ವಿದ್ಯಾರ್ಥಿಗಳು ಜಗತ್ತನ್ನ ಬೆಳಗಿಸುವ ದೀಪದಂತೆ ಆಗಬೇಕು
ಮುಗಳಖೋಡ: ವಿದ್ಯಾಲಯಗಳು ಅಂದರೆ ದೇವಾಲಯವಿದ್ದಂತೆ ಅದರಲ್ಲಿ ಮಕ್ಕಳು ದೇವರ ಸ್ವರೂಪ, ಮಕ್ಕಳು ದೇಶದ ಭವಿಷ್ಯ, ಶಿಕ್ಷಿಸಿ ಕ್ಷಮಿಸಿ ಶಿಸ್ತು ಕಲಿಸಿ ವಿದ್ಯಾರ್ಥಿಗಳುನ್ನು ದೇವರನ್ನಾಗಿ ಮಾಡುವವರು ಪೂಜಾರಿಗಳು ಯಾರೆಂದರೆ ಶಿಕ್ಷಕರು ಎಂದು ಪೂಜ್ಯ ಶ್ರೀ ಪ್ರದೀಪ ಘಂಟಿ ಮಹಾರಾಜರು ಹೇಳಿದರು.
ಅವರು ಪಟ್ಟಣದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಕಂಟೆಪ್ಪನವರ ತೋಟದ ಶಾಲೆಯಲ್ಲಿ ಫೆ.18 ಮಂಗಳವಾರದಂದು ನಡೆದ ಸನ್ 2024-25 ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಶಿಸ್ತು ಸಂಸ್ಕಾರದಿಂದ ಕಲಿತು ಆದರ್ಶ ವಿದ್ಯಾರ್ಥಿಗಳಾಗಿ, ಜಗತ್ತನು ಬೆಳಗುವ ದೀಪವಾಗಬೇಕು, ಆದರ್ಶ ಪಾಲಕರಿಂದ ಆದರ್ಶ ವಿದ್ಯಾರ್ಥಿಗಳು ಬರಲು ಸಾಧ್ಯ, ಮನೆಯೆ ಮೊದಲ ಪಾಠಶಾಲೆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಬೇಳೆಸಬೇಕು ಎಂದು ಮಕ್ಕಳು ಮತ್ತು ಪಾಲಕರನ್ನುದ್ದೇಶಿಸಿ ಮಾತನಾಡಿದರು.
ಸರಸ್ವತಿದೇವಿಯ ಮೂರ್ತಿಗೆ ಪೂಜಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನ ಶ್ರೀಮಠದ ಪೂಜ್ಯರಾದ ಜಗದೀಶ ಮಹಾರಾಜರು ಉದ್ಘಾಟಿಸಿದರು.
ಸಿ ಅರ್ ಪಿ ಬಿ ಸಿ ಬಾಗೆನ್ನವರ, ಕುಡಚಿ ಪಿ ಎಸ್ ಐ ಪ್ರೀತಮ ನಾಯಿಕ ಅವರು ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದರು.
ವಾರ್ಷಿಕ ಸ್ನೇಹ ಸಮ್ಮೇಳನದ ಪ್ರಯುಕ್ತ ನಡೆದ ವಾರ್ಷಿಕ ಕ್ರೀಡಾ ಕೂಟದಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ
ಹಾಗೂ ಆದರ್ಶ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳು ನೀಡಿದರು, ಬಳಿಕ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು
ಈ ಸಂದರ್ಭದಲ್ಲಿ , ಪುರಸಭೆ ಸದಸ್ಯ ಪರಶುರಾಮ ಕಡಕೋಳ, ಎಸ್ ಡಿ ಎಂ ಸಿ ಅಧ್ಯಕ್ಷ ವಿಠ್ಠಲ ಶೇಗುಣಸಿ, ಉಪಾಧ್ಯಕ್ಷ ಸಿದ್ದಪ್ಪ ಶೇಗುಣಸಿ,ನಿವೃತ್ತ ಶಿಕ್ಷಕ ಬಿ ಐ ಹುಣಸಿಕಟ್ಟಿ, ಎಸ್ ಎಸ್ ಮದಾಳೆ, ಡಿ.ವ್ಹಿ.ನಡಹಟ್ಟಿ , ರೈತ ಮುಖಂಡ ಅಶೋಕ ಗಸ್ತಿ ಪ್ರತಾಪ ಶೇಗುಣಸಿ, ವಿಠ್ಠಲ ರಗಟಿ, ನಿವೃತ್ತ ಸೈನಿಕ ಮುರೆಪ್ಪ ಶೇಗುಣಸಿ, ವಿಠಲ್ ಹೊಸೂರ, ಮಸ್ತಾನ್ ತಹಶೀಲ್ದಾರ, ಪಾಂಡು ಚೌಡಕಿ, ಬಾಜಿರಾವ್ ಕುರಾಡೆ, ವೈ ಕೆ ಭಜಂತ್ರಿ, ಮುಖ್ಯ ಶಿಕ್ಷಕ ಎಂ ಎಸ್ ಕಳ್ಳಿಗುದ್ದಿ, ಷಣ್ಮುಖ ನಾವಿ ಇತರರು ಇದ್ದರು. ಶಿಕ್ಷಕ ಎ.ಐ ನಾವಿ ಸ್ವಾಗತಿಸಿದರು. ಶ್ರೀಮತಿ ವೈ.ಎ. ಮುಗಳಖೋಡ ನಿರೂಪಿಸಿದರು. ಶ್ರೀಮತಿ ಎಂ.ಜಿ.ಕುಡ್ಡನವರ ವಂದಿಸಿದರು.
ವರದಿ : ಸಂತೋಷ ಮುಗಳಿ