ವರದಿ :ಶಶಿಧರ ಕೊಕಟನೂರ
ಬೆಳಗಾವಿ :ರಾಯಬಾಗ ತಾಲೂಕೀನ ಹಾರೂಗೇರಿ ಪಟ್ಟಣದ ಎಸ್ ಬಿ ದರೂರ ಸಿ ಬಿ ಎಸ್ ಸಿ ಸೆಂಟ್ರಲ್ ಶಾಲೆಯ ಸಭಾಂಗಣದಲ್ಲಿ ಯಧು ವಂಶ ಕುಲತಿಲಕ, ಬೆಣ್ಣೆ ಕಳ್ಳ,ಯಶೋಧೆಯ ಪ್ರೀತಿಯ ಕಂದಯ್ಯಾ, ಗೀತ ನಂದನ, ಬಲರಾಮನ ಪ್ರೀತಿಯ ಸಹೋದರ ,ಸುದಾಮನ ನೆಚ್ಚಿನ ಗೆಳೆಯ, ಅರ್ಜುನನ ರಥದ ಸಾರತಿ, ಮಹಾಭಾರತದ ಸೂತ್ರಧಾರಿ ಶ್ರೀ ಕೃಷ್ಣ, ಶ್ರೀಕೃಷ್ಣ ಜನ್ಮಾಷ್ಟಮಿಯನ್ನ ಅದ್ದೂರಿಯಿಂದ ಆಚರಿಸಲಾಯಿತು,
ಎಸ್ ಬಿ ದರೂರ ಸಿ ಬಿ ಎಸ್ ಸಿ ಸೆಂಟ್ರಲ್ ಶಾಲೆಯ ಎಲ್ಲ ಗುರುಮಾತೆಯರು ರಾಧಾ-ಕೃಷ್ಣನ ಮೂರ್ತಿಗೆ ಪೂಜೆ ನೆರವೇರಿಸಿದರು.ನಂತರ ಸಾಹಿತಿಗಳಾದ, ಆಡಳಿತಾಧಿಕಾರಿಗಳಾದ ಡಾ.ವ್ಹಿ.ಎಸ್. ಮಾಳಿಯವರು ರಾಧಾಕೃಷ್ಣ ಮೂರ್ತಿಗಳಿಗೆ ಪುಷ್ಪಾರ್ಚನೆ, ಆರತಿ ಮಾಡುವ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು , ಕಾರ್ಯಕ್ರಮದಲ್ಲಿ ಎರಡನೂರಕ್ಕು ಹೆಚ್ವು ಮುದ್ದು ಪುಟಾಣಿಗಳು ಶ್ರೀಕೃಷ್ಣ, ರಾಧೆಯ ವೇಶಭೂಷಣ ತೊಟ್ಟು,ಭಕ್ತಿ ಹಾಡುಗಳಿಗೆ ಹೆಜ್ಜೆ ಹಾಕುತ್ತಿದ್ದಂತೆ ಪಾಲಕರ ಮುಖದಲ್ಲಿ ಸಂತೋಷದ ನಗೆಬೀರಿತು.
ರಾಧಾ-ಕೃಷ್ಣ ವೇಷಧಾರಿ ಮುದ್ದು ಪುಟಾಣಿಗಳು ನೃತ್ಯ ಮುಗಿಸಿ ವೇದಿಕೆಯಿಂದ ಇಳಿದು ನಾವು ಯಾರಿಗೂ ಕಮ್ಮಿ ಇಲ್ಲಾ ಎಂಬಂತೆ ಮಕ್ಕಳು ರ್ಯಂಪ್ ವಾಕ್ ಮಾಡವುದರ ಮೂಲಕ ನೋಡುಗರ ಗಮನ ಸೆಳೆದರಲ್ಲದೆ, ಶಾಲೆಯ ಪುಟಾಣಿ ಮಕ್ಕಳು ನೃತ್ಯ ಮಾಡುವುದನ್ನ ನೋಡಿ ಸೇರಿದ ಜನಸಾಗರ ದೇವಲೋಕದಿಂದ ಆ ರಾಧಾ-ಕೃಷ್ಣರು ಇಲ್ಲಿ ಬಂದು ನೃತ್ಯ ಮಾಡುತ್ತಿದ್ದಾರೆ ಎಂಬ ಭಾವನೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮಕ್ಕಳು ಕೃಷ್ಣ ರಾಧೆಯರಾಗಿ ಆಗಮಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಗಿರೀಶ ದರೂರ ಮಕ್ಕಳಿಗೆ ಶುಭಾಷಯದೊಂದಿಗೆ ಅಭಿನಂದಿಸಿದರು.ಶಾಲೆಯ ಮುಖ್ಯೋಪಾಧ್ಯಾಯರಾದ ದತ್ತಾತ್ರೆಯ ಮುನಸೆ ,ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಆರ್ ಎ ಭಾವಿ,ರಜಾಕ ಒತ್ತನಾಳ,ಅಭಿಶೇಕ ದರೂರ,ಶ್ರೀದೇವಿ ಪತ್ತಾರ,ಕವಿತಾ ಸೊಂಡುರ,ಪ್ರಿಯಾ ಚೂರಿ,ಕವಿತಾ ರಾವಳ,ಸುಧಾ ಬಡಿಗೇರ,ಸುಹಾಸಿನಿ ಕೋಳಿಗುಡ್ಡ,ಭಾರತಿ ಕಟಕಬಾವಿ,ಲಕ್ಷ್ಮೀ ಗಚ್ಚಿ, ಜಯಶ್ರೀ ಕಲ್ಲೂರ ಇನ್ನೂ ಹಲವಾರು ಗುರುಮಾತೆಯರು, ಶಿಕ್ಷಕರು ವಿದ್ಯಾರ್ಥಿ/ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.