ಶ್ರೀ ಸಿದ್ಧಾರೂಢ ಪರಮಾರ್ಥಿಕ ಮಹೋತ್ಸವದ ಕಾರ್ಯಕ್ರಮ ಜರುಗಿತು

Share the Post Now

ಹಳ್ಳೂರ ಆಸ್ತಿ ಅದಿಕಾರ ನಮ್ಮ ಜೊತೆ ಬೆನ್ನು ಹತ್ತಿ ಬರೋದಿಲ್ಲ ಕಷ್ಟ ಕಾಲದಲ್ಲಿ ಸಹಾಯ ಮಾಡೋದಿಲ್ಲ ಸತ್ಯ ಧರ್ಮ ನಮ್ಮಲ್ಲಿದ್ದರೆ ದೇವರು ಸದಾಕಾಲ ರಕ್ಷಣೆ ಮಾಡುವನು ಬೇರೊಬ್ಬರ ಮನಸ್ಸು ನೋಯಿಸದೆ ಹೀನ ಕೃತ್ಯ ಮಾಡದೆ ಒಳ್ಳೆಯ ಕೆಲಸ ಕಾರ್ಯ ಮಾಡುತ್ತಾ ಜೀವನ ಸಾಗಿಸಿದರೆ ಮಾನವ ಜನ್ಮ ಸಾರ್ಥಕವಾಗುವುದು ಎಂದು ಪ್ರಣವಾನಂದ ಮಹಾಸ್ವಾಮಿಗಳು ಹೇಳಿದರು.                           

                          ಅವರು ಗ್ರಾಮದಲ್ಲಿ ನಡೆದ ಶ್ರೀ ಸಿದ್ಧಾರೂಢ ಪರಮಾರ್ಥಿಕ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಜೀವನದಲ್ಲಿ ಕಷ್ಟ ಕಾರ್ಪಣ್ಯಗಳು ಬಂದರು ಸಾವು ನೋವಿಗೂ ಹೆದರದೆ ಧೈರ್ಯದಿಂದ ಎದುರಿಸಿದಾಗ ಜೀವನಕ್ಕೆ ಒಂದು ಬೆಲೆ ಬರುತ್ತದೆ. ಜನರ ಕಣ್ಣು ತಪ್ಪಿಸಿ ಕೆಟ್ಟ ಕೆಲಸ ಮಾಡಿದರು ದೇವರ ದೃಷ್ಟಿಯಲ್ಲಿ ತಪ್ಪಿಸಲು ಸಾಧ್ಯವಿಲ್ಲ ಪಾಪ ಪುಣ್ಯದ ಫಲವು ಶೀಘ್ರವಾಗಿ ಲಭಿಸುತ್ತದೆ. ಶಾಂತಿ ನೆಮ್ಮದಿಯು ಅಧಿಕಾರದಲ್ಲಿ ಶಾಂತಿ ಸಿಗೋದಿಲ್ಲ ಆತ್ಮ ಜ್ಞಾನ ಮಾಡಿಕೊಂಡರೆ ಮಾತ್ರ ಶಾಂತಿ ಸಿಗುತ್ತದೆ. ಶತ್ರುಗಳ ವಿರುದ್ಧ ವಾದ ಮಾಡಿ ತಲೆ ತಗೆಯುವ ಬದಲು ತಲೆಯಿಂದ ತಗೆದರೆ ಒಳ್ಳೆಯದಾಗುತ್ತದೆ ಎಂದು ಹೇಳಿದರು.                                                

     ಭಿಮಾನಂದ ಮಹಾಸ್ವಾಮಿಗಳು ಮಾತನಾಡಿ ಅಜ್ಞಾನಿಗೆ ಹೆಣ್ಣು ಹೊನ್ನು ಮಣ್ಣು ಇದರ ಬೆನ್ನು ಹತ್ತಿದವರಿಗೆ ಶಾಂತಿ ಸಿಗದೆ ಅಶಾಂತಿ ಸಿಗುತ್ತದೆ. ಸಂಶಯ ಉಳ್ಳವನಿಗೆ ಸುಖ ಸಿಗುವದಿಲ್ಲ ಆಚರಣೆ ಧರ್ಮ ಕೇಳಿದರೆ ಸಾಲದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಗುರುವಿಲ್ಲದೇ ಮುಕ್ತಿ ದೊರೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಈ ಸಮಯದಲ್ಲಿ ಶಿವಾನಂದ ಮಹಾಸ್ವಾಮಿಗಳು. ಸತ್ಯಪ್ಪ ಶರಣರು. ಶ್ರೀ ಸಿದ್ಧಾರೂಢ ಭಜನಾ ಮಂಡಳಿಯವರು ಕಾರ್ಯಕರ್ತರು ಹಾಗೂ ಗ್ರಾಮದ ಗುರು ಹಿರಿಯರಿದ್ದರು ಸರ್ವರಿಗೂ ಮಹಾಪ್ರಸಾದ ವ್ಯವಸ್ಥೆ ನಡೆಯಿತು.

Leave a Comment

Your email address will not be published. Required fields are marked *

error: Content is protected !!