ಮುಗಳಖೋಡ ಪುರಸಭೆಯ ನೂತನ ಅಧ್ಯಕ್ಷರಾಗಿ ಶಾಂತವ್ವ ಗೋಕಾಕ, ಉಪಾಧ್ಯಕ್ಷರಾಗಿ ಗಂಗವ್ವ ಬೆಳಗಲಿ ಅವಿರೋಧವಾಗಿ ಆಯ್ಕೆ

Share the Post Now


ಬೆಳಗಾವಿ.ಮುಗಳಖೋಡ

ಉಸ್ತುವಾರಿ ಮಂತ್ರಿ, ಚಿಕ್ಕೋಡಿ ಸಂಸದರು, ಕುಡಚಿ ಶಾಸಕರು ಕಾಂಗ್ರೆಸ್ ಪಕ್ಷದವರೇ ಇದ್ದರೂ ಮುಗಳಖೋಡ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗ;

ಅಧ್ಯಕ್ಷರಾಗಿ ಶಾಂತವ್ವ ಗೋಕಾಕ, ಉಪಾಧ್ಯಕ್ಷರಾಗಿ ಗಂಗವ್ವ ಬೆಳಗಲಿ ಅವಿರೋಧವಾಗಿ ಆಯ್ಕೆ: ತಹಶೀಲ್ದಾರ್ ಸುರೇಶ ಮುಂಜೆ;

ಮುಗಳಖೋಡ:  ಪುರಸಭೆಯ ನೂತನ ಅಧ್ಯಕ್ಷರಾಗಿ ಶಾಂತವ್ವ ಗೋಪಾಲ ಗೋಕಾಕ ಹಾಗೂ ಉಪಾಧ್ಯಕ್ಷರಾಗಿ ಗಂಗವ್ವ ಹನುಮಂತ ಬೆಳಗಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಹಶೀಲ್ದಾರ್ ಸುರೇಶ ಮುಂಜೆ ತಿಳಿಸಿದರು.

ಅವರು ಮುಗಳಖೋಡ ಪುರಸಭೆಯ ಸಭಾ ಭವನದಲ್ಲಿ ದಿ. 27ರಂದು ಜರುಗಿದ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಸಂದರ್ಭದಲ್ಲಿ ಮಾತನಾಡುತ್ತ
ಪುರಸಭೆಗೆ ಅಧ್ಯಕ್ಷ ಸ್ಥಾನ ‘ಹಿಂದುಳಿದ ವರ್ಗ ಅ ಮಹಿಳೆ’ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ “ಸಾಮಾನ್ಯ ಮಹಿಳೆ” ಮೀಸಲಾತಿ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಶಾಂತವ್ವ ಗೋಪಾಲ ಗೋಕಾಕ ಒಬ್ಬರೇ ನಾಮಪತ್ರ ಸಲ್ಲಿಸಿದರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗವ್ವ ಹನುಮಂತ ಬೆಳಗಲಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಇಬ್ಬರು ಅಧ್ಯಕ್ಷ- ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗದರು.  30 ತಿಂಗಳ ಕಾಲಾವಧಿಯಲ್ಲಿ ಮುಗಳಖೋಡ ಪುರಸಭೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿ. ತಾಲೂಕ ಆಡಳಿತವು ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ರೀತಿ ಸಹಕಾರ ನೀಡಲಾಗುವುದೆಂದು ತಿಳಿಸಿದರು.

ಬಿಜೆಪಿ ಪಕ್ಷದ ಚುನಾಯಿತ ಸದಸ್ಯರಾದ ರಾಜಶೇಖರ ನಾಯಿಕ, ಅನಸೂಯಾ ಲಮಾಣಿ, ಹಾಲಪ್ಪ ಶೇಗುಣಸಿ, ಗೀತಾ ಪ್ರಧಾನಿ, ಲಕ್ಷ್ಮಿಬಾಯಿ ಶೇಗುಣಿಸಿ, ಚೇತನಕುಮಾರ ಯಡವಣ್ಣವರ, ಮಂಗಲ ಪಣದಿ, ಗಂಗವ್ವ ಬೆಳಗಲಿ, ಐರವ್ವ ವಾಡೆಣ್ಣವರ, ಮಹಾಂತೇಶ ಯರಡತ್ತಿ, ಸಾವಿತ್ರಿ ಯಡವಣ್ಣವರ, ಶಾಂತವ್ವ ಗೋಕಾಕ, ಕೆಂಪಣ್ಣ ಅಂಗಡಿ, ಓರ್ವ ಪಕ್ಷೇತರ ಸದಸ್ಯೆ ಪ್ರತಿಭಾ ಹೊಸಪೇಟಿರವರು ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಹಾಜರಿದ್ದರು.

ಕಾಂಗ್ರೆಸ್ ಪಕ್ಷದ ಸದಸ್ಯರಾದ ಸಂಜಯ ಕುಲಿಗೋಡ, ರಮೇಶ ಯಡವಣ್ಣವರ, ಮಹಾವೀರ ಕುರಾಡೆ, ಅಂಜಲಿ ಕುಲಿಗೋಡ, ಪಕ್ಷೇತರ ಸದಸ್ಯರಾದ ಪರಗೌಡ ಖೇತಗೌಡರ, ರಾವಸಾಬ ಗೌಲೆತ್ತಿನ್ನವರ, ಶೈಲಾ ತೂಗದಲಿ, ಭೀರಪ್ಪ ಹಳಿಂಗಳಿ, ಪರಶುರಾಮ ಕಡಕೋಳ ಸಭೆಯಲ್ಲಿ ಗೈರಾಗಿದ್ದರು.

ಚುನಾವಣೆ ಅಧಿಕಾರಿ ತಹಶೀಲ್ದಾರ್ ಸುರೇಶ ಮುಂಚೆ, ಪುರಸಭೆ ಮುಖ್ಯ ಅಧಿಕಾರಿ ಉದಯಕುಮಾರ ಘಟಕಾಂಬಳೆ, ಕಂದಾಯ ನಿರೀಕ್ಷಕ ಮಹೇಶ ಭಜಂತ್ರಿ, ಗ್ರಾಮ ಆಡಳಿತ ಅಧಿಕಾರಿ ಎಸ್.ಎಸ್.ಹತ್ತರಿಕಿ, ಸಿಪಿಐ ರವಿಚಂದ್ರನ್ ಡಿ.ಬಿ, ಪಿಎಸ್ಐ ಮಾಳಪ್ಪ ಪೂಜಾರಿ, ಪಿಎಸ್ಐ ಪ್ರೀತಮ್ ನಾಯಿಕ, ಕ್ರೈಂ ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ  ಪೊಲೀಸ್ ಬಿಗಿ ಬಂದುಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ಮಾಜಿ ಶಾಸಕ ಪಿ.ರಾಜೀವ್ ಅವರ ನೇತೃತ್ವದಲ್ಲಿ ಎಲ್ಲ 13 ಜನ ಬಿಜೆಪಿ ಸದಸ್ಯರು ಹಾಗೂ ಒಬ್ಬರು ಪಕ್ಷೇತರ ಮಹಿಳಾ ಸದಸ್ಯರು ವಿಜಯದ ಸಂಕೇತ ತೋರಿಸುದೊಂದಿಗೆ ಜಯ ಘೋಷಾ ಮೊಳಗಿತು. ಪಟಾಕಿ ಸುಟ್ಟು ಗುಲಾಲ ಎರಚಿ, ಡಿಜೆಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿ ಪಕ್ಷದ ಕಾರ್ಯಕರ್ತರೊಂದಿಗೆ ವಿಜಯೋತ್ಸವ ಆಚರಿಸಿದರು.
ಮಾಜಿ ಶಾಸಕ ಪಿ.ರಾಜೀವ್ ಅವರ ನೇತೃತ್ವದಲ್ಲಿ ಪುರಸಭೆ ಕಾರ್ಯಾಲಯದಿಂದ ಪಾದಯಾತ್ರೆ ಮೂಲಕ ಸದ್ಗುರು ಶ್ರೀ ಯಲ್ಲಾಲಿಂಗೇಶ್ವರ ಬ್ರಹ್ಮ ಮಠದ ಮಠಕ್ಕೆ ಹೋಗಿ ಶ್ರೀ ಯಲ್ಲಾಲಿಂಗೇಶ್ವರ ಕರ್ತೃ ಗದ್ದಿಗೆಯ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಬಿಜೆಪಿ ಕುಡಚಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ರಮೇಶ ಖೇತಗೌಡರ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಶಿವಾನಂದ ಗೋಕಾಕ, ಕುಡಚಿ ಪುರಸಭೆ ಮಾಜಿ ಅಧ್ಯಕ್ಷ ದತ್ತಾ ಸಣ್ಣಕ್ಕಿ, ಗೌಡಪ್ಪ ಖೇತಗೌಡರ, ಮಾರುತಿ ಗೋಕಾಕ, ಸಚಿನ್ ಪ್ರಧಾನಿ, ಗುತ್ತಿಗೆದಾರ ಲಕ್ಷ್ಮಣ ಗೋಕಾಕ, ಮೋಹನ್ ಲೋಹಾರ, ಗೋಪಾಲ ಗೋಕಾಕ, ಕುಮಾರ ಹಳಕಲ್ಲ, ಮುತ್ತಪ್ಪ ಬಾಳೋಜಿ, ಶಿವಬಸು ಕಾಪಶಿ, ಗೋಪಾಲ ಯಡವಣ್ಣವರ, ಭೀಮಶಿ ಬನಶಂಕರಿ, ಕೃಷ್ಣರಾವ್ ನಾಯಿಕ, ಮಹಾದೇವ ತೇರದಾಳ, ಹಣಮಂತ ಕುಲಿಗೋಡ, ಕೇಶವ್ ವಾಡೆನ್ನವರ, ಶಿವಾನಂದ ಮೇಕ್ಕಳಕಿ, ಅಗ್ರಾಣಿ ಶೇಗುಣಶಿ, ಬಸವರಾಜ ಹೊಸಪೇಟಿ, ರಾಯಗೌಡ ಖೇತಾಗೌಡರ, ನಾಗಪ್ಪ ಹುಕ್ಕೇರಿ,  ಪ್ರಕಾಶ ಪಾಟೀಲ ಇತರರು ಇದ್ದರು.

“ಉಸ್ತುವಾರಿ ಮಂತ್ರಿ ಸತೀಶ್ ಜಾರಕಿಹೊಳಿ, ಚಿಕ್ಕೋಡಿ ಸಂಸದೆ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಹಾಗೂ ಕುಡಚಿ ಮತಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ ಕಾಂಗ್ರೆಸ್ ಪಕ್ಷದ ಘಟಾನುಘಟಿಗಳು ಇದ್ದರೂ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಯಿತು. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಅನೇಕ ಲೆಕ್ಕಾಚಾರಗಳು ಬುಡಮೇಲಾದವು.  ಕಾಂಗ್ರೆಸ್ ಪಕ್ಷದ 04 ಜನ ಸದಸ್ಯರು 05 ಜನ ಪಕ್ಷೇತರ ಸದಸ್ಯರ ಬಲದಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ತೆರೆಮರೆಯ ಕಸರತ್ತು ಕೈಗೂಡಲಿಲ್ಲವೆಂದು ಸಾರ್ವಜನಿಕರು ಮಾತನಾಡುತ್ತಿದ್ದರು”
==============

Leave a Comment

Your email address will not be published. Required fields are marked *

error: Content is protected !!