ಶಾಲೆಗಳು ಧರ್ಮಸ್ಥಳ ಇದ್ದಂತೆ: ನಾರನಗೌಡ ಉತ್ತಂಗಿ

Share the Post Now

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉತ್ತೇಜಿಸಲು ಕಲಿಕಾ ಹಬ್ಬ : ಸಿ ಆರ್ ಪಿ ಲಮಾಣಿ

ವರದಿ :ಸಂತೋಷ ಮುಗಳಿ


ಸಮೀರವಾಡಿ-ಸೈದಾಪೂರ:  ಶಾಲೆಗಳು ಧರ್ಮಸ್ಥಳ ಇಂದ್ದಂತೆ, ಬಡವ ಬಲ್ಲಿದನೆಂಬ ಬೇಧವಿಲ್ಲದೆ ಎಲ್ಲರಿಗೂ ಒಳಿತನ್ನು ಮಾಡುತ್ತವೆ. ಮಕ್ಕಳು ಉತ್ತಮ ಸಾಧನೆ ಮಾಡಲುಅವಕಾಶ ಮಾಡಿಕೊತ್ತವೆ ಎಂದು ಪತ್ರಕರ್ತ ನಾರನಗೌಡ ಉತ್ತಂಗಿ ಹೇಳಿದರು.

ಅವರು ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮುಧೊಳ ವತಿಯಿಂದ ಫೆ.14 ಶುಕ್ರವಾರದಂದು ಸೈದಾಪೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸೈದಾಪೂರ ಹಾಗೂ ಮದಬಾವಿ ಕ್ಲಸ್ಟರ್ ನ ಎಫ್ ಎಲ್ ಎನ್ ಕಲಿಕಾ ಹಬ್ಬ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡಿ, ಪ್ರಸುತ್ತ ಶಿಕ್ಷಕ ಮತ್ತು ಶಿಕ್ಷಣ ಕಲಿಯುಗದ ಕಾಮಧೇನು ಕಲ್ಪವೃಕ್ಷ ಇದ್ದಂತೆ, ದೇಶದ ಭವಿಷ್ಯ ವರ್ಗದ ಕೋಣೆಗಳಲ್ಲಿ ಅರಳುತಿದೆ, ಸುಂದರವಾದ ಸಮಾಜವನ್ನು ಕಟ್ಟುವ ಪ್ರಮುಖ ಜವಾಬ್ದಾರಿ ಶಿಕ್ಷಕರ ಮೇಲಿದೆ,  ಶಿಕ್ಷಕರಾಗಿ ಸೇವೆ ಸಲ್ಲಿಸಲು ಪೂರ್ವ ಜನ್ಮದ ಪುಣ್ಯ ಹಾಗೂ ಮಕ್ಕಳಿಗೆ ಉತ್ತಮ ಪ್ರೊತ್ಸಾಹ ನಿಡಲು ಕಲಿಕಾ ಹಬ್ಬದಂತಹ ಕಾರ್ಯಕ್ರಮಗಳನ್ನು ಅಯೋಜಿ ಕಲಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಪ್ರಾರಂಭದಲ್ಲಿ ಸರಸ್ವತಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಸಸಿಗೆ ನೀರುಣಿಸುವ ಮೂಲಕ ಕಲಿಕಾ ಹಬ್ಬ 2024-25 ರ ಕಾರ್ಯಕ್ರಮವನ್ನು ಗ್ರಾಮಪಂಚಾಯತ್ ಅಧ್ಯಕ್ಷ ಮಹಾಲಿಂಗಪ್ಪ ಸನದಿ, ರಂಗನಗೌಡ ಪಾಟೀಲ, ಎಸ್ ಡಿ ಎಂ ಸಿ ಅಧ್ಯಕ್ಷ ಬಸಪ್ಪ ವಾಲಿಕಾರ ಉದ್ಘಾಟಿಸಿದರುಉದ್ಘಾಟಿಸಿದರು.

ಬಳಿಕ ಮುಖಂಡ ರಂಗನಗೌಡ ಪಾಟೀಲ ಮಾತನಾಡುತ್ತಾ, ಸರ್ಕಾರದ ಈ ಕಲಿಕಾ ಹಬ್ಬವನ್ನು ಆಯೋಜನೆ ಮಾಡಿದ್ದು ತುಂಬಾ ಒಳ್ಳೆಯ ಕೆಲಸ ಇದರಿಂದ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಕಲಿಗೆಗೆ ಪ್ರೊತ್ಸಾಹ ನಿಡಿದಂತೆ ಆಗುತ್ತದೆ, ಮಕ್ಕಳೆ ನಮ್ಮ ದೇಶದ ಬೆನ್ನೆಲುಬು,  ಸರಕಾರಿ ಶಾಲೆ ಮತ್ತು ಖಾಸಗಿ ಶಾಲೆ ಎಂದು ಬೇದ ತೊರದೆ ಮಕ್ಕಳ ಗುರಿ ತಲುಪುವಂತೆ ಮಾಡುವವರು ಶಿಕ್ಷಕರು,ಅವರು ನಿಸ್ವಾರ್ಥ ಸೇವೆ ಸಲ್ಲಿಸಿ ಅವರ ಸರ್ವತೋಮುಖ ಪ್ರಗತಿ ಆಗುವಂತೆ ಮಾಡಿ, ಸರಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖ್ಯೆ ಹೆಚ್ಚಾಗಬೇಕು ಅದಕ್ಕೆ ನಾವು ನಿಮ್ಮೋಂದಿಗೆ ಕೈಜೋಡಿಸುತ್ತೇವೆ ಎಂದು ಹೇಳಿದರು.

ನಂತರ ಸೈದಾಪೂರ ಗ್ರಾಮ‌ ಪಂಚಾಯತಿ ಅಧ್ಯಕ್ಷ ಮಹಾಲಿಂಗಪ್ಪ ಸನದಿ ಮಾತನಾಡಿ, ನಮ್ಮ ನಿತ್ಯ ಜೀವನಕ್ಕೆ ಶಿಕ್ಷಣ ಅತ್ಯವಶ್ಯಕವಾಗಿದೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಸರ್ಕಾರದ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಿ, ಶಿಕ್ಷಣದಿಂದ ಯಾರು ಹೊರಗುಳಿಯಬಾರದು ಎಂದು ಪಾಲಕ, ಪೋಷಕರಿಗೆ ಸಲಹೆ ನೀಡಿದರು.
ಹೇಳಿಕೆ:
ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಉತ್ತೆಜನ ನೀಡಲು ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆಯು ಕಲಿಕಾ ಹಬ್ವನ್ನು ಆಚರಿಸುತ್ತಿದೆ ಅದರಂತೆ  ಈ ಕಲಿಕಾ ಹಬವನ್ನು ವಿಜೃಂಭಣೆಯಿಂದ ಆಚರಿಸಿ, ಮಕ್ಕಳಲ್ಲಿ ಕಲಿಕಾ ಮನೋಭಾವನೆಯನ್ನು ಇಮ್ಮಡಿಗೊಳಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸೊನ.
*********
ಯಮನೂರ ಲಮಾಣಿ
ಸಿ ಅರ್ ಪಿ ಸೈದಾಪೂ ಹಾಗೂ ಮದಬಾವಿ ಕ್ಲಸ್ಟರ್


ನಂತರ ಸಿ ಆರ್ ಪಿ ಯಮನೂರ ಲಮಾಣಿ ಅವರ ನೇತೃತ್ವದಲ್ಲಿ  ವಿವಿಧ ಸ್ಪರ್ಧೆಗಳನ್ನು ಏಪರ್ಡಿಸಲಾಗಿತ್ತು, ಅದರಲ್ಲಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬ್ಯಾಗ, ಕಂಪಾಸ ಮತ್ತು ಪೆನ್ನು ಪೆನ್ಸಿಲಗಳನ್ನು ಬಹುಮಾನವಾಗಿ ನೀಡಲಾಯಿತು. ಬಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಲಾಯಿತು.

ಈ ಸಂದರ್ಭದಲ್ಲಿ ಸೈದಾಪೂರ ಗ್ರಾಮ ಪಂಚಾಯತ್ ಸದಸ್ಯರಾದ ಯಮನಪ್ಪ ಉಪ್ಪಾರ, ಶಿವಲಿಂಗ ಪೋಳ,   ಎಸ್ ಡಿ ಎಂ ಸಿ ಅಧ್ಯಕ್ಷ ಬಸಪ್ಪ ವಾಲಿಕಾರ ಬಸವನೆಪ್ಪ ಬ್ಯಾಳಿ, ಸುರೇಶ ಜೋಗನ್ನವರ,ಪಿಡಿಓ ಚಿನ್ನಪ್ಪ ಹಿರೇಕುರುಬರ,  ಮುಖ್ಯ ಶಿಕ್ಷಕಿ ಶುಶಿಲಾ ಬಾಲಪ್ಪನವರ, ಶಿಕ್ಷಕ ಉಮೇಶ ಬೆನವಾಡೆ, ಎಸ.ಎನ್ ಬ್ಯಾಳಿ, ಎಸ್ ಎಮ್ ಮುಗೆನ್ನವರ ಹಾಗೂ ಮದಬಾವಿ ಮತ್ತು ಸೈದಾಪೂರ ಕ್ಲಸ್ಟರನ ಎಲ್ಲಾ ಸರಕಾರಿ ಶಾಲೆಯ ಶಿಕ್ಷಕರು ಹಾಗೂ ಮಕ್ಕಳು ಹಾಗೂ ಮತ್ತಿತರರು ಹಾಜರಿದ್ದರು

ಶಿಕ್ಷಕ ವಿಠ್ಠಲ ಭಜಂತ್ರಿ ಸ್ವಾಗತಿಸಿದರು, ಪಿ ಎಮ್ ಬ್ಯಾಕೂಡ ನೀರೂಪಿಸಿ ವಾದಿಸಿದರು.

Leave a Comment

Your email address will not be published. Required fields are marked *

error: Content is protected !!