ಮುದ್ದೇಬಿಹಾಳ: ತಾಲೂಕಿನ ಕೇಸಾಪೂರದ ಸಿದ್ದಾರ್ಥ ಪಬ್ಲಿಕ್ ಸ್ಕೂಲ್ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಕು. ಶ್ರೇಯಾ ತಳವಾರ ಭಾಷಣ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಮಕ್ಕಳ ದಿನಾಚರಣೆಯ ಅಂಗವಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಮುದ್ದೇಬಿಹಾಳ ಕಚೇರಿಯ ವತಿಯಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯ ಪ್ರಾಥಮಿಕ ವಿಭಾಗದಲ್ಲಿ ಶ್ರೇಯಾ ತಳವಾರ ಪ್ರಥಮ ಸ್ಥಾನ ಪಡೆದು, ಜಿಲ್ಲಾ ಮಟ್ಟದ ಸ್ಪರ್ಧೆಗೆ ಪ್ರವೇಶ ಪಡೆದಿದ್ದಾಳೆ.
ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಖಾನಾಪೂರ, ಕಾರ್ಯದರ್ಶಿ ರಾಮಣ್ಣ ಖಾನಾಪೂರ, ಆಡಳಿತಾಧಿಕಾರಿಗಳು ಆರ. ಸಿದ್ದಾರ್ಥ, ಗೌತಮ್ ಹಾಗೂ ಪ್ರಾಂಶುಪಾಲ ಮಾರುತಿ ರುದ್ರಾಪೂರ ಅವರು ಶ್ರೇಯಾಳಿಗೆ ಹಾರ್ದಿಕ ಅಭಿನಂದನೆ ಸಲ್ಲಿಸಿದ್ದಾರೆ.





