ಶಿರಗುಪ್ಪಿ: ನೂತನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೋ ಆಫ್ ಸೊಸೈಟಿ ಉದ್ಘಾಟನೆ

Share the Post Now

ಬೆಳಗಾವಿ. ಕಾಗವಾಡ.ಸಮೀಪದ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಇತ್ತೀಚೆಗೆ ನೂತನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕೋ-ಆಪ್ ಸೊಸೈಟಿ ಉದ್ಘಾಟನೆಗೊಂಡಿತು.

ಸರಳ ಸಮಾರಂಭದಲ್ಲಿ ಆಗಮಿಸಿದ್ದ ಗಣ್ಯರು ಸಸಿಗೆ ನೀರೆರೆದು, ನೂತನ ಡಾ. ಎಪಿಜೆ ಅಬ್ದುಲ್ ಕಲಾಂ ಕೋ-ಆಪ್ ಸೊಸೈಟಿಯನ್ನು ಶಿರಗುಪ್ಪಿ ಗ್ರಾ.ಪಂ. ಅಧ್ಯಕ್ಷರಾದ ಅಕ್ಕಾತಾಯಿ ಪೂಜಾರಿ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಈ ಸಮಯದಲ್ಲಿ ಗ್ರಾಮದ ವೈದ್ಯರಾದ ಡಾ. ಮೋಹನ ಭೋಮಾಜ್, ಮುಖಂಡರಾದ ಭಮ್ಮಣ್ಣಾ ಚೌಗುಲೆ, ವಿಜಯ ಅಕಿವಾಟೆ, ಸುರೇಶ ಚೌಗುಲೆ, ಸುಲೇಮಾನ ಅಲಾಸೆ ಮುಂತಾದವರು ಮಾತನಾಡಿ, ಶಿರಗುಪ್ಪಿ ಗ್ರಾಮದಲ್ಲಿ ಸಾಕಷ್ಟು ಸಹಕಾರಿ ಸಂಸ್ಥೆಗಳು ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಎಲ್ಲ ಸಂಘ-ಸಂಸ್ಥೆಗಳು ಪ್ರಗತಿ ಪಥದಲ್ಲಿ ಸಾಗುತ್ತಿವೆ. ಅದರಂತೆ ಈ ಸಹಕಾರಿಯು ಕೂಡಾ ಪ್ರಗತಿ ಪಥದಲ್ಲಿ ಸಾಗಲಿ ಎಂದು ಶುಭಾಶಯ ಕೋರಿದರು. ಆಗಮಿಸಿದ್ದ ಅತಿಥಿಗಳಿಗೆ ಸಹಕಾರಿಯ ನಿರ್ದೇಶಕರು ಗುಲಾಬಿ ಪುಷ್ಪವನ್ನು ನೀಡಿ, ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ದೀಪು ಪಾಟೀಲ, ಅಜೀತ ಪೂಜಾರಿ, ರಾಜೇಂದ್ರ ಚೌಗುಲೆ, ಭೀಮು ಭೋಲೆ, ಪ್ರಕಾಶ ಹೇಮಗಿರೆ ಸುಭಾಷ ಮೊನೆ, ಪ್ರಲ್ಹಾದ ಪಾಟೀಲ, ದಾದಗೌಡಾ ಪಾಟೀಲ, ಅಪ್ಪಾಸಾಬ ಕೋಳಿ, ಮಹಮ್ಮದ ಗೌಂಡಿ, ಅಜೀತ ಕಾಗವಾಡೆ, ಹಮ್ಮಿದಸಾಬ ಗೌಂಡಿ, ಸದ್ದಾಂ ಕನವಾಡೆ, ಫಯಾಜ್ ಸನದಿ, ಅಜೀತ ನಾಂದನಿ, ವಿದ್ಯಾಧರ ಚೌಗುಲೆ, ನ್ಯಾಯವಾದಿಗಳಾದ ಜಿನೇಂದ್ರ ಕುರುಂದವಾಡೆ, ಸಂಘದ ಅಧ್ಯಕ್ಷರಾದ ಅಲ್ತಾಫ ಕನವಾಡೆ, ಉಪಾಧ್ಯಕ್ಷರಾದ ಆರೀಫ್ ಶಿರಗುಪ್ಪೆ, ಸದಸ್ಯರಾದ ಭೋಲಾ ರಾಜಾಪೂರೆ, ಅಲ್ಲಾವುದ್ದೀನ ಸನದಿ, ಮುಬಾರಕ ದೇವನಾಳೆ, ಧೋಂಡಿ ರಾಯಬಾಗೆ, ಅಬ್ದುಲ್ ಬಲಬಂಡ, ಮಹಮ್ಮದ ಇಚಲಕರಂಜಿ, ರಫೀಕ ಸನದಿ, ಪ್ರಕಾಶ ಕೋಳಿ, ಶ್ರೀಮತಿ ಆಯೇಶಾ ಅಲಾಸೆ, ಶ್ರೀಮತಿ ಆರೀಫಾ ಕನವಾಡೆ, ರಾಘವೇಂದ್ರ ಬನ್ನಿಹಟ್ಟಿಕರ, ಕಾರ್ಯದರ್ಶಿ ಆಶೀಫ್ ರಾಯಬಾಗೆ ಸೇರಿದಂತೆ ಸಹಕಾರಿಯ ಸಿಬ್ಬಂದಿ ವರ್ಗದವರು, ಅಂಜುಮನ್ ಇಸ್ಲಾಂ ಜಮಾತನ ಎಲ್ಲ ಬಾಂಧವರು, ಕೋಳಿ ಸಮಾಜ ಬಾಂಧವರು, ಗ್ರಾಮದ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. ಆರೀಫ ಶಿರಗುಪ್ಪಿ ಅತಿಥಿಗಳನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

ವರದಿ:ಡಾ.ಜಯವೀರ ಎ.ಕೆ*.
*ಖೇಮಲಾಪುರ*

Leave a Comment

Your email address will not be published. Required fields are marked *

error: Content is protected !!