ಬೆಳಗಾವಿ
ವರದಿ :ಸಚಿನ ಕಾಂಬ್ಳೆ
ಸಪ್ತಸಾಗರ ಗ್ರಾಮದ ಶಾರದಾ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಯ, ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಂಯುಕ್ತಾಶ್ರಯದಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿಯನ್ನು ಆಚರಿಸಲಾಯಿತು.
ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ, ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ.ಬಿ.ನದಾಫ ರವರು ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.
ಸಂಸ್ಥೆಯ ನಿರ್ದೇಶಕರಾದ ಶ್ರೀ ಸುರೇಶ ಸವದಿ, ಮುಖ್ಯೋಪಾಧ್ಯಾಯರಾದ ಶ್ರೀ ಮುಕುಂದ ತೀರ್ಥ, ಶಿಕ್ಷಕರಾದ ಶ್ರೀ ಸುಲ್ತಾನ ಕೋರ್ಬು, ಶ್ರೀ ಸಿದ್ದು ಕುಡಚಿಯವರು ಉಪಸ್ಥಿತರಿದ್ದರು.