ಹಳ್ಳೂರ
ಗ್ರಾಮದಲ್ಲಿರುವ ಹಳ್ಳೂರ ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವವು ಜರುಗಿ 2023 ಮೇ 22 ರಿಂದ ಜಾತ್ರೆ ಪ್ರಾರಂಭವಾಗಿ 13 ದಿನಗಳ ಕಾಲ ಅತೀ ವಿಜೃಂಭಣೆಯಿಂದ ನಡೆದಿದೆ.ಜಾತ್ರೆ ಪ್ರಯುಕ್ತ ಹಿಂದಿನ ಸಾಂಪ್ರದಾಯ ಪದ್ಧತಿಯಂತೆ ಜಾತ್ರೆಗೆ ಮುಂಚೆ ಕಾಯಿ ಹಿಡಿದಿದ್ದು ದಿ,02 ಗುರುವಾರ ದಿನಕ್ಕೆ ಒಂದು ವರ್ಷ ಕಳೆದಿದೆ ಆದಕಾರಣ ಬುಧವಾರದಂದು ಜೈ ಹನುಮಾನ್ ದೇವಸ್ಥಾನದಲ್ಲಿ ಹಳ್ಳೂರ , ಕಪ್ಪಲಗುದ್ಧಿ, ಶಿವಾಪೂರ ಗ್ರಾಮದ ಗುರು ಹಿರಿಯರು ಸಭೆ ಸೇರಿ ಹಿಂದಿನ ಕಾಲದ ಪದ್ಧತಿಯಂತೆ ಕೆಲವು ಆಚರಣೆಗಳ ಬಗ್ಗೆ ಚರ್ಚೆ ನಡೆಸಿ ಗುರುವಾರ ದಿ 02.5.2024 ರಿಂದ 2.5.2025ರ ವರೆಗೆ ಮೂರೂರು ಗ್ರಾಮದ ಗಂಡು ಮಕ್ಕಳ ಮದುವೆ ಮಾಡುವಂತಿಲ್ಲ, ಶ್ರೀ ಮಹಾಲಕ್ಷ್ಮೀ ದೇವರ ಪಲ್ಲಕ್ಕಿಯನ್ನು ಸಭೆ ಸಮಾರಂಭಗಳಿಗೆ ದೇವಸ್ಥಾನದಿಂದ ಹೊರಗೆ ಹೋಗುವದಿಲ್ಲ .ದೇವಸ್ಥಾನದಲ್ಲಿ ದೇವರಿಗೆ ಉಡಿ ತುಂಬಬಹುದು.ಮೂರೂರು ಹೆಣ್ಣು ಮಕ್ಕಳನ್ನೂ ಬೇರೆ ಊರಿಗೆ ಕೊಟ್ಟು ಮದುವೆ ಮಾಡಬಹುದು ಮುರುರಲ್ಲಿ ಹೆಣ್ಮಕ್ಕಳನನ್ನ ಕೊಟ್ಟು ಮದುವೆ ಮಾಡಬಾರದು. ಹೊಸ ಮನೆ ಅಡಿ ಪಾಯ ಹಾಕುವುದಿಲ್ಲ. ಈ ಎಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹಿರಿಯರು ಹೇಳಿದರು.ಮನೆ ವಾಸ್ತು ಶಾಂತಿ, ಸೀಮಂತ ಕಾರ್ಯಕ್ರಮ ಮಾಡಬಹುದು. ಈ ಸಮಯದಲ್ಲಿ ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಗುರು ಹಿರಿಯರಿದ್ದರು.