ಬೆಳಗಾವಿ
ವರದಿ :ಶ್ರೀನಾಥ ಶಿರಗೂರ
ಪರಮಾನಂದವಾಡಿ: ರಾಜ್ಯಕಾರಣವೇ ಬೇರೆ ಸಹಕಾರ ಕ್ಷೇತ್ರವೇ ಬೇರೆ ದೇಶಕ್ಕೆ ಅನ್ನ ಕೊಡುವಂತಹ ರೈತನ ಸೇವೆ ಮಾಡುವುದು ಮತ್ತು ದೇಶವನ್ನು ರಕ್ಷಣೆ ಮಾಡುವಂತಹ ಯೋಧನ ಸೇವೆ ಮಾಡುವುದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಆಗಿರಬೇಕು ಪ್ರಥಮವಾಗಿ ದೇಶದ ಜನರ ಹೊಟ್ಟೆಗೆ ಅನ್ನ ಹಾಕುವ ರೈತರ ಸೇವೆ ಮಾಡುವುದು ನಮ್ಮ ನಿಮ್ಮೆಲ್ಲರ ಪರಮಧರ್ಮ ಎಂದು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಚಿಕ್ಕೋಡಿಯ ಮಾಜಿ ಸಂಸದರು ಆದ ರಮೇಶ್ ಕತ್ತಿ ಹೇಳಿದರು.
ಅವರು ಸಮೀಪದ ಖೇಮಲಾಪೂರ ಗ್ರಾಮದಲ್ಲಿ ನಡೆದ ದಿ. ಖೇಮಲಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. (ದಕ್ಷಿಣ) ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಮಾಜಿಕವಾಗಿ ನಾವು ಅಷ್ಟೇ ಬೆಳೆಯಬಾರದು ನಮ್ಮ ಜೊತೆ ಜೊತೆಗೆ ಇದ್ದವರನ್ನು ಬೆಳೆಸಬೇಕು. ಸಹಕಾರ ಕ್ಷೇತ್ರವು ಉಳಿಯಬೇಕಾದರೆ ದೇಶಕ್ಕೆ ಅನ್ನ ಹಾಕುವ ರೈತ ಮೊದಲು ಉಳಿಯಬೇಕು ಮತ್ತು ದೇಶವನ್ನು ಸಂರಕ್ಷಣೆ ಮಾಡುವ ಸೈನಿಕರ ಕುಟುಂಬ ಉಳಿಯಬೇಕು. ವರ್ಷದ 12 ತಿಂಗಳು ಮಳೆಗಾಲ, ಚಳಿಗಾಲ, ಬೇಸಿಗೆಕಾಲ ಎನ್ನದೆ ದಿನದ 24 ಗಂಟೆಯು ನಿರಂತರವಾಗಿ ದುಡಿಯುತ್ತಿರುವ ಈ
ಇಬ್ಬರ ಸೇವೆಯನ್ನು ನಾವು ಎಂದೆಂದಿಗೂ ಮರೆಯಬಾರದು ಪ್ರತಿದಿನವೂ ಇಬ್ಬರು ಯೋಧರನ್ನು ಸ್ಮರಿಸಿ ಊಟ ಮಾಡಬೇಕು. ಎಂದು ರೈತರನ್ನು ಮತ್ತು ದೇಶವನ್ನು ಕಾಯುವ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು.
ಪರಮಾನಂದವಾಡಿಯ ಶ್ರೀ ಗುರುದೇವ ಬ್ರಹ್ಮಾನಂದ ಆಶ್ರಮದ ಪೂಜ್ಯರಾದ ಶ್ರೀ ಸದ್ಗುರು ಡಾ. ಅಭಿನವ ಬ್ರಹ್ಮಾನಂದ ಮಹಾಸ್ವಾಮಿಜಿಗಳು ದಿವ್ಯ ಸಾನಿಧ್ಯ ವಹಿಸಿ ಆಗಮಿಸಿದ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು. ಕುಡಚಿ ಮಾಜಿ ಶಾಸಕರು ಹಾಗೂ ಭೂಸೇನಾ ನಿಗಮದ ಮಾಜಿ ಅಧ್ಯಕ್ಷರು ಆದ ಎಸ್.ಬಿ.ಘಾಟಗೆ ಉದ್ಘಾಟಕರಾಗಿ ಆಗಮಿಸಿ ಪ್ರಾಸ್ತಾವಿಕವಾಗಿ ಸಹಕಾರಿ ಸಂಘದ ಕುರಿತು ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಅಪ್ಪಾಸಾಹೇಬ ಕುಲಗುಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜಶೇಖರ ಪಾಟೀಲ, ಬಸನಗೌಡ ಆಸಂಗಿ, ಸುರೇಶ್ ಬೆಲ್ಲದ, ಡಿ.ಸಿ.ಸದಲಗಿ, ತಾಲೂಕಾ ನಿಯಂತ್ರಣ ಅಧಿಕಾರಿಗಳು ಆದ ಬಿ.ಎಸ್. ರಬಗಲ, ಸಹಕಾರ ಅಭಿವೃದ್ಧಿ ಅಧಿಕಾರಿಗಳು ಆದ ಶಂಕರ ಕರಬಸನ್ನವರ, ಶಿವಾನಂದ ಸತ್ತಿ, ಯೋಗೇಶ ಕುಲಕರ್ಣಿ, ನಿಪ್ಪಾಣಿಯ ಲೆಕ್ಕ ಪರಿಶೋಧಕರು ಹಾಗೂ ತೆರಿಗೆ ಸಲಹೆಗಾರರು ಆದ ಕಿಶೋರ ಬಾಳಿ, ಸಹಕಾರಿ ಸಂಘದ ಅಧ್ಯಕ್ಷರಾದ ಮಹಾದೇವ ಖಡಕಭಾಂವಿ, ಮುಖ್ಯ ಕಾರ್ಯನಿರ್ವಾಹಕರ ಅಧಿಕಾರಿಯಾದ ಸಾಗರ ಖಡಕಭಾಂವಿ ಇನ್ನು ಮುಂತಾದ ನಿರ್ದೇಶಕರು,ಸರ್ವ ಸದಸ್ಯರು ಹಾಗೂ ಗ್ರಾಮದ ರೈತ ಮುಖಂಡರು ಮತ್ತು ಗ್ರಾಮ ಪಂಚಾಯತ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಭಾಗವಹಿಸಿದ್ದರು.