ಶಿವಲಿಂಗ ಮುನ್ಯಾಳ ಭಜನಾ ಕಲಾವಿದನಿಗೆ ಗೌರವ ಡಾಕ್ಟರೇಟ್ ಪುರಸ್ಕಾರ

Share the Post Now

ಬೆಳಗಾವಿ.


ಮುಗಳಖೋಡ : ಪಟ್ಟಣದ ಭಜನಾ ಕಲಾವಿದ, ಹಾಗೂ ಹಾರ್ಮೋನಿಯಂ ವಾದಕ ಶಿವಲಿಂಗ ರಾಮಪ್ಪ ಮುನ್ಯಾಳ ಇವರು  ಭಜನಾ ಹಾಡಿನ ಮೂಲಕ ಗುರುತಿಸಿಕೊಂಡಿದ್ದಾರೆ. ಇವರ  ಸೇವೆಯನ್ನು ಕಂಡು ಇತ್ತೀಚೆಗೆ ತಮಿಳುನಾಡಿನ ಏಷ್ಯಾ ಇಂಟರ್ನ್ಯಾಷನಲ್ ರಿಸರ್ಚ್ ಅಂಡ್ ಕಲ್ಚರಲ್ ಯೂನಿವರ್ಸಿಟಿ ವತಿಯಿಂದ ” ಶಿವ ಭಜನೆ” ನಿಮಿತ್ತ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.

ಅವರು  30 ವರ್ಷಗಳಿಂದ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳು ಹಾಗೂ ಬೇರೆ ಬೇರೆ ಜಿಲ್ಲೆಗಳಲ್ಲಿ ಭಜನೆ ಹಾಡು ಹಾಡುತ್ತಾ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರಿಗೆ ಗೌರವ ಡಾಕ್ಟರೇಟ್ ಪುರಸ್ಕಾರ ಸೇರಿದಂತೆ, “ಕೌಜಲಗಿ ನಿಂಗಮ್ಮ ಪ್ರಶಸ್ತಿ”, ಮತ್ತು  ಹುಲ್ಯಾಳ  ಮಹಾದೇವಪ್ಪ ಪ್ರಶಸ್ತಿಗಳು ಕೂಡಾ ದೊರಕಿವೆ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.

ಹೇಳಿಕೆ::::::::::
ಗ್ರಾಮೀಣ ಬಾಗದಲ್ಲಿನ  ನಮ್ಮಂತ ಚಿಕ್ಕ ಪುಟ್ಟ ಕಲಾವಿದರ ಭಜನಾ ಸೇವೆಯನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡಿರುವುದು ತುಂಬಾ ಸಂತಸವನ್ನುಂಟು ಮಾಡಿದೆ. ಇದರಿಂದ ಮತ್ತಷ್ಟು ಉತ್ಸುಕತೆಯಿಂದ ಜಾನಪದ ಕಲೆಯಾದ ಭಜನಾ ಸೇವೆ ಮಾಡಲು ಪ್ರೇರಣೆ ಸಿಕ್ಕಿದೆ, ಯಾವುದೇ ಕಾರಣಕ್ಕೂ ಇದರಿಂದ ಹೊರಗುಳಿಯುದಿಲ್ಲ.
::::: ಶಿವಲಿಂಗ ಮುನ್ಯಾಳ::::::
ಭಜನಾ ಕಲಾವಿದ, ಡಾಕ್ಟರೇಟ್ ಪದವಿ ಪುರಸ್ಕೃತ

ವರದಿ : ಸಂತೋಷ ಮುಗಳಿ

Leave a Comment

Your email address will not be published. Required fields are marked *

error: Content is protected !!