ಬೆಳಗಾವಿ :ಇಂದು ಬೆಳಗಾವಿ ಸರ್ಕಿಟ್ ಹೌಸಿನಲ್ಲಿ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಪದಾಧಿಕಾರಿಗಳ ಆಯ್ಕೆಗೆ ಚಾಲನೆ ನೀಡಲಾಯಿತು.
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷರನ್ನಾಗಿ ಶ್ರೀ ರವಿ ಬಿ ಕಾಂಬಳೆ (ಹುಕ್ಕೇರಿ)
ಜಿಲ್ಲಾ ಉಪಾಧ್ಯಕ್ಷರಾಗಿ ಈರಣ್ಣ ಎಚ್ ಹುಲ್ಲೋರ(ಯರಗಟ್ಟಿ).
ಕಾರ್ಯದರ್ಶಿ
ಎಮ್ ಕೆ ಯಾದವಾಡ (ರಾಮದುರ್ಗ)
ಜಿಲ್ಲಾ ಕಾರ್ಯದರ್ಶಿ ಶಿವಾಜಿ ಎನ್ ಬಾಳೆಶಗೋಳ (ಹುಕ್ಕೇರಿ)
ಮಹಿಳಾ ಉಪಾಧ್ಯಕ್ಷರು ಶ್ರೀಮತಿ ನಾಗವೇಣಿ ಹುಲಿಕೇರಿ(ಬೈಲಹೊಂಗಲ)
ಸಹ ಕಾರ್ಯದರ್ಶಿ ಮನೋಹರ ಮೆಗೇರಿ.(ಗೋಕಾಕ)
ಸಹ ಕಾರ್ಯದರ್ಶಿ ತಳವಾರ (ಮೂಡಲಗಿ)
ಹುಕ್ಕೇರಿ ತಾಲೂಕಾ ಅಧ್ಯಕ್ಷರಾಗಿ ಸುನೀಲ್ ಲಾಳಗೆ. ಉಪಾಧ್ಯಕ್ಷರಾಗಿ
ಕಲ್ಲಪ್ಪಾ ಮಾಳಾಜ
ಇವರನ್ನು ರಾಜ್ಯಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಬಂಗ್ಲೆ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.
ನಂತರ ಎಲ್ಲಾ ಪದಾಧಿಕಾರಿಗಳ ಕುರಿತು ರಾಜ್ಯಾಧ್ಯಕ್ಷರು ಮಾತನಾಡಿ
ಈಗ ಬೆಳಗಾವಿ ಜಿಲ್ಲೆಯ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು ಯಾವುದೇ ವ್ಯಕ್ತಿಗೆ ಅನ್ಯಾಯ ಆಗದ ಹಾಗೆ ನೋಡಿಕೊಳ್ಳಿ ಮತ್ತು ಸಂಘಟನೆಯು ಇನ್ನೂ ಹೆಚ್ಚಿನ ಪ್ರಮಾಣದ ಸದೃಢವಾಗಿ ಬಲಪಡಿಸಿ ಎಂದು ಕಿವಿಮಾತು ಹೇಳಿದರು.