ಹಳ್ಳೂರ . ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಶಿವಶಂಕರ ನಗರ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲೆ ಪ್ರಾರಂಬೋತ್ಸವನ್ನು ಬುಧವಾರ ದಂದು ಶಾಲೆಯ ಕೊಠಡಿಗಳನ್ನು ಸ್ವಚ್ಚಗೊಳಿಸಿ ಬಾಗಿಲಿಗೆ ತಳಿರು ತೋರಣಗಳಿಂದ ಸಿಂಗರಿಸಿ ಸರಸ್ವತಿ ಪೂಜೆಯೊಂದಿಗೆ ವಿದ್ಯಾರ್ಥಿಗಳನ್ನು ಶಾಲೆಯ ಕೊಠಡಿ ಒಳಗೆ ಶಿಕ್ಷಕರು ಬರಮಾಡಿಕೊಂಡರು. ಶಾಲಾ ಪ್ರಾಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮ ನಡೆಯಿತು.ಈ ಸಮಯದಲ್ಲಿ ಪ್ರಧಾನ ಗುರುಗಳು ಆರ್ ಕೆ ಮೇಲ್ಗಡೆ. ಶಿಕ್ಷಕರಾದ ಬಿ ಜೇ ಪಾರ್ಥನಳ್ಳಿ. ಆರ್ ಎಮ್ ಚಿಂಚಲಿ. ಶೋಭಾ ಮುತಾರಿ. ಅಂಜನಾ ಕುಲಿಗೊಡ. ಮಲ್ಲಪ್ಪ ಮಾಲಗಾರ. ಅಡಿವೆಪ್ಪ ಬೆಳಗಲಿ. ಶ್ರೀಶೈಲ ಕಾಪಸಿ. ಮುರಿಗೆಪ್ಪ ಮಾಲಗಾರ. ಪ್ರಕಾಶ ಬಾಗೋಡಿ. ಹಣಮಂತ ಲಕ್ಷ್ಮೇಶ್ವರ. ಸೇರಿದಂತೆ ಇನ್ನಿತರರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





