್ವದ ಗಟ್ಟಿಗೊಳಿಸೋಣ ಎಂದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು

ಕಾರ್ಯಕ್ರಮದಲ್ಲಿ ಮಾತನಾಡಿದ ಅಕ್ಷತಾ:ಅವರು ಜಯಂತಿ, ಪ್ರತಿಮೆ ನಿರ್ಮಾಣ ಇಂದ‌ ಮಹನೀಯರ ಅರ್ಥ ಆಗಯವುದಿಲ್ಲ. ಸಿದ್ಧಾಂತ ಹಾಗೂ ಸೈದ್ಧಾಂತಿಕ ಅರ್ಥ ಆಗುತ್ತದೆ. ಇದು ನಮ್ಮಲ್ಲಿ‌ ಇಲ್ಲ‌ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಶಿಕ್ಣ, ಸಮಾನತೆಗೆ ಒತ್ತು, ವಿರೋಧಿಗಳನ್ನು ವಿರೋಧ ಹಾಕಿಕೊಂಡು ಶಾಹೂ ಮಹಾರಾಜರು ಅವಕಾಶ ಬಳಕೆ‌ಮಾಡಿಕೊಂಡು ಅವಲೋಕನ ಮಾಡಿಕೊಳ್ಳಬೇಕು. ಭಗವಂತನ ಹತ್ತಿರ ಹೋಗುವುದೇ ಎಲ್ಲ‌ಧರ್ಮಗಳ ಆಶಯ. ರಾಜರ್ಷಿ ಶಾಹೂ ಮಹರಾಜರ ಬಗ್ಗೆ ನಮ್ಮ ಜನರಿಗೆ ಋನೂ ಗೊತ್ತಿಲ್ಲ. ದಲಿತರು, ಶೂದ್ರ, ಮಬಿಳೆಯರಿಗಾಗಿ‌ ದುಡಿದಿದ್ದಾರೆ. ಮಾನಸಿಕ ಹಿಂಸೆ ಅನುಭವಿಸಿದರೂ ಮೂಲ ನಿವಾಸಿಗಳು, ಶೂದ್ರ ಪರವಾಗಿ ದುಡಿದಿದ್ದಾರೆ.

ಜನರನ್ನು ಕೊಂದು ಎಸಿ ರೂಮ್ ಲ್ಲಿ ಕುಳಿತಿದ್ದರೆ ನಿಮ್ಮಂತೆಯೇ ಬೆಳ್ಳಗಿರುತ್ತಿದ್ದೇವೆ. ಚಾತುಋವರ್ಣ ದಲ್ಲಿ ದೇವರು, ಜಾಯಿ, ಶ್ರೇಷ್ಠ, ಕನಿಷ್ಠ ದ ಬಗ್ಗೆಯೇ ಕಲಿಸುಕೊಡುತ್ತಾರೆ. ಸಮಾಜ, ಸಮಾನತೆ, ಬಗ್ಗೆ ಕಲಿಸಿ ಕೊಡುವುದಿಲ್ಲ.

೫೬ ಇಂಚು ಎದೆಯ ನಾಯಕನಿಗೆ ಮಾತನಾಡುವ ಧ್ವನಿ ಎತ್ತುವುದಿಲ್ಲ. ಬಾರತ ಮಾತೆಗೆ ಜೈ ಎನ್ನುವವರು ಒಂದೆಡೆ ಮಾತೆಯ ಸೀರೆ ಎಳೆಯುವವರ ವಿರುದ್ಧ ಯಾರೂ ಮಾತನಾಡುವುದಿಲ್ಲ. ಮುಟ್ಟಾಗದಿದ್ದರೆ ಇವರು ಹುಟ್ಟಲು ಸಾಧ್ಯವಿತ್ತೇ? ಶಾಹೂ ಮಹಾರಾಜ, ಅಂಬೇಡ್ಕತ, ಜ್ಯೋತಿಬಾ, ಸಾವಿತ್ರಿ ಬಾಯಿ ಫುಲೆ ನಮಗೆ ಆದರ್ಶ ಆಗಬೇಕು. ವ್ಯಕ್ತಿ, ಗುಡಿ ಹಾಗೂ ಬಣ್ಣ ನಮಗೆ ಆದರ್ಶ ಆಗುತ್ತಿದ್ದಾರೆ. ವ್ಯಕ್ತಿಯ ಹಿಂದೆ ಹೋಗದೇ ವಿಚಾರಗಳ ಹಿಂದೆ ಹೋಗಬೇಕು. ಎಂದರು

ಈ ಸಂದರ್ಭದಲ್ಲಿಮಹಾನಗರ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ , ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಸವರಾಜು ತಾನಾಜಿ ರಾಯವ್ವಗೋಳ ಘನ ಉಪಸ್ಥಿತಿಯನ್ನು ಅಲಂಕರಿಸಿದ್ದರು ಬಸವರಾಜು ಸ್ವಾಮೀಜಿ ,ಮಲ್ಲೇಶ ಚೌಗಲೆ ,ರವಿ ಬಸ್ತವಾಡಕರ್ ,ಕಲ್ಲಪ್ಪಾ ರಾಮಚನ್ನನವರ,  ಪರಶುರಾಮ ಒಗ್ಗೆನವರ್ ಸೇರಿದಂತೆ ಅನ್ನು ಅನೇಕರು ಉಪಸ್ಥಿತರಿದ್ದರು

Leave a Comment

Your email address will not be published. Required fields are marked *

error: Content is protected !!