ಶಿವಾಪೂರ(ಹ) ಸರಕಾರಿ ಪ್ರೌಢ ಶಾಲೆಯ ಬಾಲಕಿಯರ ಖೋ ಖೋ
ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ.

Share the Post Now


ಹಳ್ಳೂರ .

ಸಮೀಪದ ಶಿವಾಪೂರ(ಹ) ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಮೂಡಲಗಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಖೋ ಖೋ ತಂಡ
ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದಲ್ಲಿ ಕೌಜಲಗಿ ಶಾಲೆಯ ವಿದ್ಯಾರ್ಥಿಗಳು ವಿಜೇತ ರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾರಂಭದಲ್ಲಿ ನೆಡೆದ ತಾಲೂಕಾ ಮಟ್ಟದ ಕ್ರೀಡಾ ಕೂಟದ ಉದ್ಘಾಟನಾ ಸಮಾರಂಭಕ್ಕೆ ಅತಿಥಿಗಳಾಗಿ ಆಗಮಿಸಿದ್ದ ಮೂಡಲಗಿಯ ಮಂಜುನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನ್ಯಾಯವಾದಿ ಎಲ್ ವಾಯ ಅಡಿಹುಡಿ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆಟೊಟಗಳಲ್ಲಿ ಪಾಲ್ಗೊಂಡು ತಮ್ಮ ಜೀವನ ರೂಪಿಸಿಕೊಳ್ಳಬೇಕೇಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಜಿತ್ ಮನ್ನಿಕೇರಿ ಬಾಗವಹಿಸಿ ಮಾತನಾಡಿದರು.ಅತಿಥಿಗಳಾಗಿ ಜೆ ಜೆ ಆಸ್ಪತ್ರೆ ನಿರ್ದೇಶಕರಾದ ಎಸ್.ಎಸ್ ಪಾಟೀಲ.ಎಸ್ ಡಿ ಎಂ ಸಿ ಅಧ್ಯಕ್ಷ ಎಸ್ ಬಿ ರಡ್ಡೇರಟ್ಟಿ,ಮುಖ್ಯೋಪಾಧ್ಯಾಯ ಜೆ ಜೆ ಬಸ್ಮೇ ಎಸ್.ವಾಯ ಜುಂಜರವಾಡ.ಆರ್ ಎಂ ತೆಲಸಂಗ.ಕೆ.ಬಿ ಮುಧೋಳ. ಕೆ. ಜಿ ಮುಧೋಳ.ಎಸ್.ಡಿ ಪಾಟೀಲ.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಮನವ್ವ ಗಿಡ್ಡವ್ವಗೋಳ.ಹಾಗೂ ಎಸ್ ಡಿ ಎಂ ಸಿ ಸದಸ್ಯರು, ಶಾಲಾ ಶಿಕ್ಷಕರು ಸಿಬ್ಬಂದಿ ವರ್ಗದವರು, ಕ್ರೀಡಾಭಿಮಾನಿಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕ್ರೀಡಾಪಟುಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ಸ್ವಾಗತವನ್ನು ಎಸ್ ಸಿ ಆರಗಿ.ವಂದನಾರ್ಪನೇ ಸಂತೋಷ ಪಾಟೀಲ.ನಿರುಪನೆ ಎಚ್.ಬಿ ಸುಳ್ಳನವರ.ಪ್ರತಿಜ್ಞೆ ವಿಧಿಯನ್ನು ಕೆ ಎಚ್ ಪಾಟೀಲ ಮಾಡಿದರು.

Leave a Comment

Your email address will not be published. Required fields are marked *

error: Content is protected !!