ಬಾಲಕರ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ
ಗೆಲುವು ಸಾದಿಸಿದ ಸೋಮೈಯಾ ಶಾಲೆಯ ವಿದ್ಯಾರ್ಥಿಗಳು
ವರದಿ : ಸಂತೋಷ ಮುಗಳಿ
ಸಮೀರವಾಡಿ: ಇಲ್ಲಿನ ಸೋಮೈಯಾ ಶಿಶು ನಿಕೇತನ ಪ್ರಾಥಮಿಕ ಶಾಲೆಯ 14 ವಯಸ್ಸಿನ ಬಾಲಕರು ಇತ್ತಿಚೆಗೆ ಬಾಗಲಕೋಟೆಯಲ್ಲಿ ನಡೆದ ಶೈಕ್ಷಣಿಕ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾದಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಪ್ಟೆಂಬರ 27 ರಂದು ಜಿಲ್ಲಾ ಕ್ರೀಡಾಂಗಣ ಬಾಗಲಕೋಟೆಯಲ್ಲಿ ಶೈಕ್ಷಣಿಕ ಬಾಗಲಕೋಟೆ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಮುಧೋಳ ಸೇರಿದಂತೆ ಬಾಗಲಕೋಟೆ,ರಬಕವಿ ಬನಹಟ್ಟಿ, ಜಮಖಂಡಿ, ಹುನಗುಂದ, ಬಾದಾಮಿ, ಬಿಳಗಿ,ಒಟ್ಟು ಏಳು ತಾಲೂಕಿನ ಶಾಲೆಗಳ ವಿದ್ಯಾರ್ಥಿಗಳು ಬಾಗಿಯಾಗಿದ್ದರು. ಅದರಲ್ಲಿ ಮುಧೋಳ ತಾಲೂಕಿನಿಂದ ಸೋಮೈಯಾ ಶಿಶು ನಿಕೇತನ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ದೈಹಿಕ ಶಿಕ್ಷಕ ಬಸವರಾಜ ಕುರಾಡೆ ಇವರ ಮಾರ್ಗದರ್ಶನದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಹಾಗೂ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಬಿ.ಆರ್ ಬಕ್ಷಿ, ಕಾರ್ಯದರ್ಶಿ ಡಾ. ವ್ಹಿ ಪಿ ಕಣವಿ ಹಾಗೂ ಸರ್ವ ಸದಸ್ಯರು, ಮುಖ್ಯೋಪಾಧ್ಯಾಯ ಎಸ್ ಎಸ್ ನಡುವಿನಮನಿ ಹಾಗೂ ಸಿಬ್ಬಂದಿಯವರು ಅಭಿನಂದಿಸಿ ವಿಭಾಗ ಮಟ್ಟದಲ್ಲಿ ಗೆಲುವು ಸಾದಿಸಲು ಶುಭ ಹಾರೈಸಿದರು.