ಬೆಳಗಾವಿ
ವರದಿ :ಸಚಿನ ಕಾಂಬ್ಳೆ
ಕಾಗವಾಡ: ಸಂಭ್ರಮದ ಕಾಲದಲ್ಲಿ ನಾವು ಈಗಿಲ್ಲ ಪರಮ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಅಗಲಿಕೆ ನಮ್ಮ ಸಂಸ್ಥೆಗೆ ತುಂಬಲಾರದ ನಷ್ಟ. ಅವರ ನೆನಪುಗಳೊಂದಿಗೆ ಭಾರವಾದ ಹೆಜ್ಜೆಗಳನ್ನು ಇಡಲೇಬೇಕಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯ ಚಟುವಟಿಕೆಗಳ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾಗಿರುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಂಕ್ರಾಂತಿ ಹಬ್ಬವನ್ನು ಮಹಾವಿದ್ಯಾಲಯದ ಬಿ.ಎ, ಬಿ.ಎಸ್ಸಿ ಮತ್ತು ಬಿಕಾಂ ವಿದ್ಯಾರ್ಥಿಗಳು ಸೇರಿ ಹಮ್ಮಿಕೊಂಡಿದ್ದು ಸಂತಸವನ್ನು ಉಂಟು ಮಾಡಿದೆ. ಈ ಸಂಕ್ರಾಂತಿ ಹಬ್ಬ ಸುಖ, ಸಮೃದ್ಧಿಯನ್ನು ತರಲಿ ಎಂದು ಪ್ರಾಚಾರ್ಯರಾದ ಪ್ರೊ.ವ್ಹಿ.ಎಸ್.ತುಗಶೆಟ್ಟಿಯವರು ಅಭಿಪ್ರಾಯಿಸಿದರು.
ಕಾಗವಾಡ ಶಿವಾನಂದ ಮಹಾವಿದ್ಯಾಲಯದ ಕಾಲೇಜು ಒಕ್ಕೂಟ ಹಾಗೂ ಇತಿಹಾಸ ಪರಂಪರಾಕೂಟ ಹಮ್ಮಿಕೊಂಡ ಸಂಕ್ರಾಂತಿ ಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ. ಎಸ್.ಪಿ.ತಳವಾರ ಮಾತನಾಡಿ ಈ ಹಬ್ಬವು ಸರ್ವರನ್ನು ಒಂದುಗೂಡಿಸಿ ಹಿಗ್ಗುವ ಹಬ್ಬವಾಗಿದೆ. ಏಕತೆ ಇದರ ಆಧಾರವಾಗಿದ್ದು ಸಮಬಾಳ್ವೆಯಿಂದ ಜೀವನ ನಡೆಸಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಎಲ್ಲರು ಸೇರಿ ಆಚರಿಸಿದ್ದು ಸಂಭ್ರಮವನ್ನುಂಟು ಮಾಡಿದೆ ಎಂದರು. ಸ್ವತಹ ವಿದ್ಯಾರ್ಥಿಗಳೇ ಅಡುಗೆ ಮಾಡಿ ದೇಶಿ ಊಟ ಮತ್ತು ದೇಶಿ ಉಡುಗೆತೊಟ್ಟು ಗಮನ ಸೆಳೆದರು.
ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.