ವರದಿ: ಸಂಗಮೇಶ ಹಿರೇಮಠ.
ಮುಗಳಖೋಡ: ಸಮೀಪದ
ಖಣದಾಳ ಗ್ರಾಮದ ಶ್ರೀ ಹುಲಿಕಾಂತೇಶ್ವರ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು.
ಮಠದ ಸ್ವಾಮೀಜಿಗಳು, ಗ್ರಾಮದ ಹಿರಿಯರು, ಮುಖಂಡರು ಸೇರಿಕೊಂಡು ಶ್ರೀಮಠದಲ್ಲಿ ಶ್ರೀ ಕೃಷ್ಣನ ಕುರಿತು ಭಜನೆ, ಕೀರ್ತನೆ ಮಾಡುತ್ತಾ, ಮುತ್ತೈದೆಯರು ಕೃಷ್ಣನ ಮೂರ್ತಿ ಇಟ್ಟ ತೊಟ್ಟಿಲು ತೂಗುತ್ತಾ ಜೋಗುಳ ಹಾಡಿ ಶ್ರೀ ಕೃಷ್ಣಾ ಎಂದು ಹೆಸರಿಟ್ಟು ಅದ್ದೂರಿಯಾಗಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಿದರು.
ಶ್ರೀಮತಿ ಶ್ರದ್ಧಾ ಸಂಗಮೇಶ ಹಿರೇಮಠ ಹಾಗೂ ರಾಚಯ್ಯಾ ಹಿರೇಮಠ ಶ್ರೀ ಕೃಷ್ಣನ ಜೀವನದ ಮಹಿಮೆಯನ್ನು ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ಸ್ವಾಮೀಜಿಗಳಾದ ಈರಯ್ಯಾ ಹಿರೇಮಠ, ರಾಚಯ್ಯ ಹಿರೇಮಠ, ಶಿವಯ್ಯ ಹಿರೇಮಠ, ಶಿವಲಿಂಗಯ್ಯ ಹಿರೇಮಠ್, ಬಾಳಯ್ಯ ಹಿರೇಮಠ, ನಿಂಗಯ್ಯಾ ಹಿರೇಮಠ, ಸದಾ ಚಿಗರಿ, ಅಶೋಕ ಆಜೂರೆ, ಶ್ರೀಶೃಲ ಆಜೂರೆ, ರಾಮಕೃಷ್ಣ ದಳವಾಯಿ, ರಾಯಗೌಡ ಪಾಟೀಲ, ಸುಬಣ್ಣಾ ನಲವಾಡಿ ಸೇರಿದಂತೆ ಪಟ್ಟಣದ ಹಿರಿಯರು ಶ್ರೀಮಠದ ಸದ್ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸಂಗೀತಾ ನಿರಪಾದಯ್ಯಾ ಹಿರೇಮಠ ದಂಪತಿಗಳು ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.